UAE

ಯುಎಇಯಲ್ಲಿ ಭರ್ಜರಿ ಪ್ರೀಮಿಯರ್ ಪ್ರದರ್ಶನಗೊಳ್ಳಲಿರುವ ‘ಪುಳಿಮುಂಚಿ’ ಚಿತ್ರದ ಟಿಕೆಟ್ ಬಿಡುಗಡೆ

Pinterest LinkedIn Tumblr

ದುಬೈ: ಬಹು ನಿರೀಕ್ಷೆಯ ‘ಪುಳಿಮುಂಚಿ’ ತುಳು ಚಿತ್ರದ ಯುಎಇ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ ಕಾರ್ಯಕ್ರಮವು ಸೆಪ್ಟೆಂಬರ್ 25 ರಂದು ರಾತ್ರಿ ಅಜ್ಮಾನ್ ನಲ್ಲಿ ನಡೆಯಿತು.

ಮಾರ್ಗದೀಪ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಅಜ್ಮಾನ್ ನಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವದ ಶುಭ ವೇದಿಕೆಯಲ್ಲಿ ಗಣ್ಯಾತಿಗಣ್ಯರು ಪುಳಿಮುಂಚಿ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆಗೊಳಿಸಿದರು. ಮೊದಲಿಗೆ ಶ್ರೀ ಗಣಪತಿ ದೇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ವೇದಿಕೆಯಲ್ಲಿ ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಸುಗಂದರಾಜ್ ಬೇಕಲ್, ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಅಜಿತ್ ಕೊರಕ್ಕೊಡು, ಕರ್ನಾಟಕ ಸಂಘದ ಪದಾಧಿಕಾರಿಗಳಾದ ಜಯಂತ್ ಶೆಟ್ಟಿ, ಮಲ್ಲಿಕಾರ್ಜುನ ಗೌಡ, ಯುವರಾಜ್, ಉದ್ಯಮಿ‌ಗಳಾದ ರಮಾನಂದ ಶೆಟ್ಟಿ, ಸುದರ್ಶನ ಹೆಗ್ಡೆ,ಲೇಖಕರಾದ ಗಣೇಶ್ ಬಿ.ಕೆ.ರೈ, ಪಮ್ಮಿ ಕೋಡಿಯಲ್ ಬೈಲ್, ದುಬೈ ಲೋಕು, ಎಸ್.ಎಮ್.ಬ್ಯಾರಿ, ಶ್ರೀಮತಿ ಮಮತ ಸೆಂಥಿಲ್,ಸೆಂಥಿಲ್ ಬೆಂಗಳೂರು, ಸಂತೋಷ್ ಶೆಟ್ಟಿ ಪೊಳಲಿ, ಫಿರೋಝ್ ಎನ್.ಆರ್.ಎಫ್ ದುಬೈ ಅನಿವಾಸಿ ಕನ್ನಡಿಗರು, ಪ್ರಭಾಕರ ಅಂಬಲತ್ತರೆ, ಹರೀಶ್ ಕೋಡಿ, ಸಮಿತಿಯ ಸದಸ್ಯರಾದ ಸಂದೀಪ್ ರಾವ್, ಪ್ರವೀಣ್ ಉಪ್ಪೂರು, ರಾಜೇಶ್ ಪುಣೆ ಮೊದಲಾದ ಗಣ್ಯರು ಟಿಕೆಟ್ ನ್ನು ಬಿಡುಗಡೆಗೊಳಿಸಿದರು.

