ಕರಾವಳಿ

ಎಸ್‌ಕೆ‌ಎಸ್ ಗ್ರೂಪ್‌ನ ಮೊದಲ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗೆ 7 ತಾರಾ ಕ್ರಿಸಿಲ್ ರೇಟಿಂಗ್

Pinterest LinkedIn Tumblr

ಮಂಗಳೂರು, ನವೆಂಬರ್,2017: ಭಾರತದ ಅತ್ಯಂತ ಎತ್ತರದ ಸ್ಕೈಸ್ಕ್ರಾಪರ್ ಮತ್ತು ಮೊದಲ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಎಸ್‌ಕೆ‌ಎಸ್ ನೆಟ್‌ಗೇಟ್ ಎಲ್‌ಎಲ್‌ಪಿ, ಇತ್ತೀಚೆಗೆ ಕ್ರಿಸಿಲ್‌ನಿಂದ ಸಪ್ತತಾರಾ(7 ಸ್ಟಾರ್) ರೇಟಿಂಗ್ ಪಡೆದಿದೆ. ಎಸ್‌ಕೆ‌ಎಸ್ ನೆಟ್‌ಗೇಟ್ ಎಲ್‌ಎಲ್‌ಪಿಗೆ ಅವ್ವಶ್ಯ ಗ್ರೂಪ್‌ನ ಶಶಿ ಕಿರಣ್ ಶೆಟ್ಟಿ ಅವರು ಪ್ರವರ್ತಕರಾಗಿದ್ದಾರೆ.

ಈ 7 ಸ್ಟಾರ್ ರೇಟಿಂಗ್ ಅನ್ನು ಕಟ್ಟಡ ನಿರ್ಮಾಣ ಗುಣಮಟ್ಟ ಮತ್ತು ಸೌಲಭ್ಯಗಳು, ಕಾನೂನು ಗುಣಮಟ್ಟ ಮತ್ತು ಸದೃಢ ಹಣಕಾಸು ಸಾಮರ್ಥ್ಯ ಆಧರಿಸಿರುತ್ತದೆ. ಈ ಪ್ರಾಜೆಕ್ಟ್ ವಿಶ್ವಮಟ್ಟದ ಸೌಲಭ್ಯಗಳನ್ನು ಹೊಂದಿದ್ದು ತನ್ನ ನಿವಾಸಿಗಳಿಗೆ ಉನ್ನತಮಟ್ಟದ ವಸತಿಯ ಅನುಭವ ನೀಡುತ್ತದೆ. ಇದು ಎಲೈಟ್ ರಿಕ್ರಿಯೇಷನಲ್ ಏರಿಯಾವನ್ನು ಫಿಟ್‌ನೆಸ್, ವೆಲ್‌ನೆಸ್, ಜಿಮ್ನಾಷಿಯಂ, ಯೋಗ ಮತ್ತು ಮೆಡಿಟೇಷನ್ ಪೆವಿಲಿಯನ್, ಗಾಲ್ಫ್ ಸಿಮ್ಯುಲೇಟರ್, ಸ್ಪಾ, ಜಾಗಿಂಗ್ ಟ್ರಾಕ್, ಮಕ್ಕಳ ಆಡುವ ಪ್ರದೇಶ ಮತ್ತು ಕಾಫಿ ಶಾಪ್, ಸೂಪರ್ ಮಾರ್ಕೆಟ್ ಮತ್ತಿತರೆ ಒಳಗೊಂಡಿರುತ್ತದೆ.

