UAE

ಗ್ಲೋಬಲ್ ಇನ್ನೋವೇಶನ್ ‘ಉತ್ತಮ ಸಮಾಜ ಸೇವಕ’ ಪ್ರಶಸ್ತಿಗೆ ಭಾಜನರಾದ ರಮೇಶ್ ಎಚ್.ಎಸ್ ಜೋಗಿ

Pinterest LinkedIn Tumblr

ಕುಂದಾಪುರ: ದುಬೈನಲ್ಲಿ ಜ.23ರಂದು ನಡೆದ ಗ್ಲೋಬಲ್ ಇನ್ನೋವೇಶನ್ ಅವಾರ್ಡ್ ಸಮಾರಂಭದಲ್ಲಿ ಎಚ್. ಎಸ್ ರಮೇಶ್ ಜೋಗಿ ಕುಂದಾಪುರ ಅವರಿಗೆ ಉತ್ತಮ ಸಮಾಜ ಸೇವಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಜೋಗಿ ಸಮಾಜದಲ್ಲಿ ಉತ್ತಮ ಸಮಾಜ ಸೇವಕ ಪ್ರಶಸ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮುಡಿಗೇರಿಸಿಕೊಂಡ ಪ್ರಥಮ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ರಮೇಶ್ ಎಚ್.ಎಸ್ ಜೋಗಿ ಇವರು ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಹಿಂದುಳಿದ ವರ್ಗಗಳ ಒಕ್ಕೂಟ ಬೆಂಗಳೂರು ನಡೆಸಿದ ರಾಜ್ಯ ಮಟ್ಟದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಾಂಸ್ಕೃತಿಕ ಮತ್ತು ಸಾಹಿತ್ಯ ಕಲೋತ್ಸವ ಕಾರ್ಯಕ್ರಮದಲ್ಲಿ ಸಮಾಜಸೇವೆ ವಿಭಾಗದಲ್ಲಿ ‘ಸಾಧಕ ರತ್ನ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿ, ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ.

ಅಲ್ಲದೆ ಇವರು ಉಡುಪಿ ಜಿಲ್ಲೆಯ ಎನ್. ಟಿ ಮತ್ತು ಎಸ್.ಎನ್.ಟಿ ಸಲಹಾ ಸಮಿತಿಯ ಕರ್ನಾಟಕ ಸರ್ಕಾರದ ನಾಮ ನಿರ್ದೇಶಿತ ಸದಸ್ಯರಾಗಿದ್ದಾರೆ.

Comments are closed.