ಕರಾವಳಿ

ಮಾಲ್ಡೀವ್ಸ್ ಅಧಿಕಾರಿಗಳಿಂದ ಭಾರತ ವಿರೋಧಿ ಹೇಳಿಕೆ: ಉಡುಪಿಯ ತ್ರಾಸಿ-ಮರವಂತೆ ಬೀಚ್ ಚಿತ್ರ ಶೇರ್ ಮಾಡಿ ಸೆಹ್ವಾಗ್ ಪ್ರತಿಕ್ರಿಯೆ

Pinterest LinkedIn Tumblr

ಬೆಂಗಳೂರು: ಮಾಲ್ಡೀವ್ಸ್ ಸರ್ಕಾರದ ಅಧಿಕಾರಿಗಳಿಂದ ಭಾರತ ವಿರೋಧಿ ಹೇಳಿಕೆ ವಿರುದ್ಧ ಭಾರತದ ಕ್ರಿಕೆಟ್ ಹಾಗೂ ಬಾಲಿವುಡ್ ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಸಾಮಾಜಿಕ ಜಾಲತಾಣದಲ್ಲಿ, ಭಾರತ ಮತ್ತು ಪ್ರಧಾನಿ ಮೋದಿ ವಿರುದ್ಧ ಅನಗತ್ಯ ಹೇಳಿಕೆ ವಿರುದ್ಧ ಉಡುಪಿ, ಅಂಡಮಾನ್ ಬೀಚ್ ಮತ್ತಿತರ ಸುಂದರ ಬೀಚ್ ಗಳ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಉಡುಪಿಯ ಮರವಂತೆ, ಪೊಂಡಿಯ ಪ್ಯಾರಡೈಸ್, ಅಂಡಮಾನ್‌ನ ನೀಲ್ ಮತ್ತು ಹ್ಯಾವ್‌ಲಾಕ್ ಬೀಚ್ ಗಳ ಫೋಟೋಗಳನ್ನು ಹಂಚಿಕೊಂಡಿರುವ ಸೆಹ್ವಾಗ್, ದೇಶದಲ್ಲಿ ಅನ್ವೇಷಿಸದ ಹಲವಾರು ಸ್ಥಳಗಳಿದ್ದು, ಮೂಲಸೌಕರ್ಯ ಒದಗಿಸುವುದರೊಂದಿಗೆ ಅವುಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಸ್ವದೇಶಿ ಬೀಚ್ ಗಳ ಅಭಿವೃದ್ಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯುತ್ತಿದ್ದು, ಸಚಿನ್ ತೆಂಡೊಲ್ಕರ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಮತ್ತಿತರರು ಕೈ ಜೋಡಿಸಿದ್ದಾರೆ.

ವಿರೇಂದ್ರ ಸೆಹ್ವಾಗ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಇದು ತುಂಬಾ ಪ್ರಸ್ತುತವಾಗಿದೆ ಮತ್ತು ನಮ್ಮದೇ ಅತ್ಯಂತ ಉತ್ತಮವಾಗಿದೆ. ಲಕ್ಷದ್ವೀಪ ಮತ್ತು ಅಂಡಮಾನ್‌ಗಳಿಗೆ ಹೋಗಿದ್ದು, ಅವುಗಳು ಆಶ್ಚರ್ಯಕರವಾದ ಸುಂದರವಾದ ಸ್ಥಳಗಳಾಗಿವೆ. ಬೆರಗುಗೊಳಿಸುವ ಕಡಲತೀರಗಳು ಮತ್ತು ನೀರೊಳಗಿನ ಅನುಭವ ನಂಬಲಾಗದ್ದು ಎಂದಿದ್ದಾರೆ.

Comments are closed.