UAE

ದುಬಾಯಿಯಲ್ಲಿ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ 2023 ಆಚರಣೆಗೆ ಸರ್ವ ಸಿದ್ಧತೆ

Pinterest LinkedIn Tumblr

ದುಬೈ: ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಪ್ರಾಯೋಜಕತ್ವದಲ್ಲಿ, ‘ಮಕ್ಕಳಿಗೆ ತಾಯ್ನಾಡಿನ ಪರಂಪರೆ-ಕಲೆ- ಸಂಸ್ಕೃತಿ-ಹಬ್ಬ-ಆಚರಣೆಗಳ ಪರಿಚಯ ಯೋಜನೆಯಡಿಯಲ್ಲಿ’ ಕಳೆದ ಕೆಲ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವಂತೆ, ಮತ್ತಷ್ಟು ವೈಭವ-ಸಡಗರ ಮತ್ತು ನವರೂಪದಿಂದ ಈ ಬಾರಿ ಕೂಡ ‘ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ -2023’ ಆಚರಣೆಗೆ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ದಿನಾಂಕ 10-09-2023 ನೇ ಭಾನುವಾರದಂದು ದುಬಾಯಿ -ಗೀಸೈಸ್ ನ ಮದಿನ ಹೈಪರ್ ಮಾರುಕಟ್ಟೆ
ಹಿಂದುಗಡೆ ಇರುವ ಆಕ್ಷಫರ್ಡ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಬೆಳಿಗ್ಗೆ ಗಂಟೆ 9.00 ಕ್ಕೆ ಪೂಜಾ ಸಂಕಲ್ಪದಿಂದ ಆರಂಭವಾಗಿ
ಸಂಜೆ 4.00 ಗಂಟೆಗೆ ವೈಭವದ ವಿಠಲ ಪಿಂಡಿ-ಮೊಸರು ಕುಡಿಕೆ ಮೆರವಣಿಗೆಗಳೊಂದಿಗೆ ಸಂಪನ್ನಗೊಳ್ಳಲಿದೆ.

ಶ್ರೀಕೃಷ್ಣನ ವಿಧಿಬದ್ಧ ಪೂಜೆ-ವಿಷ್ಣು ಸಹಸ್ರನಾಮ-ಭಜನೆಗಳ ಸಹಿತ ನಡೆಯಲಿರುವ ಕಾರ್ಯುಕ್ರಮದಲ್ಲಿ
ಸಾರ್ವಜನಿಕರಿಗಾಗಿ ವಿವಿಧ ವಯಸ್ಸಿನ ಮಕ್ಕಳಿಗಾಗಿ ಯಶೋಧೆ ಕೃಷ್ಣ, ಮುದ್ದುಕೃಷ್ಣ, ಬಾಲಕೃಷ್ಣ ವೇಷ ಸ್ಪರ್ಧೆಯ ಜೊತೆಗೆ, ಅಭ್ಯಾಸ ಕೇಂದ್ರದ ವಿದ್ಯಾರ್ಥಿಗಳು, ಕಲಾವಿದರು ಮತ್ತು ಹೆತ್ತವರನ್ನೊಳಗೊಂಡ ನಾಲ್ಕು ತಂಡಗಳು ಕಿಶೋರ ಕೃಷ್ಣ ಎಂಬ ವಿಶಿಷ್ಟ ಸ್ಪರ್ಧಾ ಕಾರ್ಯಕ್ರಮದ ಮೂಲಕ ಭಕ್ತಮಹಾಶಯರ ಸಮ್ಮುಖದಲ್ಲಿ ಅತ್ಯದ್ಭುತವಾಗಿ ಕೃಷ್ಣ ಕಥೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

ಮಾತ್ರವಲ್ಲದೆ, ಭಗವದ್ಭಕ್ತರಿಗೆ ಸಾರ್ವಜನಿಕರಿಗೆ ಶ್ರೀಕೃಷ್ಣನ ಪ್ರೀತ್ಯರ್ಥ ಪೂಜೆ ಮಾಡಿಸಿ ಕೃತಾರ್ಥರಾಗುವ ಅವಕಾಶವನ್ನು ಕೂಡ ಸಂಘಟಕರು ಒದಗಿಸಿದ್ದಾರೆ.
ಜೊತೆಗೆ ಸಾರ್ವಜನಿಕರಿಗಾಗಿ ಜಾನಪದ ಆಟೋಟ ಮತ್ತು ಪ್ರೀತಿ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿದೆ.
ದುಬಾಯಿ-ಯುಎಇ,ಯ ಸಮಸ್ತ ಗಣ್ಯರು, ಕಲಾಭಿಮಾನಿಗಳ ಸಮ್ಮುಖದಲ್ಲಿ ಸಂಪನ್ನಗೊಳ್ಳಿರುವ ಈ ಕಾರ್ಯಕ್ರಮ ಮಹಾಮಂಗಳಾರತಿಯ ನಂತರ, ವೈಭವದ ವಿಠಲ ಪಿಂಡಿ, ಮೊಸುರುಕುಡಿಕೆ, ಮೆರವಣಿಗೆ ಗಳ ಮೂಲಕ ಸಮಾಪ್ತಿಗೊಳ್ಳಲಿದೆ.

ಯುಎಇ,ಯ ಸಮಸ್ತ ಭಕ್ತಮಹಾಶಯರು ಈ ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಭಗವಾನ್ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಬೇಕೆಂದು ಅಕ್ಕರೆಯ ಆಮಂತ್ರಣವನ್ನು ನೀಡಿದ್ದಾರೆ, ಯಕ್ಷಗಾನ ಅಭ್ಯಾಸ ಕೇಂದ್ರದ ಪರವಾಗಿ ಸಂಚಾಲಕರಾದ ಕೊಟ್ಟಿಂಜ ದಿನೇಶ ಶೆಟ್ಟಿಯವರು. ಆಯೋಜಕರ ಪರವಾಗಿ ಗಿರೀಶ್ ನಾರಾಯಣ ಕಾಟಿಪಳ್ಳರವರು ಪತ್ರಿಕಾ ಪ್ರಕಟಣೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ 2023ರ ಕಾರ್ಯಕ್ರಮಗಳ ಪೂರ್ಣವಿವರಗಳನ್ನು ಒದಗಿಸಿದರು.

Comments are closed.