ಮಂಗಳೂರು, ಎಪ್ರಿಲ್.30: ರಾಜ್ಯದಲ್ಲಿ ಕೊರೋನಾ ಕಾಟದಿಂದ ಭಾಗಶ ಲಾಕ್ ಡೌನ್ ಹಂತಕ್ಕೆ ತಲುಪಿರುವುದರಿಂದ ಮಂಗಳೂರು – -ಬೆಂಗಳೂರು-ಮೈಸೂರು ಸೇರಿದಂತೆ ಕರ್ನಾಟಕದಾದ್ಯಂತ ಅಧ್ಬುತ ಯಶಸ್ಸಿನೊಂದಿಗೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದ “ಇಂಗ್ಲಿಷ್”- ಎಂಕ್ಲೆಗ್ ಬರ್ಪುಜಿ ಬ್ರೋ’ ಗಿಲ್ಬಿಸ್ಟಿಕ್ ಕಾಮಿಡಿ ಚಿತ್ರವನ್ನು ಸಮಯವಕಾಶದಿಂದ ಇನ್ನೂ ಕೂಡ ನೋಡದೆ ಇದೀಗ ನೋಡಲು ಕಾತರದಿಂದ ಕಾಯುತ್ತಿದ್ದ ಚಿತ್ರಪ್ರೇಮಿಗಳಿಗೆ ನಿರಾಶೆ ಮೂಡಿಸಿದೆ.
ಆದರೆ ದೂರದ ಓಮನ್ ಹಾಗೂ ಯುಎಇಗೆ ಭರ್ಜರಿ ಎಂಟ್ರಿ ನೀಡಿರುವ “ಇಂಗ್ಲಿಷ್”- ಚಿತ್ರ ಅಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. 3ನೇ ವಾರ ಕೂಡ ದುಬೈಯಲ್ಲಿ ಸತತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರ ಬ್ಲಾಕ್ ಬಾಸ್ಟರ್ ಹಿಟ್ ಪಡೆದಿದ್ದು, ಓಮನ್ (OMAN) ಹಾಗೂ ಯು ಎ ಇ ರಾಷ್ಟ್ರಗಳಲ್ಲಿ ಚಿತ್ರಕ್ಕೆ ಉತ್ತಮ ಸ್ಪಂದನೆ ದೊರಕ್ಕಿದ್ದು, ಚಿತ್ರ ಪ್ರೇಮಿಗಳು ಮುಗಿಬಿದ್ದು ಚಿತ್ರ ನೋಡುತ್ತಿದ್ದಾರೆ.
ಮಂಗಳೂರು – ಪುತ್ತೂರು- ಸುಳ್ಯ – ಬೆಳ್ತಂಗಡಿ- ಮೂಡಬಿದ್ರೆ – ಉಡುಪಿ- ಕುಂದಾಪುರ- ಮಣಿಪಾಲ- ಕಾರ್ಕಾಳ -ಬೆಂಗಳೂರು-ಮೈಸೂರು-ಸಕಲೇಶಪುರ- ಶುಂಠಿಕೊಪ್ಪ- ಹುಬ್ಬಳಿ- ಶಿವಮೊಗ್ಗ-ಕಾಸರಗೊಡ್ ಸೇರಿದಂತೆ ಬಿಡುಗಡೆಗೊಂಡಿರುವ ಎಲ್ಲಾ ಕಡೆಗಳಲ್ಲಿ ಭರ್ಜರಿ ಯಶಸ್ಸನ್ನು ಪಡೆದು ಎಲ್ಲ ಸಿನಿಮಾ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ಗಿಲ್ಬಿಸ್ಟಿಕ್ ಕಾಮಿಡಿ ಚಿತ್ರ ಇದೀಗ ಓಮನ್ ಹಾಗೂ ಯುಎಇ ( UAE ) ರಾಷ್ಟ್ರಗಳಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ.
