UAE

ಬ್ಯಾರಿಸ್ ಕಲ್ಚರಲ್ ಆಫ್ ಫೋರಂ ದುಬೈ ಯುಎಇ ವತಿಯಿಂದ ಸೌಹಾರ್ದ ಬಿ.ಸಿ.ಎಫ್. ಇಫ್ತಾರ್ ಮೀಟ್- 2023

Pinterest LinkedIn Tumblr

ಚಿತ್ರಗಳು: ಅಶೋಕ್ ಬೆಳ್ಮನ್ (ದುಬೈ)
ದುಬೈ: ಬ್ಯಾರಿಸ್ ಕಲ್ಚರಲ್ ಆಫ್ ಫೋರಂ ದುಬೈ ಯುಎಇ ಇದರ ವತಿಯಿಂದ ಸೌಹಾರ್ದ ಬಿ.ಸಿ.ಎಫ್. ಇಫ್ತಾರ್ ಮೀಟ್- 2023 ದುಬೈನಲ್ಲಿ ಅದ್ದೂರಿಯಾಗಿ ಜರುಗಿತು.

ನಗರದ ದೇರಾದ ದುಬೈ ಹಾಸ್ಪಿಟಲ್‌ ನ ಮುಂಬಾಗದಲ್ಲಿರುವ ದುಬೈ ವಿಮೆನ್ ಅಸೋಸಿಯೇಷನ್ ಬಿಲ್ಡಿಂಗ್ ನ ಅಲ್ ಝಹಿಯ ಬ್ಯಾಂಕ್ವೆಟ್ ಹಾಲ್ ನಲ್ಲಿ ಕರ್ನಾಟಕ ಪರ ಎಲ್ಲಾ ಕನ್ನಡ ತುಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರ ಕೂಡುವಿಕೆಯಿಂದ ಸೌಹಾರ್ದತೆಯ ಇಫ್ತಾರ್ ಕೂಟಕ್ಕೆ ಸಾಕ್ಷಿಯಾಯಿತು.

ಇಫ್ತಾರ್ ಕೂಟದ ಮೊದಲು ಬಿ.ಸಿ.ಎಫ್. ಸದಸ್ಯರ ಮಕ್ಕಳಿಗೆ ಇಸ್ಲಾಮಿಕ್ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಕುರನ್ ಪಠನ ಕಾರ್ಯಕ್ರಮ ನಡೆಯಿತು. ಇಸ್ಲಾಮಿಕ್ ರಸಪ್ರಶ್ನೆನಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ನಂತರ ನಡೆದ ಸರಳ ಸಭಾ ಕಾರ್ಯಕ್ರಮ ಬಿ.ಸಿ.ಎಫ್.ನ ಅಧ್ಯಕ್ಷರು, ಮಹಾ ಪೋಷಕರಾದ ಡಾ. ಬಿ.ಕೆ.ಯೂಸುಫ್ ರವರ ಅಧ್ಯಕ್ಷತೆಯಲ್ಲಿ ಜರುಗಿದ್ದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ರಂಜಾನ್ ಪವಿತ್ರ ತಿಂಗಳ ಸಂದೇಶಗಳನ್ನು ತಿಳಿ ಹೇಳುತ್ತಾ ಬಿ.ಸಿ.ಎಫ್. ನ ಕಾರ್ಯ ವೈಖರಿಯನ್ನು ವಿವರಿಸುತ್ತ ಎಲ್ಲರೂ ಸಹಕರಿಸಬೇಕಾಗಿ ವಿನಂತಿಸಿದರು.

