ವಾಣಿಜ್ಯ

ಸೆಪ್ಟೆಂಬರ್ 5ರಂದು ದೇಶಾದ್ಯಂತ ಜಿಯೋ ಗ್ರಾಹಕರಿಗೆ ಭರ್ಜರಿ ಕೊಡುಗೆ ಪ್ರಕಟಿಸಿದ ಮುಕೇಶ್ ಅಂಬಾನಿ !

Pinterest LinkedIn Tumblr

ಮುಂಬೈ: ಸೆಪ್ಟೆಂಬರ್ 5ರಂದು ಪ್ರಾರಂಭವಾಗಲಿರುವ ಜಿಯೊ ಫೈಬರ್ 100 ಎಂಬಿಪಿಎಸ್ ಸ್ಪೀಡ್ ನ ಬೇಸ್ ಪ್ಲಾನ್ ನೊಂದಿಗೆ ಆರಂಭವಾಗಿ 1 ಜಿಬಿಪಿಎಸ್ ವರೆಗೆ ತಿಂಗಳಿಗೆ 700 ರೂಪಾಯಿಯಿಂದ 10 ಸಾವಿರ ರೂಪಾಯಿವರೆಗೆ ಇರಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಮುಂಬೈಯಲ್ಲಿ ಇಂದು ತಮ್ಮ ಕಂಪೆನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಈ ವಿಷಯ ಪ್ರಕಟಿಸಿದ್ದು ಜಿಯೊ ಫಸ್ಟ್ ಡೇ ಫಸ್ಟ್ ಶೋ ಪ್ಲಾನ್ ನ್ನು ಘೋಷಿಸಿದರು. ಇದರಡಿ ಪ್ರೀಮಿಯಂ ಜಿಯೊ ಫೈಬರ್ ಗ್ರಾಹಕರು ಬಿಡುಗಡೆಯ ದಿನ ತಾವಿರುವಲ್ಲಿ ಕುಳಿತು ಸಿನಿಮಾಗಳನ್ನು ವೀಕ್ಷಣೆ ಮಾಡಬಹುದು. ಇದು 2020ಕ್ಕೆ ಬಿಡುಗಡೆಯಾಗಲಿದೆ ಎಂದರು.

ಸಭೆಯಲ್ಲಿ ಮುಕೇಶ್ ಅಂಬಾನಿ ಮಾಡಿದ ಮತ್ತೊಂದು ಪ್ರಕಟಣೆ ಮೈಕ್ರೊಸಾಫ್ಟ್ ಜೊತೆ ರಿಲಯನ್ಸ್ ಸಹಭಾಗಿತ್ವ, ಈ ಮೂಲಕ ಜಿಯೊ ದೇಶಾದ್ಯಂತ ಡಾಟಾ ಕೇಂದ್ರಗಳನ್ನು ಸ್ಥಾಪಿಸುತ್ತದೆ ಮತ್ತು ಅದಕ್ಕೆ ಮೈಕ್ರೊಸಾಫ್ಟ್ ವೇದಿಕೆ ಒದಗಿಸುತ್ತದೆ.

ಮುಂದಿನ ಒಂದು ವರ್ಷದಲ್ಲಿ ರಿಲಯನ್ಸ್ ಜಿಯೊ ಭಾರತದಲ್ಲಿ ಅತಿ ದೊಡ್ಡ ಬ್ಲಾಕ್ ಚೈನ್ ಸಂಪರ್ಕಜಾಲ ಹೊಂದಿದೆ. 14 ತಂತ್ರಜ್ಞಾನ ಸಂಬಂಧಿ ಸ್ಟಾರ್ಟ್ ಅಪ್ ಗಳನ್ನು ಸ್ಥಾಪಿಸಲಾಗುವುದು. ಮಾಹಿತಿ ಮತ್ತು ತಂತ್ರಜ್ಞಾನದಡಿಯಲ್ಲಿ ಜಿಯೊ ಒಂದು ಶತಕೋಟಿ ಮನೆಗಳಿಗೆ ಸಂಪರ್ಕ ಕಲ್ಪಿಸಲಿದೆ. ಜಿಯೊ ಫೈಬರ್ 2.4 ದಶಲಕ್ಷ ಸಣ್ಣ, ಮಧ್ಯಮ ಉದ್ಯಮಗಳನ್ನು ಸಶಕ್ತೀಕರಣಗೊಳಿಸಲಿದೆ ಎಂದರು.

ತಿಂಗಳಿಗೆ 500 ರೂಪಾಯಿಗಳಲ್ಲಿ ಜಿಯೊ ಅನಿರ್ದಿಷ್ಟಾವಧಿಯ ಅಂತಾರಾಷ್ಟ್ರೀಯ ಕರೆಯನ್ನು ಗ್ರಾಹಕರಿಗೆ ಒದಗಿಸಲಿದೆ. ತಿಂಗಳಿಗೆ 500 ರೂಪಾಯಿಯ ಟಾಪ್ ಅಪ್ ಮಾಡಿಸಿಕೊಂಡರೆ ಜಿಯೊ ಫೈಬರ್ ಗ್ರಾಹಕರು ಉಚಿತ ಹೆಚ್ ಡಿ/4ಕೆ ಎಲ್ ಇಡಿ ಟಿವಿ ಆರಂಭಿಕ ಆಫರ್ ಆಗಿ ಪಡೆಯಲಿದ್ದಾರೆ. ಸ್ಟಾರ್ಟ್ ಅಪ್ ಉದ್ಯಮಿಗಳು ರಿಲಯನ್ಸ್ ಜಿಯೊ ವೆಬ್ ಸೈಟ್ ನಲ್ಲಿ ತಮ್ಮ ಹೆಸರು ಮತ್ತು ಉದ್ಯಮದ ವಿವರಗಳನ್ನು ದಾಖಲಾತಿ ಮಾಡುವಂತೆ ಮುಕೇಶ್ ಅಂಬಾನಿ ಕರೆ ನೀಡಿದರು.

Comments are closed.