Wellwishes

ಇಂಡಿಯನ್ ಪ್ರವಾಸಿ ಫೋರಂ ಮಸ್ಕತ್ ಒಮಾನ್ ವತಿಯಿಂದ ನಡೆದ “ಪೈಗಾಮೆ ರಸೂಲ್(ಸ.ಅ)”

Pinterest LinkedIn Tumblr

oman-2016-img-20161204-wa0222-002

ಇಂಡಿಯನ್ ಪ್ರವಾಸಿ ಫೋರಂ ಮಸ್ಕತ್-ಒಮಾನ್ ಇದರ ವತಿಯಿಂದ “ಪೈಗಾಮೆ ರಸೂಲ್(ಸ.ಅ)” ನಾಮದಡಿ ಪ್ರವಾದಿ ಮುಹಮ್ಮದ್ ಪೈಗಂಬರರ ಚರ್ಯೆಯನ್ನು ನೆನಪಿಸುವ ಕಾರ್ಯಕ್ರಮವು ದಿನಾಂಕ 02-12-2016ರಂದು ಕ್ರಿಸ್ಟಲ್ ಸೂಟ್ ವಾದಿಕಬೀರ್-ಮಸ್ಕತ್ ನಲ್ಲಿ ಬಹಳ ವಿಜೃಂಭಣೆಯಿಂದ  ನಡೆಯಿತು.

ಕಿರಾಅತ್’ನೊಂದಿಗೆ ಆರಂಭವಾದ ಮಕ್ಕಳ ಪ್ರತಿಭಾ ಸ್ಪರ್ದೆ ಕಾರ್ಯಕ್ರಮದಲ್ಲಿ ನಾತ್,ಆಟೋಟ,ಕಿರಾಅತ್ ಸ್ಪರ್ದೆಯನ್ನು ಏರ್ಪಡಿಸಿ ಮಕ್ಕಳ ಮನಸ್ಸಿನೊಂದಿಗೆ ಪೋಷಕರನ್ನೂ ಖುಷಿಪಡಿಸಿತು. ಹಳೆಯ ನೆನಪನ್ನು ಮರುಕಳಿಸಿ ನೆನಪಿಸುವ ಪರ್ವೇಝ್ ಕೃಷ್ಣಾಪುರ ಮತ್ತು ತಂಡದ ದಫ್ ಕಾರ್ಯಕ್ರಮವು ನೆರೆದ ಜನಸ್ತೋಮದ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

