UAE

ಸರ್ವ ಧರ್ಮ ಸಮನ್ವಯಕ್ಕೆ ಸಾಕ್ಷಿಯಾದ ಕರ್ನಾಟಕ ಸಂಘ ಶಾರ್ಜಾ ಇಫ್ತಾರ್‌ ಕೂಟ

Pinterest LinkedIn Tumblr

ದುಬೈ: ಕಳೆದ ಸುಮಾರು 20 ವರ್ಷಗಳಿಂದ ಕೊಲ್ಲಿ ರಾಷ್ಟ್ರಗಳಲ್ಲಿ ವಾಸಿಸುವ ಅನಿವಾಸಿ ಕನ್ನಡಿಗರಲ್ಲಿ ಅತೀ ಜನಪ್ರಿಯವಾದ ಕನ್ನಡ ಪರ ಸೇವಾ ಸಂಸ್ಥೆ, ಯು.ಎ.ಇ ಯ ಕರ್ನಾಟಕ ಸಂಘ ಶಾರ್ಜಾ ವತಿಯಿಂದ ಇತ್ತೀಚಿಗೆ ದುಬೈಯ ಹೋಟೆಲ್ ಫಾರ್ಚೂನ್ ಪ್ಲಾಜಾದ ಸಭಾಂಗಣದಲ್ಲಿ ಪವಿತ್ರ ಇಫ್ತಾರ್ ಕೂಟವನ್ನು ಏರ್ಪಡಿಸಲಾಯಿತು.

ಸಂಸ್ಥೆಯ ನಾಯಕರು, ಗೌರವ ಸಲಹೆಗಾರರು, ಪದಾಧಿಕಾರಿಗಳು, ಸದಸ್ಯರು ಮತ್ತು ಹಿತೈಷಿಗಳನ್ನೊಳಗೊಂಡ ಈ ಇಫ್ತಾರ್ ಕಾರ್ಯಕ್ರಮವು ಭಾವೈಕ್ಯತೆ, ಸಹೋದರತೆ ಮತ್ತು ಸರ್ವ ಧರ್ಮ ಸಮನ್ಯತೆಯನ್ನು ಪ್ರೇರೇಪಿಸುವ ಯಶಸ್ವೀ ಕಾರ್ಯಕ್ರಮವಾಗಿ ಮೂಡಿ ಬಂತು.

ಸಂಸ್ಥೆಯ ಅಧ್ಯಕ್ಷರಾದ ಎಂ.ಈ.ಮೂಳೂರು ರವರ ಅಧ್ಯಕ್ಷತೆಯಲ್ಲಿ ನಡೆದ ಈ ಇಫ್ತಾರ್ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಗೌರವ ಸಲಹೆಗಾರ, KNRI ಇದರ ಅಧ್ಯಕ್ಷರು, ಫಾರ್ಚೂನ್ ಗ್ರೂಪ್ ಆ ಹೋಟೆಲ್ಸ್ ಇದರ ಮಾಲಕರು, ಸಮಾಜ ಸೇವಕರಾದ ಪ್ರವೀಣ್ ಕುಮಾರ್ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಂಸ್ಥೆಯ ಪೋಷಕರಾದ ಮಾರ್ಕ್ ಡೆನಿಸ್, ಉಪಾಧ್ಯಕ್ಷರಾದ  ನೋಯೆಲ್ ಅಲ್ಮೇಡಾ,ಪ್ರಧಾನ ಕಾರ್ಯದರ್ಶಿ  ವಿಶ್ವನಾಥ ಶೆಟ್ಟಿ, ಗೌರವ ಸಲಹೆಗಾರರುಗಳಾದ ಗಣೇಶ್ ರೈ., ಸತೀಶ್ ಪೂಜಾರಿ, ಆನಂದ್ ಬೈಲೂರ್, ಅಬ್ರಾರ್ ಅಹ್ಮದ್, ಅಬ್ದುಲ್ ರಾಝಕ್ ದೀವಾ,  ಜೀವನ್ ಕುಕ್ಯಾನ್ ಹಾಗೂ ಇನ್ನಿತರ ಸದಸ್ಯರು ಮತ್ತು ಹಿತೈಷಿಗಳು ಭಾಗವಹಿಸಿದ್ದರು.

