Wellwishes

ಶುಭ ವಿವಾಹ : ವಿವೇಕ್ ಆಳ್ವ ಮತ್ತು ಗ್ರೀಷ್ಮಾ ರೈ – ಗಣ್ಯರಿಂದ ಶುಭಹಾರೈಕೆ

Pinterest LinkedIn Tumblr

ಮೂಡುಬಿದಿರೆ: ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರ ಪುತ್ರ ವಿವೇಕ್ ಆಳ್ವ ಮತ್ತು ಬಾಲ್ಯೊಟ್ಟು ಗುತ್ತು ಶಶಿಕಲಾ ಗಣೇಶ್ ರೈ ಕುಕ್ಕುವಳ್ಳಿ ಅವರ ಪುತ್ರಿ ಗ್ರೀಷ್ಮಾ ರೈ ಅವರ ವಿವಾಹವು ಮೂಡುಬಿದಿರೆ ವಿದ್ಯಾಗಿರಿ ರತ್ನಾಕರವರ್ಣಿ ಸಭಾಂಗಣದ ನುಡಿಸಿರಿ ವೇದಿಕೆಯಲ್ಲಿ ಇತ್ತೀಚೆಗೆ ಜರಗಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸೇರಿದಂತೆ ಸಾವಿರಾರು ಗಣ್ಯರು ಉಪಸ್ಥಿತರಿದ್ದು ವಧೂ ವರರನ್ನು ಹರಸಿದರು. ಡಾ. ಮೋಹನ ಆಳ್ವ ಮತ್ತು ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ವೈದಿಕರ ಮಾರ್ಗದರ್ಶನದಲ್ಲಿ ವಿವಾಹದ ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಂಡರು.

Comments are closed.