ಮಂಗಳೂರು : ಮಂಗಳೂರಿನ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿರುವ ಖ್ಯಾತ ಚಿನ್ನಾಭರಣಗಳ ಮಳಿಗೆ ಶ್ವೇತಾ ಜುವೆಲ್ಲರ್ಸ್ ಇದೀಗ ನವೀಕೃತಗೊಂಡು ಇನ್ನಷ್ಟು ಸುಸಜ್ಜಿತ ಸೌಕರ್ಯಗಳೊಂದಿಗೆ ಶುಭಾರಂಭಗೊಂಡಿದೆ.
ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ ಬೋಳೂರು ಇಲ್ಲಿಯ ಆಡಳಿತ ಮುಖ್ಯಸ್ಥರು ಹಾಗೂ ಚಲನಚಿತ್ರ ನಿರ್ಮಾಪಕರೂ ಅಗಿರುವ ಶ್ರೀ ತಾರಾನಾಥ ಶೆಟ್ಟಿ ಬೋಳಾರ್ ಸುಸಜ್ಜಿತ ಸೌಕರ್ಯಗಳೊಂದಿಗೆ ನವೀಕೃತ ಮಳಿಗೆಯನ್ನು ಉದ್ಘಾಟಿಸಿ, ಶುಭಾಹಾರೈಸಿದರು.
ಚಲನಚಿತ್ರ ನಿರ್ಮಾಪಕ ರಿಚರ್ಡ್ ಕ್ಯಾಸ್ಟಲಿನೋ, ಬಿಜೈ ಚರ್ಚ್ ಪಾಲಾನಾ ಸಮಿತಿಯ ಎ.ಎಮ್ ಫೆರ್ನಾಂಡಿಸ್, ಹಿರಿಯ ಪತ್ರಕರ್ತರಾದ ಶ್ರೀ ಮನೋಹರ್ ಪ್ರಸಾದ್, ಸುರೇಂದ್ರ ವಾಗ್ಲೆ, ಉದ್ಯಮಿಗಳಾದ ಪ್ರಸನ್ನ ಕುಮಾರ್, ಬಾಲಕೃಷ್ಣ ಅಂಚನ್ ಕೋಡಿಕಲ್, ಕುಮಾರ ಸ್ವಾಮಿ, ಶ್ರೀಮತಿ ಸಂದ್ಯಾ ಅಶೋಕ್ ಶೇಟ್, ವಿನಯ ಕುಮಾರ್ ಶೇಟ್, ಅರುಣ್ ಕುಮಾರ್ ಶೇಟ್, ಅರುಣ್ ಶೇಟ್, ನಂದನ್, ಶ್ವೇತಾ ಶೇಟ್, ಮೇಘಾ ಶೇಟ್, ಚಾಂದನಿ ಶೇಟ್, ಬೇಬಿ ಮೌಲ್ಯ, ಮುಂತಾದವರು ಅತಿಥಿಗಳಾಗಿದ್ದರು. “ಶ್ವೇತಾ ಜುವೆಲ್ಲರ್ಸ್” ಮಾಲ್ಹಕ ಶ್ರೀ ಅಶೋಕ್ ಶೇಟ್ ಅತಿಥಿಗಳನ್ನು ಸ್ವಾಗತಿಸಿದರು.
ಗುಣಮಟ್ಟ ಮತ್ತು ವಿಶ್ವಾಸಾರ್ಹತೆ :
ಖ್ಯಾತ ಸಾಮಾಜಿಕ ಕಾರ್ಯಕರ್ತರು ಆಗಿರುವ ಅಶೋಕ್ ಶೇಟ್ ಅವರ ಶ್ವೇತಾ ಜುವೆಲ್ಲರ್ಸ್ ಕಳೆದ 32 ವರ್ಷಗಳಿಂದ ಗಣಪತಿ ಹೈಸ್ಕೂಲ್ ರಸ್ತೆಯ ಐಡಿಯಲ್ ಐಸ್‌ಕ್ರೀಂ ಪಾರ್ಲರ್ ಎದುರುಗಡೆಯಲ್ಲಿ ಕಾರ್ಯಾಚರಿಸುತ್ತಾ ಬಂದಿದ್ದು, ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಯೊಂದಿಗೆ ಗ್ರಾಹಕರ ಮಳಿಗೆಯಾಗಿ ಗುರುತಿಸಿಕೊಂಡಿದೆ.
ಅಶೋಕ್ ಶೇಟ್ ಅವರು ಸಮಾಜಸೇವೆ, ವಿವಿಧ ಸಂಘ ಸಂಸ್ಥೆಗಳಲ್ಲಿ ಪ್ರಮುಖ ಜವಾಬ್ದಾರಿ ಹೊಂದಿ ಖ್ಯಾತರಾದವರು.ಮಂಗಳೂರಿನ ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ, ಜನತಾ ಬಜಾರ್‌ನ ನಿರ್ದೇಶಕರಾಗಿ ಕಳೆದ ಮೂರು ದಶಕಗಳಿಂದ ಸಹಕಾರಿ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಅವರು ಸರ್ಕಾರಿ ಅನುಮೋದಿತ ಮೌಲ್ಯಮಾಪಕರು ಆಗಿದ್ದಾರೆ.
ವೈವಿಧ್ಯಮಯ ವಿನ್ಯಾಸ, ಗ್ರಾಹಕ ಸೇವೆಗಳಿಂದ ಹೆಸರಾಗಿರುವ ಶ್ವೇತಾ ಜುವೆಲ್ಲರ್ಸ್ ಈಗ ಇನ್ನಷ್ಟು ಗ್ರಾಹಕ ಸೌಕರ್ಯಗಳೊಂದಿಗೆ ಗ್ರಾಹಕ ಸೇವೆಗೆ ಸಿದ್ಧಗೊಂಡಿದೆ ಎಂದು ಈ ಸಂದರ್ಭದಲ್ಲಿ ಅಶೋಕ್ ಶೇಟ್ ತಿಳಿಸಿದ್ದಾರೆ.
Comments are closed.