ದುಬೈ: ನಾಟಕಕಾರ, ನ್ಯಾಯವಾದಿ ಶಶಿರಾಜ್ ರಾವ್ ಕಾವೂರುರವರ ನೂತನ ತುಳು ಕಾದಂಬರಿ ‘ಪುದ್ದು ಕೊಡ್ತರ್- ಕೊರಗೆರ್ನ ಗುರಿಕಾರೆ’ ದುಬೈ-ಯು.ಎ.ಇ.ಯ ದೇರಾ-ದ ರೋಲೆಕ್ಸ್ ಟವರ್‌ನಲ್ಲಿ ಇದೇ ಎಪ್ರಿಲ್ 24 ರಂದು ಬೆಳಿಗ್ಗೆ 10.30ಕ್ಕೆ ಬಿಡುಗಡೆಗೊಳ್ಳಲಿದೆ.
ದುಬೈನ ಗಮ್ಮತ್ತ್ ಕಲಾವಿದರ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು ಯುಎಇಯ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ.
ಗಮ್ಮತ್ತ್ ಕಲಾವಿದೆರ್ ದುಬೈನ ಗೌರವಾಧ್ಯಕ್ಷರೂ, ಚಿತ್ರ ನಿರ್ಮಾಪಕರೂ ಆದ ಹರೀಶ್ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಎನ್.ಆರ್.ಐ. ಫೋರಮ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಚಿತ್ರ ನಿರ್ಮಾಪಕ ರೋನಾಲ್ಡ್ ಮಾರ್ಟಿಸ್, ಕಲಾ ನಿರ್ದೇಶಕ, ಬರಹಗಾರ ಗಣೇಶ್ ರೈ, ಶಾರ್ಜಾ ಕರ್ನಾಟಕ ಸಂಘದ ನಿಲಟಪೂರ್ವ ಅಧ್ಯಕ್ಷರಾದ ಸತೀಶ್ ಪೂಜಾರಿ, ಹಾಲಿ ಅಧ್ಯಕ್ಷರಾದ ಎಮ್.ಇ.ಮೂಳೂರು, ಗಮ್ಮತ್ತ್ ಕಲಾವಿದೆರ್ ದುಬೈನ ಅಧ್ಯಕ್ಷರಾದ ರಾಜೇಶ್ ಕುತ್ತಾರ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ತುಳುನಾಡಿನ ಮೂಲನಿವಾಸಿಗಳಾದ ಮತ್ತು ತುಳು ಮಣ್ಣಿನ ಮಕ್ಕಳಾದ ಕೊರಗರ ಜೀವನಶೈಲಿ ವಿವರಿಸುವ ಮತ್ತು ತುಳುನಾಡಿನ ವಿವಿಧ ಘಟನಾವಳಿಗಳನ್ನು ಕಾದಂಬರಿ ಒಳಗೊಂಡಿದೆ. ದುಬೈನಲ್ಲಿ ತುಳು ಕಾದಂಬರಿ ಬಿಡುಗಡೆ ಮಾಡುವ ಮೂಲಕ ತುಳು ಸಾಹಿತ್ಯದ ಸೇವೆ ಸಲ್ಲಿಸುವುದಲ್ಲದೆ ತುಳುವಿನ ಕಂಪನ್ನು ಕೊಲ್ಲಿ ರಾಷ್ಟ್ರದಲ್ಲಿ ಹರಡುವ ಕೈಂಕರ್ಯಕ್ಕೆ ತುಳುವರ ಬೆಂಬಲ ಕೋರಲಾಗಿದೆ ಎಂದು ಕಾರ್ಯಕ್ರಮ ಸಂಘಟಕ, ಗಮ್ಮತ್ತ್ ಕಲಾವಿದೆರ್ ತಂಡದ ಪ್ರಧಾನ ಕಾರ್ಯದರ್ಶಿ ಗಿರೀಶ್ ನಾರಾಯಣ್ ತಿಳಿಸಿದ್ದಾರೆ.
Comments are closed.