ಉತ್ತಮ ಹಾಸ್ಯ, ಉತ್ತಮ ಸಂದೇಶ, ನವೀರಾದ ಪ್ರೇಮ ಪ್ರಣಯ, ಪ್ರೀತಿಗೆ ಇಂಗ್ಲೀಷ್ ವ್ಯಾಮೋಹ ಅಡ್ಡಿ ಹಾಗೂ ಕೌಟುಂಬಿಕ ಸಮಸೈಗಳ ಹಿನ್ನೆಲೆ ಕೊನೆಗೆ ಪ್ರೇತಗಳಿಗೆ ಮದುವೆ ಮಾಡುವ ಜಂಜಾಟದ ಮೂಲಕ ಇಡೀ ಚಿತ್ರ ಪ್ರೇಕ್ಷಕರನ್ನು ಉಸಿರು ಬಿಗಿ ಹಿಡಿದು ಕುಳಿತುಕೊಳ್ಳುವಂತೆ ಮಾಡುತ್ತದೆ. ಜೊತೆ ಗೆ ಸುಮಧುರವಾರ ಹಾಡುಗಳು ಸಿನಿ ಪ್ರೀಯರಿಗೆ ಮುದ ನೀಡುತ್ತದೆ. ಕುಟುಂಬ ಸಮೇತಾ ನೋಡಬಹುದಾದಂತ ಒಂದು ಉತ್ತಮ ಸದಾಭಿರುಚಿಯ ಚಿತ್ರ “ಇಂಗ್ಲಿಷ್”- ಎಂಕ್ಲೆಗ್ ಬರ್ಪುಜಿ ಬ್ರೋ’.
ಈ ಎಲ್ಲಾ ವಿಭಿನ್ನ, ವಿಶೇಷ, ವಿಚಿತ್ರಗಳ ಮೂಲಕ, ಅದ್ಭುತ ಯಶಸ್ಸಿನೊಂದಿಗೆ ಭಾರತದಲ್ಲಿ 5ನೇ ವಾರಕ್ಕೆ ಕಾಲಿಟ್ಟಿರುವ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ತುಳು ಚಿತ್ರ ಓಮನ್ ಹಾಗೂ ಯು ಎ ಇ ರಾಷ್ಟ್ರಗಳಲ್ಲಿ ಅದ್ಧೂರಿ ತೆರೆ ಕಾಣುವ ಮೂಲಕ ತುಳು ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸೃಷ್ಟಿಸಿದೆ.
ಬಿಡುಗಡೆಗೂ ಮುನ್ನವೇ ಹಲವಾರು ದಾಖಲೆಗಳನ್ನು ನಿರ್ಮಿಸಿ ತುಳು ಚಿತ್ರರಂಗದಲ್ಲೇ ಹೊಸ ಇತಿಹಾಸವನ್ನು ಸೃಷ್ಠಿಸಿರುವ ಈ ಸಿನೆಮಾದಲ್ಲಿ ಪ್ರತಿಯೊಂದು ಪಂಚಿಗ್ ಡೈಲಾಗ್, ಹಾಸ್ಯಮಯ ದೃಶ್ಯ, ಹಾಸ್ಯ ಕಲಾವಿದರ ನಟನೆ, ಛಾಯಾಗ್ರಹಣ, ಹಾಡು, ಹಿನ್ನೆಲೆ ಸಂಗೀತ, ಸುಂದರ ತಾಣಗಳ ದೃಶ್ಯ ಎಲ್ಲವೂ ಸೂಪರ್. ಒಟ್ಟಾರೆ ಚಿತ್ರವನ್ನು ಎಲ್ಲ ವರ್ಗದವರು ಒಟ್ಟು ಕುಳಿತು ನೋಡುವಂತೆ ನಿರ್ಮಿಸಲಾಗಿದೆ.
ಹಾಸ್ಯವೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ಬರುವ ವಿವಿಧ ಸನ್ನಿವೇಶಗಳು, ಚಿತ್ರ ಕಥೆ, ಸಂಭಾಷಣೆ, ಒಂದಕ್ಕಿಂತ ಒಂದು ಹಿಟ್ ಹಾಡುಗಳು ಒಟ್ಟಾರೆ ಸಿನೆಮಾದ ಗೆಲುವಿಗೆ ಸ್ಪೂರ್ತಿಯಾಗಿವೆ.
8K ಕ್ಯಾಮರಾ ಬಳಸಿದ ಮೊದಲ ಸಿನೆಮಾ ತುಳು “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro’ ಆಗಿದೆ. ಜೊತೆಗೆ ಬೆಂಗಳೂರಿನ ಪ್ಯಾಲೇಸಿನಲ್ಲಿ ಚಿತ್ರೀಕರಿಸಿದ ಹೆಗ್ಗಳಿಕೆ ಕೂಡ ಚಿತ್ರದ್ದು.