ಇಫ್ತಾರ್ ಆದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಎಂ.ಈ ಮೂಳೂರು ರವರು ಸೇರಿದ ಎಲ್ಲರಿಗೂ ಶುಭ ಕೋರುತ್ತಾ, ರಂಜಾನ್ ಉಪವಾಸದ ಮಹತ್ವ ಮತ್ತು ಉದ್ದೇಶವನ್ನು ಹೇಳುತ್ತಾ, ರಂಜಾನ್ ಉಪವಾಸ ಎಂದರೆ ಕೇವಲ ಆಹಾರ ನೀರು ತ್ಯಜಿಸುವುದು ಮಾತ್ರವಲ್ಲ.ಅದರ ಜೊತೆಗೆ ಮನಸ್ಸು, ದೇಹವನ್ನು ಶುದ್ಧಿಯಾಗಿರಿಸಿ ಕೆಟ್ಟ ಯೋಚನೆಗಳು, ಕೆಟ್ಟ ಕರ್ಮಗಳಿಂದ ದೂರವಿದ್ದು ಬಡ ಬಗ್ಗರಿಗೆ ದಾನ ಧರ್ಮ ಮಾಡಿ ನೈಜ ಮಾನವೀಯತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ರಂಜಾನ್ ಉಪವಾಸ ಪರಿಪೂರ್ಣವೂ ದೇವರಿಗೆ ಸ್ವೀಕಾರಾರ್ಹವೂ ಆಗುವುದಕ್ಕೆ ಸಾಧ್ಯ ಎಂದರು. ಸಂಸ್ಥೆಯ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸ ಬೇಕೆಂದು ಕರೆ ನೀಡಿದರು.

ಸಂಸ್ಥೆಯ ಪ್ರಧಾನ ಗೌರವ ಸಲಹೆಗಾರರಾದ ಪ್ರವೀಣ್ ಕುಮಾರ್ ಶೆಟ್ಟಿ ಅವರು ತಮ್ಮ ದಿಕ್ಕೂಚಿ ಭಾಷಣದಲ್ಲಿ ರಂಜಾನ್ ತಿಂಗಳಿನ ಉಪವಾಸದ ಪಾವಿತ್ರತೆ ಮತ್ತು ಸಮರ್ಪಣಾ ಭಾವವನ್ನು ಉಲ್ಲೇಖಿಸುತ್ತಾ ಸರ್ವರಿಗೆ ರಂಜಯನ್ ಶುಭಾಶಯವನ್ನು ಕೋರಿದರು. ಕರ್ನಾಟಕ ಸಂಘ ಶಾರ್ಜಾದ ಬಗ್ಗೆ ಮನ ತುಂಬಿ ಮಾತಾಡುತ್ತಾ ಈ ಸಂಸ್ಥೆಯ ಅನನ್ಯವಾದ ಕಾರ್ಯ ವೈಖರಿ, ಈ ಸಂಸ್ಥೆಯಲ್ಲಿ ಕಂಡು ಬರುವಂತಹ ಭಾವೈಕ್ಯತೆ ಮತ್ತು ಪ್ರೀತಿಯನ್ನು ಉಲ್ಲೇಖಿಸುತ್ತಾ ತಮ್ಮ ಮೆಚ್ಚಿಗೆಯನ್ನು ವ್ಯಕ್ತ ಪಡಿಸಿದರು. ಹಾಗೂ ಈ ಸಂಸ್ಥೆಗೆ ಈ ಮೊದಲಿನಂತೆ ಇನ್ನು ಮುಂದಕ್ಕೂ ತಾನು ಸಹಾಯ ಸಹಕಾರವನ್ನು ನೀಡುವುದಾಗಿ ಭರವಸೆ ಇತ್ತರು.