ಚಿತ್ರದ ನಿರ್ದೇಶಕರಾದ ತ್ರಿಶೂಲ್ ಶೆಟ್ಟಿಯವರು ಮಾತನಾಡಿ, ಒಂದು ಒಳ್ಳೆಯ ಗುಣಮಟ್ಟದ ಚಿತ್ರವನ್ನು ತುಳುನಾಡಿಗೆ ನೀಡಲಿದ್ದೆನೆ.ಈ ಚಿತ್ರವನ್ನು ಯುಎಇಯಲ್ಲಿ ಇರುವ ಎಲ್ಲರು ಚಿತ್ರವನ್ನು ನೋಡಿ ಚಿತ್ರವನ್ನು ಗೆಲ್ಲಿಸಬೇಕು.ಹಣ ಕೊಟ್ಟು ಎರಡುವರೇ ಗಂಟೆ ಸಮಯ ಮಾಡಿ ಚಿತ್ರ ನೋಡುವ ಚಿತ್ರಪ್ರೇಮಿಗಳಿಗೆ ಈ ಪುಲಿಮುಂಚಿ ಚಿತ್ರದಲ್ಲಿ ಯಾವುದೇ ಮೊಸ ಮಾಡಿಲ್ಲ ಎಂದರು.

ಯುಎಇಯ ಪ್ರೀಮಿಯರ್ ಪ್ರದರ್ಶನವು ಅಕ್ಟೋಬರ್ 7,8 ರಂದು ದುಬೈ, ಅಬುಧಾಬಿ, ಶಾರ್ಜಾದಲ್ಲಿ ಪ್ರದರ್ಶನವಾಗಲಿದೆ.ಅಕ್ಟೋಬರ್ 7 ರಂದು ಸಂಜೆ ಎಳು ಗಂಟೆಗೆ ಅಬುಧಾಬಿಯಲ್ಲಿ ಮತ್ತು ಅಕ್ಟೋಬರ್ 8 ರಂದು ಬೆಳಿಗ್ಗೆ 11 ಗಂಟೆಗೆ ದುಬೈಯ IBN Battuta mall ,ಸಂಜೆ ಆರು ಗಂಟೆಗೆ ಡ್ರಾಗನ್ ಮಾರ್ಟ್ (Dragon mart)ನಲ್ಲಿ ಹಾಗೂ ಸಂಜೆ ನಾಲ್ಕು ಗಂಟೆಗೆ ಶಾರ್ಜಾದ ಓಯಾಸಿಸ್ ಮಾಲ್ (Oasis Mall) ನಲ್ಲಿ ಪ್ರದರ್ಶನವಾಗಲಿದೆ.

ತ್ರಿಶೂಲ್ ಶೆಟ್ಟಿ ನಿರ್ದೇಶನ ಮಾಡಿರುವ ಈ ಚಿತ್ರವನ್ನು ಹರಿ ಪ್ರಸಾದ್ ರೈ ನಿರ್ಮಾಣ ಮಾಡಿದ್ದು ಹಾಗೂ ಸಹ ನಿರ್ಮಾಪಕನಾಗಿ ದೇವಿ ಪ್ರಸಾದ್ ಜಿ.ಎಸ್ ಮಾಡಿದ್ದಾರೆ. ನಾಯಕನಾಗಿ ಚಾಕೊಲೇಟ್ ಹೀರೊ ವಿನಿತ್ ಕುಮಾರ್, ನಾಯಕಿಯಾಗಿ ಸಮಂತಾ ಅಮೀನ್, ರಾಹುಲ್ ಅಮೀನ್, ಅರವಿಂದ ಬೋಳಾರ್, ಬೊಜರಾಜ ವಾಮಂಜೂರು, ನವೀನ್ ಡಿ.ಪಡಿಲ್, ಆರದ್ಯ ಶೆಟ್ಟಿ, ಸಾಯಿಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ, ರವಿ ರಾಮಕುಂಜ, ಸಂದಿಪ್ ಶೆಟ್ಟಿ ಅಭಿನಯಿಸಿದ್ದಾರೆ. ಕಾಂತರ ಖ್ಯಾತಿಯ ಸ್ವರಾಜ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಮಿಂಚಲಿದ್ದಾರೆ.ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸಿ: 0556292545,0503911719,0566773315,0502961617,0552445809

ವರದಿ- ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)

Comments are closed.