ಕುಂದಾಪುರ: ಸೌದಿಯಲ್ಲಿ ಬಂಧಿಯಾಗಿರುವ ಕುಂದಾಪುರದ ಬೀಜಾಡಿ ನಿವಾಸಿ ಹರೀಶ್ ಬಂಗೇರ ಬಿಡುಗಡೆ ಕುರಿತು ಕೇಂದ್ರ ಸರ್ಕಾರದ ಜೊತೆ ಮಾತನಾಡಿದ್ದೇನೆ. ಹರೀಶ್ ವಿರುದ್ಧದ ಕೇಸ್ ಬಲವಾಗಿರುವ ಕಾರಣಕ್ಕಾಗಿ ಮತ್ತು ಇನ್ನೂ ಫೇಸ್‌ಬುಕ್ ಪೋಸ್ಟ್ ಮಾಡಿದ್ದು ಯಾರು ಎನ್ನುವ ಐಟಿ ಫಾರೆನ್ಸಿಕ್ ರಿಪೋರ್ಟ್ ಕಳುಹಿಸಬೇಕಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಶುಕ್ರವಾರ ಬೆಳಿಗ್ಗೆ ಕುಂದಾಪುರಕ್ಕೆ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಫೇಕ್ ಎಕೌಂಟ್ ಮಾಡಿ ಪೋಸ್ಟ್ ಮಾಡಿದವರ ಪತ್ತೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಕ್ರಿಯವಾಗಿದ್ದು, ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಸಂಪರ್ಕದಲ್ಲಿದ್ದೇನೆ. ಆದಷ್ಟು ಬೇಗ ಸತ್ಯ ಪತ್ತೆಯಾಗಬೇಕು ಎಲ್ಲದಿದ್ದರೆ ಹರೀಶ್ ಬಂಗೇರ ಮೇಲೆ ಗುರುತರ ಆರೋಪ ಹೊರಿಸಿದರೆ ಸಮಸ್ಯೆ ಆಗುತ್ತದೆ. ಆರಂಭಿಕ ಮಾಹಿತಿಯಲ್ಲಿ ಪೋಸ್ಟ್ ಮಾಡಿದವರು ಬೇರೆಯವರು ಎನ್ನುವ ಮಾಹಿತಿ ಸಿಕ್ಕಿದೆ. ಫೈನಲ್ ಆದನಂತರ ವರದಿ ಕೇಂದ್ರ ಸರ್ಕಾರ, ರಾಯಬಾರಿ ಕಚೇರಿ ಹಾಗೂ ನನಗೂ ತಿಳಿಸುವುದಾಗಿ ಹೇಳಿದ್ದಾರೆ ಎಂದವರು ಹೇಳಿದರು.
Comments are closed.