ಪೋಷಕರಾದ ಮಾರ್ಕ್ ಡೆನಿಸ್ ರವರು ನಮ್ಮ ಸಂಸ್ಥೆಯು ನಿಜಾರ್ಥದಲ್ಲಿ ಒಂದು ಕುಟುಂಬ ಡಾಂಟೆ ಇದು ನಮ್ಮ ನಮ್ಮೊಳಗಿರುವ ಈ ಪ್ರೀತಿ ಮತ್ತು ಐಕ್ಯತೆ ಯಾವತ್ತೂ ಇರಲಿ ಎಂದು ಹಾರೈಸಿದರು.

ಉಪಾಧ್ಯಕ್ಷರಾದ ನಾವಲ್ ಅಲ್ಮೇಡಾ ರವರು ತಮ್ಮ ಉಸ್ತುವಾರಿಯಲ್ಲಿ ನಡೆದ KSS ಸ್ಪೋರ್ಟ್ಸ್ ಮೀಟ್ 2022 ಬಗ್ಗೆ ವಿವರಣೆ ನೀಡುತ್ತಾ ಅದ್ಭುತವಾಗಿ, ಶಿಸ್ತುಭದ್ರವಾಗಿ ಮತ್ತು ಅದ್ದೂರಿಯಾಗಿ ನಡೆದ ಸ್ಪೋರ್ಟ್ಸ್ ಮೀಟ್ ಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಶೆಟ್ಟಿ ಯವರು ಸ್ಪೋರ್ಟ್ಸ್ ಮೀಟ್ ನ ಸಂಪೂರ್ಣ ಯಶಸ್ಸಿನ ಹಿಂದೆ ಸಂಸ್ಥೆಯೂಯ ರೂವಾರಿಗಳ ಕಾರ್ಯ ಕ್ಷಮತೆ ಮತ್ತು ನಿಸ್ವಾರ್ಥ ಸೇವೆಯ ಶಕ್ತಿ ಇದೆ ಎಂದು ಹೇಳಿದರು. ಕೋಶಾಧಿಕಾರಿ ಅಬ್ರಾರ ಅಹ್ಮದ್ ಲೆಕ್ಕ ಪತ್ರವನ್ನು ಮಂಡಿಸಿದರು.

ಗಣೇಶ್ ರೈಯವರು ಸ್ಪೋರ್ಟ್ಸ್ ಮೀಟ್ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ, ಬಹಳ ವ್ಯವಸ್ಥಿತವಾಗಿ ನಡೆದ ಆ ಕಾರ್ಯಕ್ರಮದ ಹಿಂದೆ ನಾವೆಲ್ ಅಲ್ಮೆಡಾ ರವರ ಕಾರ್ಯ ತತ್ಪರತೆ ಮತ್ತು ಕಠಿಣ ಶ್ರಮದ ಶಕ್ತಿ ಇದೆ ಎಂದು ಹೇಳುತ್ತಾ ನಾವಲ್ ಅಡಾರನ್ನು ಮನಸಾರೆ ಅಭಿನಂದಿಸಿದರು.

ಸತೀಶ್ ಪೂಜಾರಿ, ಆನಂದ್ ಬೈಲೂರ್ ಹಾಗೂ ಅಬ್ದುಲ್ ರಜಾಕ್ ದೀವಾ ಸಂಸ್ಥೆಯ ಬಗ್ಗೆ ತಮ್ಮ ಮೆಚ್ಚುಗೆ, ತೃಪ್ತಿ ವ್ಯಕ್ತ ಪಡಿಸುತ್ತಾ ಶುಭ ಹಾರೈಸಿದರು, ಜೀವನ್ ಕುಕ್ಯಾನ್ ವಂದಿಸಿದರು.

ಭೋಜನದ ನಂತರ ಕಾರ್ಯಕ್ರಮವು ಕೊನೆಗೊಂಡಿತು.

Comments are closed.