oman-2016-img_2682-012

oman-2016-img_2761-013

oman-2016-img_2840-014

oman-2016-img_20161204_155420-015

oman-2016-img-20161204-wa0219-001

oman-2016-img-20161204-wa0223-003

oman-2016-img-20161204-wa0226-004

oman-2016-img-20161204-wa0237-005

oman-2016-img-20161204-wa0238-006

oman-2016-img-20161204-wa0240-007

oman-2016-img-20161204-wa0241-008

oman-2016-img-20161204-wa0243-009

oman-2016-img-20161204-wa0245-010

oman-2016-img-20161204-wa0246-011

ಮುಖ್ಯ ಅತಿಥಿಯಾಗಿ ಮಾತನಾಡಿದ ರಾಶೀದ್ ಹುಸೈನ್ ಹೈದರಾಬಾದ್ ಪ್ರವಾದಿ ಸ.ಅ ರವರು ತನ್ನ ಬಾಲ್ಯ ಮತ್ತು ಯವ್ವನದಲ್ಲಿ ನಡೆದು ತಿಳಿಹೇಳಿದ ರೀತಿಯನ್ನು ಅವಲೋಕಿಸುತ್ತಾ ಅವರ ಚರ್ಯೆ,ನಡೆ ನುಡಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ತಮ್ಮ ಜೀವನದ ಗೆರೆಗಳಲ್ಲಿ ಯಶಸ್ಸು ಸಿಗಲು ಸಾಧ್ಯವೆಂದರು. ಅಲ್ಲದೆ ಅವರ ಅಂದಿನ ಕಾಲಘಟ್ಟದಲ್ಲಿ ಅನಾಗರಿಕ, ಅಂಧಕಾರದಲ್ಲಿ ಮುಳುಗಿದ ಕಠೋರ ವ್ಯಕ್ತಿತ್ವ ಮನಸ್ಸನ್ನು ಹೊಂದಿಕೊಂಡಂತಹ ಸಮಾಜವನ್ನು  ಸೌಮ್ಯ ಸ್ವಭಾವದಿಂದ ತನ್ನ ಜವಾಬ್ದಾರಿ ಅರಿತು ಮುಂದುವರಿದು ಆ ಕಠೋರ ಸಮಾಜದ ಮನಗಳನ್ನು ಪರಿವರ್ತಿಸುವಲ್ಲಿ ಸಫಲರಾಗಿದ್ದನ್ನು ನೈಜ ಚರಿತ್ರೆಯ ಚಿತ್ರಣದೊಂದಿಗೆ ನೆನಪಿಸಿದರು. ಆ ಸಮಯದಲ್ಲಿ ತನಗೆ ಎದುರಾದಂತಹ ಕಷ್ಟ, ಅಪಮಾನಗಳನ್ನು ಸಹಿಸಿದರೂ ತನ್ನ ಅನುಯಾಯಿಗಳಿಗೆ ಯಾವುದೇ ದೈಹಿಕ,ಮಾನಸಿಕ ಹಲ್ಲೆಯನ್ನು ಸಹಿಸದೆ ಅದನ್ನು ಎದುರಿಸುತ್ತಾ ತನ್ನ ಅನುಯಾಯಿಗಳನ್ನು ರಕ್ಷಿಸಿದ ರೀತಿಯು ಇಂದಿನ ಸಮಾಜವು ಬಯಸುತ್ತಿದೆ ಎಂಬ ಮಾತನ್ನು ಒತ್ತಿ ಹೇಳಿದರು.