ಪ್ಲಾನೆಟ್ ಎಸ್‌ಕೆ‌ಎಸ್ ಪಾರಂಪಾರಿಕ ಸುಸ್ಥಿರತೆಯ ವಸತಿ ಯೋಜನೆಯ ಎಲ್ಲ ಮಾನದಂಡಗಳನ್ನು ಪೂರೈಸಿದೆ. ಇದು 4.55 ಎಕರೆಗಳ ವಿಸ್ತೀರ್ಣ ಹೊಂದಿದ್ದು ಕಟ್ಟಡ ವಿಸ್ತಾರ ಅರ್ಧ ಎಕರೆಗಿಂತ ಕಡಿಮೆ ಇದೆ. ಸಮುದಾಯದ ಸೌಖ್ಯ ಮತ್ತು ಆರೋಗ್ಯವನ್ನು ತನ್ನ ಕೇಂದ್ರವಾಗಿಸಿಕೊಂಡಿರುವ ಈ ಪ್ರಾಜೆಕ್ಟ್ ಶೇ.90ರಷ್ಟು ತೆರೆದ ಪ್ರದೇಶ ಮತ್ತು ಹಸಿರು ಅರಣ್ಯ/ಜಲಪಾತದೊಂದಿಗೆ ಕಾಲುದಾರಿ ಇರುತ್ತದೆ. ಈ ಪ್ರಾಜೆಕ್ಟ್ ಸೋಲಾರ್ ಪ್ಯಾನೆಲ್ ಸಿಸ್ಟಂ ಹೊಂದಿದ್ದು ಮೆಸ್ಕಾಂ ಗ್ರಿಡ್‌ಗೆ ಸಂಪರ್ಕ ಪಡೆದಿದೆ ಮತ್ತು ಪ್ರತಿ ಗಂಟೆಗೆ 50ಕೆಡಬ್ಲ್ಯೂ ವಿದ್ಯುಚ್ಛಕ್ತಿ ಉತ್ಪಾದಿಸುತ್ತದೆ.

ಈ ಪ್ರಾಜೆಕ್ಟ್‌ನ ಕಾನೂನು ಸ್ಥಾನಮಾನಕ್ಕೆ ಸ್ಪಷ್ಟ ಮತ್ತು ಮಾರುಕಟ್ಟೆಯೋಗ್ಯ ಭೂಮಿಯ ಬೆಂಬಲವಿದ್ದು ಎಲ್ಲ ಅಗತ್ಯ ಪೂರ್ವ ಮತ್ತು ನಂತರದ ಅನುಮೋದನೆಗಳನ್ನು ಪಡೆದಿದೆ. ಸದೃಢವಾದ ಪ್ರವರ್ತಕರ ಬೆಂಬಲ ಮತ್ತು ಗ್ರಾಹಕರ ಸ್ಥಿರವಾದ ಹರಿವಿಂದ ಪ್ರಾಜೆಕ್ಟ್‌ನ ಹಣಕಾಸಿನ ಗುಣಮಟ್ಟ ಅತ್ಯುತ್ತಮವಾಗಿದೆ.

`ಪ್ಲಾನೆಟ್ ಎಸ್‌ಕೆ‌ಎಸ್‌ಗೆ ಕ್ರಿಸಿಲ್‌ನ ಎ 7 ಸ್ಟಾರ್ ರೇಟಿಂಗ್ ನಮಗೆ ಮಹತ್ತರ ಗೌರವವಾಗಿದೆ. ಈ ಪ್ರಾಜೆಕ್ಟ್ ಪರಿಸರ ಸ್ನೇಹಿ ಜೀವನದ ವಸತಿಯ ಭವಿಷ್ಯ ಸನ್ನದ್ಧ ನೋಟಕ್ಕೆ ಪೂರಕವಾಗಿದೆ. ಮಂಗಳೂರು ನಗರ ದೇಶದಲ್ಲಿ ಮುಂಚೂಣಿಯ ವಸತಿ ತಾಣವಾಗಿ ಬೆಳೆಯುತ್ತಿದೆ ಮತ್ತು ಪ್ಲಾನೆಟ್ ಎಸ್‌ಕೆ‌ಎಸ್ ನಿವಾಸಿಗಳಿಗೆ ವಿಶ್ವಮಟ್ಟದ ಜೀವನದ ಅನುಭವ ನೀಡುವುದರ ಪುನರುಚ್ಛಾರವಾಗಿದೆ ಎಂದು ಶ್ರೀ ಶಶಿ ಕಿರಣ್ ಶೆಟ್ಟಿ ಹೇಳಿದ್ದಾರೆ.

40-ಮಹಡಿಯ ವಸತಿ ಯೋಜನೆಯನ್ನು ಮಾರ್ಚ್ 2016ರಲ್ಲಿ ಉದ್ಘಾಟಿಸಲಾಯಿತು, ಅದು ಹಲವು ಪುರಸ್ಕಾರಗಳನ್ನು ಪಡೆದಿದೆ:

