ದುಬೈ: ದುಬಾಯಿ -ಗೀಸೈಸ್ ನ ಮದಿನ ಹೈಪರ್ ಮಾರುಕಟ್ಟೆ ಹಿಂದಿನ ಆಕ್ಷಫರ್ಡ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಬೆಳಿಗ್ಗೆ ಗಂಟೆ 9.00 ಕ್ಕೆ ಪೂಜಾ ಸಂಕಲ್ಪದಿಂದ ಆರಂಭವಾಗಿ ಸಂಜೆ 5.00 ಗಂಟೆಗೆ ತನಕ, ಭಜನೆ, ವಿಷ್ಣು ಸಹಸ್ರನಾಮ, ಶ್ರೀಕೃಷ್ಣ ವೇಷ ಸ್ಪರ್ಧೆ,ಜಾನಪದ ಆಟೋಟಗಳು, ಮುಂತಾದ ಅನೇಕ ವೈಶಿಷ್ಯಗಳ ಜೊತೆ ಮಹಾಮಂಗಳಾರತಿಯ ನಂತರ, ವೈಭವದ ವಿಠಲ ಪಿಂಡಿ, ಮೊಸುರುಕುಡಿಕೆ, ಮೆರವಣಿಗೆ ಹೀಗೆ ವೈಭವಪೂರ್ಣವಾಗಿ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ 2023 ಸಂಪನ್ನಗೊಂಡಿತು. ಭವಾನಿಶಂಕರ ಶರ್ಮ, ಸಂತೋಷ್ ರಾವ್ ಪೂಜಾ ವಿಧಿಗಳನ್ನು ನಡೆಸಿಕೊಟ್ಟರು.
ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಪ್ರಾಯೋಜಕತ್ವದಲ್ಲಿ, “ಮಕ್ಕಳಿಗೆ ತಾಯ್ನಾಡಿನ ಪರಂಪರೆ-ಕಲೆ- ಸಂಸ್ಕೃತಿ-ಹಬ್ಬ-ಆಚರಣೆಗಳ ಪರಿಚಯ ಯೋಜನೆಯಡಿಯಲ್ಲಿ ” ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಉದ್ದೇಶ ಸಾಧನೆಯಲ್ಲಿ ಸಂಸ್ಥೆ ಬಹುತೇಕ ಯಶಸ್ವಿಯಾಗಿದೆ. ವಿವಿಧ ವಯಸ್ಸಿನ ಮಕ್ಕಳಿಗಾಗಿ ಯಶೋಧೆ ಕೃಷ್ಣ, ಮುದ್ದುಕೃಷ್ಣ, ಬಾಲಕೃಷ್ಣ ವೇಷ ಸ್ಪರ್ಧೆಯ ಜೊತೆಗೆ, ಅಭ್ಯಾಸ ಕೇಂದ್ರದ ವಿದ್ಯಾರ್ಥಿಗಳು, ಕಲಾವಿದರು ಮತ್ತು ಹೆತ್ತವರನ್ನೊಳಗೊಂಡ ನಾಲ್ಕು ತಂಡಗಳು *ಕಿಶೋರ ಕೃಷ್ಣ* ಎಂಬ ವಿಶಿಷ್ಟ ಸ್ಪರ್ಧಾ ಕಾರ್ಯಕ್ರಮದ ಮೂಲಕ ಭಕ್ತಮಹಾಶಯರ ಸಮ್ಮುಖದಲ್ಲಿ ಅತ್ಯದ್ಭುತವಾಗಿ ಕೃಷ್ಣ ಕಥೆಗಳನ್ನು ಪ್ರಸ್ತುತ ಪಡಿಸಿದರು. ಕಲಾಭಿಮಾನಿ ಭಕ್ತ ಮಹಾಶಯರು ಶ್ರೀಕೃಷ್ಣನ ಪೂಜೆ- ಕೃಷ್ಣ ಕಥಾ ಶ್ರವಣ – ದರ್ಶನದಿಂದ ಕೃತಾರ್ಥರಾದರು. ಜೊತೆಗೆ ಸಾರ್ವಜನಿಕರಿಗಾಗಿ *ಜಾನಪದ ಆಟೋಟ ಮತ್ತು ಪ್ರೀತಿ ಭೋಜನದ*ಲ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಶ್ರೀಕೃಷ್ಣ ವೇಷ ಸ್ಪರ್ಧೆಗೆ ತೀರ್ಪುಗಾರರಾಗಿ- ನೃತ್ಯಾಭಿನಯ ಪಟುಗಳೂ ಕಲಾಗುರುಗಳೂ ಆದ ಡಾ. ನಿವೇದಿತಾ ಶೆಟ್ಟಿ, ಅಕ್ಷತಾ ಜಿ ಆಚಾರ್ಯ, ರೂಪಾ ಕಿರಣ್, ಸುಧಾಕರ್ ರಾವ್ ಪೇಜಾವರ ಸಹಕರಿಸಿದರು. ಎಲ್ಲಾ ವಿಜೇತರಿಗೂ ಮಾತ್ರವಲ್ಲದೆ ಭಾಗವಹಿಸುವಿಕೆ ಮೂಲಕ ತೀರ್ಪುಗಾರರ ಮತ್ತು ಜನಮೆಚ್ಚುಗೆ ಪಡೆದ ಎಲ್ಲರಿಗೂ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ. ಪರವಾಗಿ ಹಾರ್ದಿಕ ಅಭಿನಂದಿಸಿ, ಗಣ್ಯರ ಅಮೃತ ಹಸ್ತದಿಂದ ಎಲ್ಲರೂ ಬಹುಮಾನಗಳನ್ನು ಪಡೆದುಕೊಂಡರು.