ಮುಹಮ್ಮದ್ ಅನ್ವರ್ ಮೂಡಬಿದ್ರೆ ಯವರು ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಭಿನ್ನ ಭಿನ್ನವಾಗದೆ ಒಂದಾಗಿ ಒಗ್ಗಟ್ಟಿನೊಂದಿಗೆ ಸಾಗಿದರೆ ಪ್ರವಾದಿ ಸ.ಅ ರ ಚರ್ಯೆಯನ್ನು ಉಳಿಸಿಕೊಳ್ಳಲು ಸಾಧ್ಯವೆಂದರು. ಇಂದಿನ ಪರಿಸ್ಥಿತಿಯಲ್ಲಿ ಇಸ್ಲಾಮಿನ ಶರೀಅತ್ ನಲ್ಲಿ ಮೂಗು ತೂರಿಸುತ್ತಿರುವ ಒಂದು ಗುಂಪು ಆಳ್ವಿಕೆ ನಡೆಸುತ್ತಿರುವ ಸರಕಾರದೊಳಗೆ ನುಸುಳಿ ತಮ್ಮ ಮೊಂಡು ಧ್ಯೇಯದ ಯಶಸ್ಸನ್ನು ಸಲೀಸಾಗಿ ಕಾರ್ಯರೂಪಗೊಳಿಸುವ ವ್ಯರ್ಥ ಪ್ರಯತ್ನಕ್ಕೆ ಕೈ ಹಾಕಿ ಭಯದ ವಾತಾವರಣವನ್ನು ಸೃಷ್ಟಿಸುತ್ತಾ,ದೈನಂದಿನ ಜೀವನೋಪಾಯಕ್ಕೂ ಅಡ್ಡಿಯಾಗುತ್ತಿರುವ ರೀತಿಯನ್ನು ವಿವರಿಸಿ ಮುಂದೆ ಬರುವ ಅನಾಹುತಗಳನ್ನು ತಡೆಗಟ್ಟುವಲ್ಲಿ ಚರ್ಚಿಸುತ್ತಾ ಮುಂದಿನ ತಲೆಮಾರುಗಳಿಗೆ ಭಯಮುಕ್ತ ಸಮಾಜವನ್ನು ನಿರ್ಮಿಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಈ ಸಮಯದಲ್ಲಿ ತಮ್ಮ ಸಣ್ಣ ಪುಟ್ಟ ಅಕ್ಷರ ವ್ಯತ್ಯಾಸಗಳನ್ನು ಬದಿಗಿಟ್ಟು ತಮ್ಮ ನೈಜ ಧ್ಯೇಯಗಳನ್ನು ಉಳಿಸುಕೊಳ್ಳಲು ಒಗ್ಗಟ್ಟು ಪ್ರದರ್ಶಿಸಲೇಬೇಕಾಗಿದೆ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸೋಶಿಯಲ್ ಫೋರಂ ಕರ್ನಾಟಕ ಚಾಪ್ಟರ್ ಉಪಾಧ್ಯಕ್ಷರಾದ ಜನಾಬ್ ಸೈಯ್ಯದ್ ಮೊಹಿದೀನ್ ಸಾಹೇಬ್ ಸಾಸ್ತಾನ್,ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಒಮಾನ್ ಅಧ್ಯಕ್ಷರಾದ ಮೋನಬ್ಬ ಅಬ್ದುಲ್ ರಹಮಾನ್, ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಎಸೋಸಿಯೇಷನ್ ಒಮಾನ್ ಇದರ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹುಸೈನ್,ಗಂಗೊಳ್ಳಿ ಜಮಾಅತ್ ಒಮಾನ್ ಅಧ್ಯಕ್ಷ ಇಸ್ಮಾಯಿಲ್ ಖಾನ್ ಉಪಸ್ಥಿತರಿದ್ದರು.

ಈ ಸಮಯದಲ್ಲಿ ಮಹಿಳೆಯರಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ದೆ ಹಾಗೂ ಮಕ್ಕಳ ಕಾರ್ಯಕ್ರಮದ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಮತ್ತು ಪಾಲ್ಗೊಂಡ ಎಲ್ಲಾ ಮಹಿಳೆಯರಿಗೂ, ಮಕ್ಕಳಿಗೂ ಆಕರ್ಷಕ ಬಹುಮಾನ ನೀಡುವುದನ್ನು ಆಸೀಫ್ ಪಡುಬಿದ್ರಿ ನೆರವೇರಿಸಿ ಕೊಟ್ಟರು.
ಉಳಿದಂತೆ ನೆರೆದ ಪ್ರವಾಸಿ ಜನಸಮೂಹಕ್ಕೆ ಕ್ವಿಝ್ ಪ್ರಶ್ನೋತ್ತರ ಸ್ಪರ್ದೆಯನ್ನು ಮಕ್ಸೂದ್ ಚಂದಾವರ ನಡೆಸಿಕೊಟ್ಟರು.

ನೂರ್ ಮುಹಮ್ಮದ್ ಪಡುಬಿದ್ರಿ ಸ್ವಾಗತಿಸಿದರೆ, ಝಕರಿಯಾ ಬಪ್ಪಳಿಗೆ ಧನ್ಯವಾದಗೈದರು, ಉಸ್ಮಾನ್ ಮೈಸೂರ್ ಮತ್ತು ಹನೀಫ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರೆ ಅನ್ಸಾರ್ ಕಾಟಿಪಳ್ಳ ಉಸ್ತುವಾರಿ ವಹಿಸಿದ್ದರು.

ವರದಿ: ಸುಹೈಲ್ ಆತೂರ್ ಮಸ್ಕತ್

Comments are closed.