ಹಬ್ಬಗಳ ಸೀಜನ್ ಆರಂಬವಾಗಿರುವ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತಷ್ಟು ದಿಬಾರಿಯಾಗಿ ಚಿನ್ನ ಖರೀದಿಸುವ ಆಸೆ ಹೊತ್ತಿದ್ದ ಮಹಿಳೆಯರಿಗೆ ತೀವ್ರ ನಿರಾಶೆಯಾಗಿದೆ. ತಿಂಗಳ ದಾಖಲೆ ಮುರಿದ ಬಂಗಾರದ ಬೆಲೆ ಮುಂಬೈ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂಗೆ 40,000 ರೂ.ಗಿಂತಲೂ ಹೆಚ್ಚಳವನ್ನು ಕಂಡಿದೆ.
ಮುಂಬೈ: ಹಬ್ಬಗಳ ಸೀಜನ್ ಆರಂಬವಾಗಿರುವ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತಷ್ಟು ದಿಬಾರಿಯಾಗಿ ಚಿನ್ನ ಖರೀದಿಸುವ ಆಸೆ ಹೊತ್ತಿದ್ದ ಮಹಿಳೆಯರಿಗೆ ತೀವ್ರ ನಿರಾಶೆಯಾಗಿದೆ. ತಿಂಗಳ ದಾಖಲೆ ಮುರಿದ ಬಂಗಾರದ ಬೆಲೆ ಮುಂಬೈ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂಗೆ 40,000 ರೂ.ಗಿಂತಲೂ ಹೆಚ್ಚಳವನ್ನು ಕಂಡಿದೆ.
ಮಾಜಿ ಆಲ್ ಇಂಡಿಯನ್ ಜೆಮ್ಸ್ ಮತ್ತು ಜ್ಯುವೆಲ್ಲರಿ ಫೆಡರೇಶನ್ ಅಧ್ಯಕ್ಷ ಬಚಾರಾಜ್ ಬಮಾಲ್ವಾ ಹೇಳಿದಂತೆ ಪ್ರಸ್ತುತ ಜಾಗತಿಕ ರಾಜಕೀಯ ಬಿಕ್ಕಟ್ಟುಗಳು ಮತ್ತು ವ್ಯಾಪಾರ ನಡುವಿನ ಸ್ಪರ್ಧೆಗಳು ಉಲ್ಬಣಗೊಳ್ಳುತ್ತಿರುವುದು ಚಿನ್ನದ ಬೆಲೆ ಏರಿಕೆಗೆ ಕಾರಣ. ಇದು ಹೀಗೆ ಮುಂದುವರಿದರೆ , ಮುಂದಿನ ಕೆಲವು ತಿಂಗಳುಗಳಲ್ಲಿ 10 ಗ್ರಾಂಗೆ 41,000 ರೂ ತಲುಪಬಹುದಾಗಿದೆ.
ಹಾಗಾದರೂ ಬೆಲೆ ಏರಿಕೆ ನಡುವೆಯೇ ಚಿನ್ನದ ಬೇಡಿಕೆಯು ಶೇ. 10 ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಏರಿಕೆಯಾಗಲಿದೆ.ಎಂದು ಅವರು ಆಶಾದಾಯಕವಾಗಿ ಹೇಳಿದರು, ಮುಂದಿನ ತಿಂಗಳು ವಿವಾಹ ಮತ್ತು ಹಬ್ಬದ ಋತುಗಳು ಆರಂಭವಾಗಲಿದ್ದು ಇದರಿಂದಾಗಿ ಚಿನ್ನಕ್ಕೆ ಮತ್ತಷ್ಟು ಬೇಡಿಕೆ ಬರಲಿದೆ ಎಂದು ಅವರು ಅಂದಾಜಿಸಿದ್ದಾರೆ. “ಹೊಸ ಖರೀದಿಗಳ ಬದಲು, ಹೆಚ್ಚಿನ ಬೆಲೆಗಳನ್ನು ಗಮನದಲ್ಲಿಟ್ಟುಕೊಂಡು ಜನರು ಹಳೆಯ ಚಿನ್ನವನ್ನು ಮರುಬಳಕೆ ಮಾಡಲು ಬಯಸುತ್ತಾರೆ. ಈ ಪ್ರಮಾಣ ಶೇ. 25 ಆಗಿರಲಿದೆ.”
ಮುಂಬೈ ಜ್ಯುವೆಲ್ಲರ್ಸ್ ಫೆಡರೇಶನ್ ಅಧ್ಯಕ್ಷ ರಾಕೇಶ್ ಶೆಟ್ಟಿ ಮಾತನಾಡಿ, ಹಳೆಯ ಚಿನ್ನವನ್ನು ಮರುಬಳಕೆ ಮಾಡುವ ಪ್ರಮಾಣವು ಶೇಕಡಾ 70 ರಷ್ಟಿದೆ, ಹೊಸ ಆಭರಣಗಳ ಮಾರಾಟ ಶೇಕಡಾ 65 ಕ್ಕಿಂತಲೂ ಕಡಿಮೆಯಾಗಿದೆ ಎಂದಿದ್ದಾರೆ.”ಜನರು ತಮ್ಮ ಹಳೆಯ ಚಿನ್ನವನ್ನು ಬದಲಿಸಲು ಬಯಸುತ್ತಾರೆ.ಪ್ರಸ್ತುತ ಚಿನ್ನದ ದರ ಬಹಳ ಹೆಚ್ಚಳವಾಗಿರುವ ಕಾರಣ ಅವರ ಅಗತ್ಯಗಳಿಗೆ ಮೇಕಿಂಗ್ ಶುಲ್ಕವನ್ನು ಪಾವತಿಸಲು ಬಯಸುತ್ತಾರೆ. ಪ್ರಸ್ತುತ ಜಾಗತಿಕ ಬಿಕ್ಕಟ್ಟುಗಳು ಮುಂದುವರಿದರೆ, ದೀಪಾವಳಿ ವೇಳೆಗೆ ಚಿನ್ನದ ದರ ಇನ್ನಷ್ಟು ಹೆಚ್ಚಿ ಹತ್ತು ಗ್ರಾಂ ಗೆ 41,000 ರು. ಆಗಲಿದೆ.” ಅವರು ಹೇಳಿದ್ದಾರೆ.
ಭಾರತವು ವಾರ್ಷಿಕವಾಗಿ ಸರಾಸರಿ 700-800 ಟನ್ ಹಳದಿ ಲೋಹವನ್ನು ಬಳಸುತ್ತದೆ ಎಂದು ಬಮಾಲ್ವಾ ಹೇಳಿದ್ದಾರೆ.
Comments are closed.