ಪ್ರಶಸ್ತಿ ವಿಜೇತರ ವಿವರ
*ಯಶೋಧೆ ಕೃಷ್ಣ* – ಪ್ರಥಮ- ಪಂಚಶೂಲ್, ದ್ವಿತೀಯ- ಇವಾಂಶಿಕಾ ಶೆಟ್ಟಿ
*ಮುದ್ದು ಕೃಷ್ಣ* – ಪ್ರಥಮ- ದೇಷ್ಣಾ ಪ್ರವೀಣ್, ದ್ವಿತೀಯ- ಅದ್ರಿತಿ ದೀಪಕ್
*ಬಾಲ ಕೃಷ್ಣ* – ಪ್ರಥಮ – ಅಥರ್ವ ವಸಂತ ಶೆಟ್ಟಿ, ದ್ವಿತೀಯ – ದಿಯ ವಲ್ಲಭನ್
*ಕಿಶೋರ ಕೃಷ್ಣ* – ಪ್ರಥಮ – ನರನಾರಾಯಣ ತಂಡ ( ನಾಯಕಿ – ಇಶಿತಾ ಶೇಕರ ಪೂಜಾರಿ)
ದ್ವಿತೀಯ- ಭೀಮ ಶಂಕರ ತಂಡ ( ನಾಯಕ – ಆದಿತ್ಯ ದಿನೇಶ ಶೆಟ್ಟಿ)
ತೃತೀಯ – ಕೃಷ್ಣಾರ್ಜುನ ತಂಡ ( ನಾಯಕ – ಸತೀಶ ಶೆಟ್ಟಿಗಾರ್ ವಿಟ್ಲ)
ಚತುರ್ಥ – ರಾಮಾಂಜನೇಯ ತಂಡ ( ನಾಯಕಿ – ವೈಷ್ಣವಿ ಪದ್ಮಶಾಲಿ )
*ಕಿಶೋರ ಕೃಷ್ಣ ವಿಶೇಷ ಬಹುಮಾನಗಳು*
1.*ಉತ್ತಮ – ಕಥೆ/ಪಾತ್ರಗಳಿಗೆ ಉಚಿತವಾದ ಪ್ರಸಾಧನ/ವೇಷಭೂಷಣ/ರಂಗಪರಿಕರ*
ಪ್ರಥಮ – ನರ ನಾರಾಯಣ ತಂಡ, ದ್ವಿತೀಯ – ಭೀಮ ಶಂಕರ ತಂಡ
2.*ಉತ್ತಮ ಕಥಾಹಂದರ ಮತ್ತು ಸಂದೇಶ* – ಪ್ರಥಮ – ನರ ನಾರಾಯಣ ತಂಡ, ದ್ವಿತೀಯ – ರಾಮಾಂಜನೇಯ ತಂಡ
3.*ಕಥಾನಿರೂಪಣೆ ಮತ್ತು ಕಾರ್ಯಕ್ರಮ ನಿರೂಪಣೆ* – ಪ್ರಥಮ – ಸೌಮ್ಯ ಭಾಸ್ಕರ್- ತಂಡ ನರ ನಾರಾಯಣ, ದ್ವಿತೀಯ – ಪವಿತ್ರ ದೀಪಕ್ ಮತ್ತು ಮೋಹನ್ ಗುಜರನ್ – ತಂಡ ಭೀಮ ಶಂಕರ
4.*ಉತ್ತಮ ನಿರ್ದೇಶನ*- ಪ್ರಥಮ – ಇಶಿತಾ ಶೇಕರ ಮತ್ತು ಯಶಸ್ವಿ ಶೇಕರ ಪೂಜಾರಿ – ತಂಡ ನರ ನಾರಾಯಷ