ಕರ್ನಾಟಕ ಪರ ಎಲ್ಲಾ ತುಳು ಕನ್ನಡ ಸಂಘ ಸಂಸ್ಥೆಗಳ ಪರವಾಗಿ ಕರ್ನಾಟಕ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ ಮಾತನಾಡಿ ಸೌಹಾರ್ದಯುತ ಇಫ್ತಾರ್ ಕೂಟಕ್ಕೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಬಿ.ಸಿ.ಎಫ್.ನ ಗೌರವ ಮಹಾ ಪೋಷಕ ಡಾ.ತುಂಬೆ ಮೊಯ್ದೀನ್ ರವರ ಪ್ರತಿನಿಧಿಯಾಗಿ ತುಂಬೆ ಗ್ರೂಪ್ ಹಾಸ್ಪಿಟಾಲಿಟಿ ಮ್ಯಾನೇಜರ್ ಫರ್ಹಾದ್,ಅಲ್ ಅಜ್ ತಾಹಾ ಬಾಫಕಿ ತಂಗಳ್ (ಗೌರವಧ್ಯಕ್ಷರು ಡಿಕೆಎಸ್ಸಿ),ಅಲ್ ಹಾಜ್ ಅಸ್ಗರಲಿ ತಂಗಳ್ ( ಗೌರವಾಧ್ಯಕ್ಷರು ಕೆಐಸಿ ಯುಎಇ), ಕೆ.ಸಿ.ಎಫ್.ನ ಅಲ್ ಹಾಜ್ ಮೆಹಬೂಬ್ ಸಖಾಫಿ, ಎಮಿರೇಟ್ಸ್ ಗ್ಲಾಸ್ ನ ಜನಾಬ್ ರಿಜ್ವಾನುಲ್ಲಾ ಖಾನ್, ಗಡಿಯಾರ್ ಗ್ರೂಪ್ ನ ಜನಾಬ್ ಇಬ್ರಾಹಿಂ ಗಡಿಯಾರ್, ನಫೀಸ್ ಗ್ರೂಪ್ ಬ ಜನಾಬ್ ಅಬೂಸಾಲಿಹ್, ಮಹಾ ಪೋಷಕ ಜೋಸೆಫ್ ಮಥಿಯಾಸ್, ಕರ್ನಾಟಕ ಸಂಘ ಶಾರ್ಜಾದ ಉಪಾಧ್ಯಕ್ಷ ನೊವೆಲ್ ಅಲ್ಮೆಡಾ, ಟೆಕ್ನೋಫಿಟ್ ನ ಸಾದಿಕ್, ಭಟ್ಕಳ ಜಮಾತ್ ನ ಮುಅಲ್ಲಿಂ, ಅಶ್ಫಾಕ್ ಸದಾ, ಐ.ಎಫ್.ಎಫ್.ಸಿ.ಒ ಮ್ಯಾನೇಜರ್ ಖಾಲಿದ್, ಬಿಲ್ಲವಾಸ್ ದುಬೈಯ ಆನಂದ ಬೈಲೂರು, ದುಬೈ ಕರ್ನಾಟಕ ಸಂಘದ ಉಪಾಧ್ಯಕ್ಷ ದಯಾ ಕಿರೋಡಿಯನ್, ದುಬೈ ಲಿಂಗಾಯತರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ಗಮ್ಮತ್ ಕಲಾವಿದರು ದುಬೈಯ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.

ಬಿ.ಸಿ.ಎಫ್.ನ ಇಫ್ತಾರ್ ಕೂಟ ಸಮಿತಿಯ ಅಧ್ಯಕ್ಷ ಅಬ್ದುಲ್ ಲತೀಫ್ ಮೂಲ್ಕಿ ಮತ್ತು ಬಿ.ಸಿ.ಎಫ್.ನ ಉಪಾಧ್ಯಕ್ಷ ಎಂ.ಈ.ಮೂಳುರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾರಿಸ್ ಕಲ್ಚರಲ್ ಫೋರಂ ದುಬೈ ಯುಎಇ ಯ ಪದಾಧಿಕಾರಿಗಳಾದ ಜನಾಬ್ ಬಿ.ಎಮ್. ಮುಮ್ತಝ್ ಅಲಿ, ಅಮಿರುದ್ದಿನ್ ಎಸ್.ಐ, ಆಫೀಖ್ ಹುಸೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿ.ಸಿ.ಎಫ್ ನ ಕಾರ್ಯದರ್ಶಿ ಡಾ.ಕಾಪು ಮಹಮ್ಮದ್ ಅವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Comments are closed.