ಚೆನ್ನೈ: ಖ್ಯಾತ ತಮಿಳು ನಟ ವಿಕ್ರಮ್ (56ವರ್ಷ) ಶುಕ್ರವಾರ ಹೃದಯಾಘಾತದಿಂದ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.
ವಿಕ್ರಮ್ ಆರೋಗ್ಯದ ಕುರಿತಂತೆ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದು ಮೂಲಗಳ ಪ್ರಕಾರ, ವಿಕ್ರಮ್ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ನಡೆಯುತ್ತಿದೆ ಎನ್ನಲಾಗಿದೆ.
ಇಂದು ಸಂಜೆ ಆರು ಗಂಟೆಗೆ ನಟ ವಿಕ್ರಮ್ ಅವರು ತಮ್ಮ ಮುಂಬರುವ ಪೊನ್ನಿಯಿನ್ ಸೆಲ್ವನ್ ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಬೇಕಿತ್ತು ಎಂದು ಮೂಲಗಳು ಹೇಳಿವೆ
ವಿಕ್ರಮ್ ಚಿಯಾನ್ ವಿಕ್ರಮ್ ಎಂದೇ ಜನಪ್ರಿಯರಾಗಿದ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅದ್ಭುತ ನಟನೆಗಾಗಿ ನಟ ವಿಕ್ರಮ್ ರಾಷ್ಟ್ರಪ್ರಶಸ್ತಿ, ಏಳು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ 2004ರಲ್ಲಿ ತಮಿಳುನಾಡು ಸರ್ಕಾರ ಕಲೈಮಣಿ ಪ್ರಶಸ್ತಿ ನೀಡಿ ಗೌರವಿಸಿತ್ತು.
1990ರ ದಶಕದಲ್ಲಿ ವಿಕ್ರಮ್ ಬೆಳ್ಳಿಪರದೆಗೆ ಪ್ರವೇಶಿಸಿದ್ದು ಜೆಮಿನಿ, ಸಮುರಾಯ್, ಕಾದಲ್, ಸಾಮಿ, ಪಿತಾಮಗನ್, ಅರುಳ್, ಅನ್ನಿಯನ್, ರಾವಣ, ದೈವ ತಿರುಮಗಳ್, ಇರು ಮಗನ್ ಸೇರಿದಂತೆ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ.
Comments are closed.