UAE

ಸಂಪೂರ್ಣ ಲಸಿಕೆ ಪಡೆದವರಿಗೆ ಇಂದಿನಿಂದ ಸಿಗಲಿದೆ ಯುಎಇ ವೀಸಾ

Pinterest LinkedIn Tumblr

ದುಬೈ: ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸಿಗರ ಆಗಮನಕ್ಕೆ ನಿರ್ಬಂಧ ಹೇರಿದ್ದ ಸಂಯುಕ್ತ ಅರಬ್‌ ಗಣರಾಜ್ಯ (ಯುಎಇ) ಸೋಮವಾರದಿಂದ ಪ್ರವಾಸಿಗರಿಗೆ ವೀಸಾ ನೀಡಲಿದೆ.

ಸಂಪೂರ್ಣ ಲಸಿಕೆ ಪಡೆದ ಪ್ರವಾಸಿಗರಿಗೆ ಮಾತ್ರ ವೀಸಾ ನೀಡಲಾಗುವುದು. ದುಬಾೖಯಲ್ಲಿ ಅಕ್ಟೋಬರ್‌ನಿಂದ ಆರು ತಿಂಗಳುಗಳ ಕಾಲ ದುಬಾೖ ಎಕ್ಸ್‌ಪೋ 2020 ನಡೆಯಲಿದ್ದು ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ಭಾಗವಹಿಸುವ ನಿರೀಕ್ಷೆಯಿದೆ.

ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಲಸಿಕೆಯ ಸಂಪೂರ್ಣ ಡೋಸೇಜ್‌ ಲಸಿಕೆ ಪಡೆದ ಪ್ರವಾಸಿಗರು ಯುಎಇ ಪ್ರವಾಸಿ ವೀಸಾ ಪಡೆಯಬಹುದು. ಪ್ರವಾಸಿಗರಿಗೆ ವಿಮಾನ ನಿಲ್ದಾಣದಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗುವುದು ಕಡ್ಡಾಯ.

Comments are closed.