Condolences

ದಿ. ಶ್ರೀ ಎಂ.ಕೆ. ಹರಿಶ್ಚಂದ್ರ ಅವರ ಪತ್ನಿ, ನಿವೃತ ಶಿಕ್ಷಕಿ ಶ್ರೀಮತಿ ವಿಮಲಾ ಬಾಯಿ ಹರಿಶ್ಚಂದ್ರ ವಿಧಿವಶ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.30: ನಗರದ ಖ್ಯಾತ ಬೋಟ್ ಬಿಲ್ಡರ್ ಹಾಗೂ ಎಂಜಿನಿಯರ್, ಸಮಾಜ ಸೇವಕ, ಕೊಡುಗೈ ದಾನಿ, ದಿವಂಗತ ಶ್ರೀ ಎಂ.ಕೆ. ಹರಿಶ್ಚಂದ್ರ ಅವರ ಪತ್ನಿ ಶ್ರೀಮತಿ ವಿಮಲಾ ಬಾಯಿ ಹರಿಶ್ಚಂದ್ರ ( 83) ಇವರು ಸೆಪ್ಟಂಬರ್. 29, ಮಂಗಳವಾರದಂದು ಸಂಜೆ 4: 30 ಕ್ಕೆ ಮಂಗಳೂರಿನ ಶಕ್ತಿನಗರದ ಸ್ವಗೃಹದಲ್ಲಿ ನಿಧನ ಹೊಂದಿದ್ದರು.

ಮೃತರು ದುಬೈಯಲ್ಲಿ ನೆಲೆಸಿರುವ ಮಗಳು ಶ್ರೀಮತಿ ಶರ್ಮಿಳಾ ಶೇರಿಗಾರ್, ಪುತ್ರರಾದ ಉದಯ್, ನಂದಾ ಕಿಶೋರ್ ಹಾಗೂ ಕುಟುಂಬಸ್ಥರು ಸೇರಿದಂತೆ ಅಪಾರ ಬಂಧುಗಳನ್ನು ಆಗಲಿದ್ದಾರೆ.

ಮೃತರ ಪತಿ ನಗರದ ಖ್ಯಾತ ಬೋಟ್ ಬಿಲ್ಡರ್ ಹಾಗೂ ಎಂಜಿನಿಯರ್, ಖ್ಯಾತ ಸಮಾಜ ಸೇವಕ,ಕೊಡುಗೈ ದಾನಿ, ದೇವಾಡಿಗ ಸಮುದಾಯದ ಅತ್ಯಂತ ಪ್ರಭಾವಿ ವ್ಯಕ್ತಿ, ಮಂಗಳೂರಿನ ಶಕ್ತಿನಗರ ನಿವಾಸಿ ಶ್ರೀ ಎಂ.ಕೆ. ಹರಿಶ್ಚಂದ್ರ ಅವರು ( 85) ಇತ್ತೀಚಿಗಷ್ಟೇ ಅಂದರೆ ಸೆಪ್ಟಂಬರ್ 1ರಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ್ದರು.

ಶ್ರೀಮತಿ ವಿಮಲಾ ಬಾಯಿ ಹರಿಶ್ಚಂದ್ರ ಅವರು ನಗರದ ಜೆಪ್ಪು ಸಿರಿಯನ್ ಮಿಷನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 40 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತರಾಗಿದ್ದರು.

ಅತ್ಯಂತ ಸರಳ ಸಜ್ಜನಿಕೆಯೊಂದಿಗೆ ಸೌಜನ್ಯ ಸ್ವಭಾವದವರಾಗಿದ್ದರು. ಪ್ರಾಮಾಣಿಕ ಹಾಗೂ ಉದಾರ ಮನಸ್ಸಿನವರಾಗಿದ್ದ ಇವರು ತಮ್ಮ ಪತಿ 1973ರಲ್ಲಿ ಮಂಗಳೂರು ಬಂದರ್ ನಲ್ಲಿ ಸ್ಥಾಪಿಸಿದ ಮೆರೈನ್ ಕ್ರಾಪ್ಟ್ಸ್ ಎಂಡ್ ಇಕ್ವಿಪ್‌ಮೆಂಟ್ಸ್ ಸಂಸ್ಥೆಯ ಏಳಿಗೆಗೆ ಶ್ರಮಿಸುವ ಮೂಲಕ ತಮ್ಮ ಪತಿಯ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳಲ್ಲಿ ಬೆನ್ನೆಲುಭಾಗಿದ್ದರು.

ಅಗಲಿದ ಅವರ ಆತ್ಮಕ್ಕೆ ಸರ್ವಶಕ್ತನಾದ ಭಗವಂತನು ಚಿರ ಶಾಂತಿಯನ್ನು ಕರುಣಿಸಲೆಂದು ಪ್ರಾರ್ಥಿಸುವ ಮೂಲಕ ಮೃತರ ಸುಪುತ್ರಿ ಶ್ರೀಮತಿ ಶರ್ಮಿಳಾ ಶೇರಿಗಾರ್ ಅವರ ಪತಿ, ದುಬೈಯ ಖ್ಯಾತ ಉದ್ಯಮಿ, ಕನ್ನಡ ಹಾಗೂ ತುಳು ಚಿತ್ರ ನಿರ್ಮಾಪಕ, ದುಬಾಯಿಯ ಆಕ್ಮೆ (Acme Building Materials Trading LLC. (UAE and Oman) ಸಂಸ್ಥೆಯ ಸಂಸ್ಥಾಪಕ ಶ್ರೀ ಹರೀಶ್ ಶೇರಿಗಾರ್ ಮತ್ತು ಇವರ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.

ನಗರದ ಖ್ಯಾತ ಬೋಟ್ ಬಿಲ್ಡರ್ ಹಾಗೂ ಎಂಜಿನಿಯರ್, ಖ್ಯಾತ ಸಮಾಜ ಸೇವಕ,ಕೊಡುಗೈ ದಾನಿ, ದೇವಾಡಿಗ ಸಮುದಾಯದ ಅತ್ಯಂತ ಪ್ರಭಾವಿ ವ್ಯಕ್ತಿ ಶ್ರೀ ಎಂ.ಕೆ. ಹರಿಶ್ಚಂದ್ರ ಅವರು ವಿಧಿವಶ

Comments are closed.