ಕುಂದಾಪುರ: ಇಲ್ಲಿನ ಗಾಂಧಿಮೈದಾನದಲ್ಲಿ ಟಿ.ಸಿ.ಎ ಉಡುಪಿ ಆಶ್ರಯದಲ್ಲಿ ಉಡುಪಿ-ದ.ಕ ಜಿಲ್ಲಾ ಶಾಲಾ ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.
ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ಪ್ರಶಾಂತ್ ಕುಂದರ್, ಮನುಷ್ಯನ ಜೀವನದಲ್ಲಿ ಕ್ರೀಡೆಯೂ ಪ್ರಮುಖ ವಿಚಾರ. ಈ ನಿಟ್ಟಿನಲ್ಲಿ ಅಳಿವಿನಂಚಿನಲ್ಲಿರುವ ಟೆನಿಸ್ ಬಾಲ್ ಕ್ರಿಕೆಟ್ ಉಳಿಸುವ ಟಿ.ಸಿ.ಎ ಪ್ರಯತ್ನ ಶ್ಲಾಘನೀಯ ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಟಿ.ಸಿ.ಎ ಅಧ್ಯಕ್ಷ ಗೌತಮ್ ಶೆಟ್ಟಿ, ಅಂತರಾಷ್ಟ್ರೀಯ ಆಟಗಾರರೂ ಕೂಡ ತಮ್ಮ ಕ್ರೀಡಾ ಜೀವನವನ್ನು ಟೆನಿಸ್ಬಾಲ್ ಕ್ರಿಕೆಟ್ ನಿಂದ ಪ್ರಾರಂಭಿಸಿದ್ದು, ಲೆದರ್ ಬಾಲ್ ಕ್ರಿಕೆಟ್ ಕೆಲವೇ ಕೆಲವು ಅಕಾಡೆಮಿ ಹಾಗೂ ವಿದ್ಯಾಸಂಸ್ಥೆಗಳಿಗೆ ಸೀಮಿತವಾಗಿದೆ ಆದ್ದರಿಂದ ಉಡುಪಿ-ದ.ಕ ಜಿಲ್ಲಾ ವಿದ್ಯಾಸಂಸ್ಥೆಗಳಿಗೆ ಮುಕ್ತ ಆಹ್ವಾನ ನೀಡಿದ್ದು 64 ವಿದ್ಯಾಸಂಸ್ಥೆಗಳು ಈ ಟೂರ್ನಮೆಂಟ್ ನ ಭಾಗವಾಗಲಿವೆ. ಮುಂದಿನ ದಿನಗಳಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಪ್ರತಿಭೆಗಳಿಗೂ ಭವಿಷ್ಯದಲ್ಲಿ ಕ್ರೀಡಾಜೀವನಕ್ಕೆ ಸಹಕಾರ ನೀಡಲಿದ್ದೇವೆ ಎಂದರು.
ಈ ಸಂದರ್ಭ ವೇದಿಕೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ರೋಶನ್ ಕುಮಾರ್ ಶೆಟ್ಟಿ, ಉದ್ಯಮಿ
ಚಿತ್ತರಂಜನ್ ಹೆಗ್ಡೆ ಹರ್ಕೂರು, ರಮೇಶ್ ಶೆಟ್ಟಿ, ಕುಸುಮಾಕರ್ ಶೆಟ್ಟಿ, ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ, ಯಾದವ್ ನಾಯಕ್ ಕೆಮ್ಮಣ್ಣು, ಸದಾನಂದ ಶಿರ್ವ, ನಾರಾಯಣ ಶೆಟ್ಟಿ ಮಾರ್ಕೋಡು, ಶಂಕರ್ ಅಂಕದಕಟ್ಟೆ, ಸುಧೀರ್.ಕೆ.ಎಸ್, ಚೇತನ್ ಕುಮಾರ್ ದೇವಾಡಿಗ, ಕೋಟ ರಾಮಕೃಷ್ಣ ಆಚಾರ್ ಸ್ಪೋರ್ಟ್ಸ್ ಕನ್ನಡ, ಶಿವನಾರಾಯಣ ಐತಾಳ್ ಕೋಟ, ಟಿ.ಸಿ.ಎ ಪದಾಧಿಕಾರಿಗಳು ಮತ್ತು ಸದಸ್ಯರು, ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Comments are closed.