ಇದೇ ಮೊದಲ ಬಾರಿಗೆ ಕನ್ನಡದ ಮೇರು ನಟ ಅನಂತ್ ನಾಗ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro’ ಸಿನೆಮಾ ಮೂಲಕ ತುಳು ಚಿತ್ರರಂಗಕ್ಕೆ ಅವರ ಮೊದಲ ಎಂಟ್ರಿ ಆಗಿದೆ. ಪ್ರಥಮ ಬಾರಿಗೆ ತುಳು ಚಿತ್ರರಂಗ ಪ್ರವೇಶಿಸಿ, ವಿಶೇಷ ಪಾತ್ರದಲ್ಲಿ ನಟಿಸಿರುವ ಕನ್ನಡದ ಹಿರಿಯ ನಟ ಅನಂತ್ ನಾಗ್ ನಟನೆ ಎಲ್ಲರ ಮನದಲ್ಲಿ ಉಳಿಯುವಂತೆ ಮಾಡುತ್ತದೆ.
“ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro’ ಸಿನೆಮಾದ ‘ವರ್ಲ್ಡ್ ಪ್ರೀಮಿಯರ್ ಶೋ’ ಕನಸಿನ ನಗರಿ ದುಬೈಯ Al Ghurair centre Deiraದಲ್ಲಿ 2020ರ ಮಾರ್ಚ್ 13ರಂದು ಅದ್ದೂರಿ ಪ್ರದರ್ಶನಗೊಂಡಿದ್ದು, ‘ವರ್ಲ್ಡ್ ಪ್ರೀಮಿಯರ್ ಶೋ’ ದುಬೈಯಲ್ಲಿ ನಡೆದಿರುವುದು ತುಳು ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎಂಬ ಖ್ಯಾತಿಗೂ ಈ ಸಿನೆಮಾ ಪಾತ್ರವಾಗಿದೆ.
“ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro’ ಸಿನೆಮಾದಲ್ಲಿ ತುಳು ಸಿನೆಮಾರಂಗದ ಹಾಸ್ಯಾದಿಗ್ಗಜರ ದಂಡೇ ಇದೆ. ಚಿತ್ರದಲ್ಲಿ ತುಳು ರಂಗಭೂಮಿಯ ಖ್ಯಾತ ಹಾಸ್ಯ ನಟರಾದ ಅರವಿಂದ್ ಬೋಳಾರ್, ನವೀನ ಡಿ’ಪಡೀಲ್, ಭೋಜರಾಜ್ ವಾಮಂಜೂರ್, ವಿಸ್ಮಯ್ ವಿನಾಯಕ್, ದೀಪಕ್ ರೈ, ನಾಯಕ- ನಟನಾಗಿ “ದಿಯಾ” ಖ್ಯಾತಿಯ ಪೃಥ್ವಿ ಅಂಬರ್ ನಾಯಕಿ ನಟಿ ನವ್ಯ ಪೂಜಾರಿ ನಟಿಸಿದ್ದು, ಇವರ ನಟನೆ ಎಲ್ಲರಿಗೂ ಖುಷಿಕೊಡುತ್ತೆ.
ಈಗಾಗಲೇ ತಾನು ಅಕ್ಮೆ(ACME ) ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ಶ್ರೀ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸಿದ ‘ಮಾರ್ಚ್ 22 ‘, ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’, ‘ಯಾನ’ ದಂತಹ ಕನ್ನಡ ಸಿನೆಮಾಗಳು ಅತ್ಯಂತ ಯಶಸ್ಸು ಕಂಡಿದೆ. ‘ಮಾರ್ಚ್ 22 ‘ ಸಿನಿಮಾಕ್ಕೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಕೂಡ ದೊರಕಿದೆ.
ಸಿನಿಮಾಕ್ಕೆ ಕತೆ, ಚಿತ್ರಕತೆ, ಸಂಭಾಷಣೆ , ನಿರ್ದೇಶನ ಕೆ. ಸೂರಜ್ ಶೆಟ್ಟಿ
ಮ್ಯೂಸಿಕ್ : ಕದ್ರಿ ಮಣಿಕಾಂತ್
ಸಿನಿಮಾಟೋಗ್ರಫಿ: ಕೃಷ್ಣ ಸಾರಥಿ – ಅಭಿಲಾಷ್ ಕಲಾತಿ
ಸಂಕಲನ: ಮನು ಶೆಡ್ಗರ್
ಆರ್ಟ್ ಡೈರೆಕ್ಟರ್ : ಮಹೇಶ್ ಎನ್ಮೂರಿ
ಲಿರಿಸಿಸ್ಟ್ಸ್ : ಅರ್ಜುನ್ ಲೆವಿಸ್ | ಲೋಕು ಕುಡ್ಲ
ಕೊರಿಯೋಗ್ರಾಫರ್ : ‘ಭಜರಂಗಿ’ ಮೋಹನ್.
ವರದಿ : ಸತೀಶ್ ಕಾಪಿಕಾಡ್
Comments are closed.