ಉಡುಪಿ: ಜಿಲ್ಲೆಯ ವಿವಿದೆಡೆ ಕಲ್ಲಂಗಡಿ ಹಾಗೂ ಅನಾನಸ್ ಬೆಳೆಯನ್ನು ರೈತರು ಬೆಳೆದಿದ್ದು ಕಟಾವಿಗೆ ಬಂದಿದೆ. ಹವಮಾನ ವೈಪರಿತ್ಯದಿಂದ ಕೆಲ ಕಡೆ ಬೆಳೆ ಹಾನಿಯಾಗಿದ್ದು ಅದಕ್ಕೆ ಪರಿಹಾರದ ವಿಚಾರದಲ್ಲಿ ಸೂಕ್ತ ಕ್ರಮ ವಹಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಬೆಳೆಗಾರರ ಸಮಸ್ಯೆ ಬಗ್ಗೆ ‘ಕನ್ನಡಿಗವರ್ಲ್ಡ್’ ಜೊತೆ ಮಾತನಾಡಿದ ಅವರು, ಕಲ್ಲಂಗಡಿ ಮಾರಾಟಕ್ಕೆ ಸಂಬಂಧಿಸಿದಂತೆ ನಾನು ಈಗಾಗಾಲೇ ತೋಟಗಾರಿಕೆ ಇಲಾಖೆ ಜಿಲ್ಲಾ ಉಪನಿರ್ದೇಶಕರಿಗೆ (ಡಿಡಿ) ಹಾಗೂ ಜಿಲ್ಲಾ ಎಸ್ಪಿ ಅವರಿಗೆ ಮಾತನಾಡಿದ್ದು ಹಣ್ಣುಗಳು ರಸ್ತೆ ಬದಿಯೂ ಮಾರಾಟಕ್ಕೆ ಯಾವುದೇ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಬೆಳೆ ಹಾನಿ ವರದಿ ಪಡೆದು ಸೂಕ್ತ ಪರಿಹಾರ ನೀಡಲು ಕೂಡ ಡಿಡಿ ಅವರಿಗೆ ಸೂಚಿಸಲಾಗಿದೆ. ಹಾಪ್ ಕಾಮ್ಸ್ ಮೂಲಕ ಖರೀದಿಗೆ ವ್ಯವಸ್ಥೆಯಿದೆಯೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಮಾರಾಟಕ್ಕೆ ಸೂಕ್ತವಾದ ಕಲ್ಲಂಗಡಿ ಬೆಳೆ ಮಾರಾಟ ಮಾಡುವರು ಡಿಡಿ ಅವರನ್ನು ಸಂಪರ್ಕಿಸದಲ್ಲಿ ಮಾರುಕಟ್ಟೆ ಬೆಲೆ ನೀಡಿ ಖರೀದಿಸಲು ಸೂಚನೆ ನೀಡಲಾಗುತ್ತದೆ.
ಕಲ್ಲಂಗಡಿ ಹಾಗೂ ಅನಾನಸ್ ಹಣ್ಣನ್ನು ತಳ್ಳು ಗಾಡಿಯಲ್ಲಿ ಮಾರಾಟ ಮಾಡುವುದು ಕಷ್ಟವೆಂದು ಅರಿವಿದ್ದು ಗೂಡ್ಸ್ ವಾಹನದಲ್ಲಿ ಕೊಂಡುಹೋಗಿ ಮಾರಾಟ ಮಾಡಲು ಈಗಾಗಾಲೇ ಸೂಚನೆ ನೀಡಿದ್ದು ಪೊಲೀಸರು ಕೂಡ ಯಾವುದೇ ಸಮಸ್ಯೆ ನೀಡದಿರಲು ಎಸ್ಪಿ ಅವರಿಗೆ ಸೂಚಿಸಲಾಗಿದೆ ಎಂದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.