ಉಡುಪಿ: ಕಳೆದ ಎರಡು ದಿನಗಳಿಂದ ಕಾಡುತ್ತಿದ್ದ ಅನಾರೋಗ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಕಾರ್ಕಳ ತೆಳ್ಳಾರಿನ ಮೋಡೆ ಹೆಸರಿನ ಕಂಬಳದ ಕೋಣ ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಮೃತಪಟ್ಟಿದೆ.
ಕಂಬಳದಲ್ಲಿ ಗಣನೀಯ ಸಾಧನೆಗೈದಿದ್ದ ಮೋಡೆ ಹಗ್ಗ ಹಿರಿಯ, ಕಿರಿಯ, ನೇಗಿಲು ಹಿರಿಯ, ಕಿರಿಯ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿತ್ತು. ಅಡ್ಡ ಹಲಗೆಯಲ್ಲಿ ಪ್ರತೀ ಬಾರಿಯೂ ಸರಣಿ ಪ್ರಶಸ್ತಿ ಗೆಲ್ಲುವ ಮೂಲಕ ಕಂಬಳ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿತ್ತು. ಪ್ರಸ್ತುತ ಮಂಗಳೂರಿನ ಬೋಳಾರದ ತ್ರಿಶಲ್ ಕೆ. ಪೂಜಾರಿ ಮಾಲಕತ್ವದಲ್ಲಿ ಕಂಬಳದಲ್ಲಿ ಭಾಗವಹಿಸುತ್ತಿತ್ತು.
ಕಾರ್ಕಳ ತೆಳ್ಳಾರು ನೇರೋಳ್ಳಪಲ್ಕೆ ಬರ್ಕೆ ಮನೆಯ ಕೋಣ ಇದಾಗಿದ್ದರಿಂದ ದುರ್ಗ-ತೆಳ್ಳಾರು ಹೆಸರು ಕಂಬಳ ಕ್ಷೇತ್ರದಲ್ಲಿ ಜನಪ್ರಿಯವಾಗಿತ್ತು. ಕೋಣದ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹಲವರು ಮೋಡೆ ಫೋಟೋ ವನ್ನು ಜಾಲತಾಣದಲ್ಲಿ ಶೇರ್ ಮಾಡುವ ಹಾಗೂ ಸ್ಟೇಟಸ್ ಹಾಕಿಕೊಳ್ಳುವ ಮೂಲಕ ಶೃದ್ದಾಂಜಲಿ ಸಮರ್ಪಿಸಿದ್ದಾರೆ.
Comments are closed.