ದ್ವಿತೀಯ – ಪವಿತ್ರ ದೀಪಕ್ ಮತ್ತು ಆನಂದ ಸಾಲ್ಯಾನ್ – ತಂಡ ಭೀಮಶಂಕರ
5.*ಒಟ್ಟು ಪ್ರದರ್ಶನದ ಅಭಿನಯ ಗುಣಮಟ್ಟ* – ಪ್ರಥಮ – ನರ ನಾರಾಯಣ ತಂಡ, ದ್ವಿತೀಯ – ಭೀಮಶಂಕರ ತಂಡ
ಜಾನಪದ ಆಟೋಟ ಸ್ಪರ್ಧೆ
ಮಡಕೆ ಒಡೆಯುವ ಸ್ಪರ್ದೆ- ಮಕ್ಕಳ ವಿಭಾಗ – ಶಿಪ್ರ ಮೋಹನ್ – ಪ್ರಥಮ
ಮಡಕೆ ಒಡೆಯುವ ಸ್ಪರ್ದೆ- ಮಹಿಳೆಯರ ವಿಭಾಗ– ಸೌಮ್ಯ ಭಾಸ್ಕರ್ ಸಾಲ್ಯಾನ್ – ಪ್ರಥಮ
ಬಹುಮಾನಿತ ಮತ್ತು ಭಾಗವಹಿಸಿದ ಎಲ್ಲಾ ಮಕ್ಕಳಿಗೆ ದೊರೆತ ಬಗೆಬಗೆಯ ಬಹುಮಾನಗಳು
ವೈಯಕ್ತಿಕ ಪ್ರಥಮ ಮತ್ತು ದ್ವಿತೀಯ- ಬಾಲಕೃಷ್ಣ ಶೆಟ್ಟಿ ಮತ್ತು ದಿನೇಶ ಶೆಟ್ಟಿ ಪ್ರಾಯೋಜಿತ ಬೆಳ್ಳಿ ನಾಣ್ಯ, ವಾಸು ಕುಮಾರ್ ಶೆಟ್ಟಿ ಪ್ರಾಯೋಜಿತ ಬ್ರಿಟಾನಿಯ ಗಿಪ್ಟ್ ಹ್ಯಾಂಪರ್, ಸ್ಮರಣಿಕೆ ಮತ್ತು ಅಭಿನಂದನಾ ಪತ್ರ.
ಭಾಗವಹಿಸಿದ ಎಲ್ಲರಿಗೂ – ವಾಸು ಕುಮಾರ್ ಶೆಟ್ಟಿ ಪ್ರಾಯೋಜಿತ ಬ್ರಿಟಾನಿಯ ಗಿಪ್ಟ್ ಹ್ಯಾಂಪರ್, ಸ್ಮರಣಿಕೆ ಮತ್ತು ಅಭಿನಂದನಾ ಪತ್ರ.
ತಂಡ ವಿಶೇಷ ಪ್ರಶಸ್ತಿ ಪ್ರಥಮ ಮತ್ತು ದ್ವಿತೀಯ – ಬಾಲಕೃಷ್ಣ ಶೆಟ್ಟಿ ಮತ್ತು ದಿನೇಶ ಶೆಟ್ಟಿ ಪ್ರಾಯೋಜಿತ ಬೆಳ್ಳಿ ನಾಣ್ಯ, ಸ್ಮರಣಿಕೆ ಮತ್ತು ಅಭಿನಂದನಾ ಪತ್ರ.
ತಂಡ ಪ್ರಶಸ್ತಿಗೆ ಲಭಿಸಿದ ಬಹುಮಾನಗಳು_ ಫ್ಯಾಮಿಲಿ ಗೊಂದರಂತೆ ಸ್ಮರಣಿಕೆ ಮತ್ತು ಎಲ್ಲಾ ಸದಸ್ಯರಿಗೆ ಪ್ರತ್ಯೇಕ ಅಭಿನಂದನಾ ಪತ್ರ.
ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಮತ್ತು ವಿವಿಧ ಸಮಾಜದ ಪದಾಧಿಕಾರಿಗಳು ಭಾಗವಹಿಸಿದ್ದರು. ಹರೀಶ್ ಬಂಗೇರ, ವಾಸು ಕುಮಾರ್ ಶೆಟ್ಟಿ, ಬಾಲಕೃಷ್ಣ ಸಾಲಿಯಾನ್, ರಘುರಾಮ ಶೆಟ್ಟಿಗಾರ್, ವರದರಾಜ ಶೆಟ್ಟಿಗಾರ್, ಕೀರ್ತಿ ಶೆಟ್ಟಿಗಾರ್, ಶೋಧನ್ ಪ್ರಸಾದ್, ನಿತ್ಯಾನಂದ ಬೆಸ್ಕೂರ್, ದಯಾನಂದ ಹೆಬ್ಬಾರ್, ಸುರೇಶ ಶೆಟ್ಟಿ, ವಿಶ್ವನಾಥ ಶೆಟ್ಟಿ, ಸಂತೋಷ್ ಶೆಟ್ಟಿ, ಪ್ರಭಾಕರ ಸುವರ್ಣ, ಧನಂಜಯ ಶೆಟ್ಟಿಗಾರ್, ಮೊದಲಾದವರೆಲ್ಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಉದ್ಘಾಟನೆ, ಸಮಾರೋಪ ಕಾರ್ಯಕ್ರಮಗಳನ್ನು ಚಂದಗಾಣಿಸಿಕೊಟ್ಟರು.
ಕಾರ್ಯಕ್ರಮದ ಉದ್ದೇಶ ವಿವರಗಳನ್ನು ಸಂಚಾಲಕರಾದ ದಿನೇಶ ಶೆಟ್ಟಿ ಕೊಟ್ಟಿಂಜರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರೆ, ಗಿರೀಶ್ ನಾರಾಯಣ ಕಾಟಿಪಳ್ಳದವರು ಸ್ಪರ್ಧಾ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿ ಕಾರ್ಯಕ್ರಮ ನಿರ್ವಹಿಸಿದರು. ಯಕ್ಷಯೋಧಾಸ್ ಮತ್ತು ಕೇಂದ್ರದ ಯುವ ಮತ್ತು ಹಿರಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ದುಡಿದು ಜನಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಿದ ಆಕ್ಸಫರ್ಡ್ ಶಾಲಾ ಸಿಬ್ಬಂದಿ ಮತ್ತು ಆಡಳಿತ ಮಂಡಳಿ, ತೀರ್ಪುಗಾರರು, ಅತಿಥಿಗಳು, ಸಭ್ಯ ಸಭಾಸದರು, ಸ್ಪರ್ಧಾಳುಗಳು ಮತ್ತು ಮಾಧ್ಯಮದವರ ಸಹಿತ ಎಲ್ಲಾ ಸಹಕಾರಿಗಳನ್ನೂ ಕೃತಜ್ಞತಾ ಪೂರ್ವಕ ಸ್ಮರಿಸಿ ವಂದನಾರ್ಪಣೆ ಸಲ್ಲಿಸಲಾಯಿತು.
ಯುಎಇ,ಯ ಸಮಸ್ತ ಭಕ್ತಮಹಾಶಯರು ಈ ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಭಗವಾನ್ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಬೇಕೆಂದು ಅಕ್ಕರೆಯ ಆಮಂತ್ರಣವನ್ನು ನೀಡಿದ್ದಾರೆ, ಯಕ್ಷಗಾನ ಅಭ್ಯಾಸ ಕೇಂದ್ರದ ಪರವಾಗಿ ಸಂಚಾಲಕರಾದ ಕೊಟ್ಟಿಂಜ ದಿನೇಶ ಶೆಟ್ಟಿಯವರು. ಆಯೋಜಕರ ಪರವಾಗಿ ಗಿರೀಶ್ ನಾರಾಯಣ ಕಾಟಿಪಳ್ಳರವರು ಪತ್ರಿಕಾ ಪ್ರಕಟಣೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ 2023ರ ಕಾರ್ಯಕ್ರಮಗಳ ಪೂರ್ಣವಿವರಗಳನ್ನು ಒದಗಿಸಿದರು.
Comments are closed.