UAE

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ; ನೂತನ ಸಾರಥಿಗಳ ಆಯ್ಕೆ, ವಾರ್ಷಿಕ ಮಹಾಸಭೆ

Pinterest LinkedIn Tumblr

ದುಬೈ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಇದರ ನೂತನ ಸಾರಥಿಗಳ ಆಯ್ಕೆ ಮತ್ತು ವಾರ್ಷಿಕ ಮಹಾಸಭೆ ಇತ್ತೀಚೆಗೆ ಜರುಗಿತು.

ನಗರದ ಅಬು ಹೈಲ್ ನ ಫುಡ್ ಕೋರ್ಟ್ ರೆಸ್ಟೋರೆಂಟ್ ನಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ದುಬೈಯ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆಯವರು ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ಪದಾಧಿಕಾರಿಗಳಾದ ಎ.ಆರ್. ಸುಬ್ಬಯಕಟ್ಟೆ, ಝಡ್ ಕಯ್ಯಾರ್, ಸುಗಂದರಾಜ್ ಬೇಕಲ್, ಸದನ್ ದಾಸ್ ಉಪಸ್ಥಿತರಿದ್ದರು.

ಡಿಸೆಂಬರ್ ತಿಂಗಳಲ್ಲಿ ವಾರ್ಷಿಕ ಕಾರ್ಯಕ್ರಮವನ್ನು ಮಾಡುವ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು ಮತ್ತು ನೂತನ ಸಮಿತಿಯ ಸಾರಥಿಗಳ ಆಯ್ಕೆ ಮಾಡಲಾಯಿತು.

ಸಲಹಾ ಸಮಿತಿಯ ಗೌರವ ಅಧ್ಯಕ್ಷರಾಗಿ ಅಬ್ದುಲ್ಲ ಮಾದುಮೂಲೆ, ಸಲಹಾ ಸಮಿತಿಯ ಸದಸ್ಯರಾಗಿ, ಡಾ. ಅಬ್ದುಲ್ ರಹಿಮಾನ್ ಬಾವ, ಸದನ್ ದಾಸ್ ಶಿರೂರು, ಸುಗಂಧರಾಜ್ ಬೇಕಲ್, ಅಮೀನ್ ಸಾಹೇಬ್ ಮಂಜೇಶ್ವರ ಅಲಿ ಸಾಗ್, ಮೊಯಿದಿನ್ ಬಾವ ಹೊಸಂಗಡಿ, ಅಬ್ದುಲ್ ರಶೀದ್ ಬಾಯಾರ್, ಅಧ್ಯಕ್ಷರಾಗಿ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆ, ಉಪಾಧ್ಯಕ್ಷರಾಗಿ ಮಂಜುನಾಥ್ ಕಾಸರಗೋಡು, ಶಾಫಿ ಭಂಡಶಾಲೆ, ಯೂಸುಫ್ ಶೇಣಿ, ಅಶ್ರಫ್ ಪಾವೂರ್, ಜೋಯ್ ವಿನ್ ಸೆಂಟ್ ಕಯ್ಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಮರದೀಪ್ ಕಲ್ಲೂರಾಯ, ಜತೆ ಕಾರ್ಯದರ್ಶಿ ಯಾಗಿ ಆಸೀಫ್ ಹೊಸಂಗಡಿ, ಅನೀಶ್ ಶೆಟ್ಟಿ ಮಡಂದೂರು, ಅಶ್ರಫ್ ಕ್ಲಾಸಿಕ್, ಅಶ್ರಫ್ ಬಾಯಾರ್, ಅಮಾನುಲ್ಲ ಮೀಂಜ, ಕೋಶಾಧಿಕಾರಿಯಾಗಿ ಇಬ್ರಾಹಿಂ ಬಾಜೂರಿ, ಸಾಂಸ್ಕೃತಿಕ ಸಂಯೋಜಕರಾಗಿ ರಾಮಚಂದ್ರ ಬೆದ್ರಡ್ಕ, ಮಾಧ್ಯಮ ಸಂಯೋಜಕರಾಗಿ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್, ಕ್ರೀಡಾ ಸಂಯೋಜಕರಾಗಿ ಹಸ್ಸನ್ ಕುಡ್ವರವರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.

Comments are closed.