1) “ಎ‌ಐಸಿ‌ಎ” ರಾಷ್ಟ್ರೀಯ ಪ್ರಶಸ್ತಿ- ಸ್ಟ್ರಕ್ಚರಲ್ ಡಿಸೈನ್‌ನಲ್ಲಿ ಕಾಂಕ್ರೀಟ್ ಅವಾರ್ಡ್ಸ್ 2011 ಫಾರ್ ಎಕ್ಸೆಲೆನ್ಸ್
2) 5 ಮಿಲಿಯನ್ ಸುರಕ್ಷಿತ ಮಾನವ ಗಂಟೆಗಳಿಗಾಗಿ ಬ್ರಿಟಿಷ್ ಸೇಫ್ಟಿ ಕೌನ್ಸಿಲ್ ಪುರಸ್ಕಾರ
3) ಕ್ರೆಡೈ ಸ್ಟೇಟಿಯಾನ್ 2012-ಮೋಸ್ಟ್ ಎಮರ್ಜಿಂಗ್ ಡೆವಲಪರ್‍ಸ್
4) `ಅಲ್ಟ್ರಾ ಲಕ್ಷುರಿ ವಲಯ’ದಲ್ಲಿ ಭಾರತದಲ್ಲಿ ಬೆಸ್ಟ್ ಟೈಯರ್ ಸಿಟಿ ಪ್ರಾಜೆಕ್ಟ್- ಸಿ‌ಎನ್‌ಬಿಸಿ ಆವಾಝ್
5) ಲಕ್ಷುರಿ ವಲಯದಲ್ಲಿ ಎಸಿ‌ಇ‌ಎಫ್ ಅವಾರ್ಡ್
6) ಎಸಿಸಿ‌ಇ(ಐ) ಮಂಗಳೂರು-ಅಲ್ಟ್ರಾಟೆಕ್ “ಅವಾರ್ಡ್ ಫಾರ್ ದಿ ಔಟ್‌ಸ್ಟಾಂಡಿಂಗ್ ಕಾಂಕ್ರೀಟ್ ಸ್ಟ್ರಕ್ಚರ್
7) ಎಸಿಸಿ‌ಇ(ಐ) ಬಿಲಿಮೋರಿಯಾ ಅವಾರ್ಡ್ ೨೦೧೭ “ಅವಾರ್ಡ್ ಫಾರ್ ಎಕ್ಸೆಲೆನ್ಸ್ ಇನ್ ಕನ್ಸ್‌ಟ್ರಕ್ಷನ್ ಆಫ್ ಹೈ ರೈಸ್ ಬಿಲ್ಡಿಂಗ್
8) ಕ್ರೆಡೈ ಕೇರ್ ಅವಾರ್ಡ್ಸ್ 2017
9) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬೆಸ್ಟ್ ಗ್ರೀನ್ ಇನಿಷಿಯೇಟಿವ್ ಇನ್ ರೆಸಿಡೆನ್ಷಿಯಲ್ ಅಪಾರ್ಟ್‌ಮೆಂಟ್ ಸೆಕ್ಟರ್ 2017

ಎಸ್‌ಕೆ‌ಎಸ್ ನೆಟ್‌ಗೇಟ್ ಎಲ್‌ಎಲ್‌ಪಿಯ ಆರ್ಕಿಟೆಕ್ಟ್ ಸನತ್ ಕುಮಾರ್ ಶೆಟ್ಟಿ, ಈ ಪ್ರಾಜೆಕ್ಟ್ ಅವರ ಆರ್ಕಿಟೆಕ್ಚರಲ್ ಪ್ರತಿಭೆ ಮತ್ತು ರಿಯಾಲ್ಟಿ ಪರಿಣಿತಿಯನ್ನು ಬಳಸಿ ಆಯೋಜಿಸಿ ರೂಪಿಸಿದ್ದಾರೆ. ಈ ಪ್ರಾಜೆಕ್ಟ್ ಅವ್ವಶ್ಯ ಗ್ರೂಪ್‌ನ ವಿಭಾಗ ಆಲ್‌ಕಾರ್ಗೊ ಲಾಜಿಸ್ಟಿಕ್ಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಆದರ್ಶ್ ಹೆಗ್ಡೆ ಅವರ ಮೌಲಿಕ ಮಾರ್ಗದರ್ಶನ ಪಡೆದಿದೆ. ಪ್ಲಾನೆಟ್ ಎಸ್‌ಕೆ‌ಎಸ್ ಆನಂದದಾಯಕ ಜೀವನದ ನೈಜ ಪ್ರತಿರೂಪವಾಗಿದೆ ಮತ್ತು ಆದರ್ಶಮಯ ವಸತಿ ಯೋಜನೆಗಳ ನೈಜ ಪರಂಪರೆಯಾಗಿದೆ.

Comments are closed.