ದುಬೈ: ತೀಯಾ ಫ್ಯಾಮಿಲಿ ಯುಎಇಯ ವಾರ್ಷಿಕ ದಿನಾಚರಣೆ ಮತ್ತು ಸಮಾಜದ ಹಿರಿಯ ಸಾಧಕಿ ಒರ್ವರಿಗೆ ಗೌರವಿಸುವ ಕಾರ್ಯಕ್ರಮ ಇತ್ತೀಚೆಗೆ ದುಬೈನಲ್ಲಿ ಜರುಗಿತು.
ನಗರದ ಅಬುಹೈಲ್ ನ ಪರ್ಲ್ಸ್ ವೆಸ್ಡಾಮ್ ಸ್ಕೂಲ್ ನ ಸಭಾಂಗಣದಲ್ಲಿ ನಡೆದ ತೀಯಾ ಫ್ಯಾಮಿಲಿ ಯುಎಇಯ ವಾರ್ಷಿಕೋತ್ಸವ ದಿನ ಯುಎಇಯಲ್ಲಿ ಇರುವ ತೀಯಾ ಸಮಾಜದ ಬಂಧು ಭಗಿನಿಯರು ಭಾಗವಹಿಸಿದ್ದರು. ತೀಯಾ ಫ್ಯಾಮಿಲಿ ಯುಎಇಯ ಅಧ್ಯಕ್ಷರಾದ ರಾಜೇಶ್ ಪಳ್ಳಿಕೆರೆಯವರು ಮತ್ತು ವಿವಿಧ ಸಂಘ ಸಂಸ್ಥೆಗಳ ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು.
ಸಮಾಜದ ಮಕ್ಕಳಿಂದ ಹಿಡಿದು ಎಲ್ಲರೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಸ್ವಾಗತ ನೃತ್ಯ,ಜಾನಪದ ನೃತ್ಯ, ಸಮೂಹ ನೃತ್ಯ, ಸಿನಿಮಾ ಗಾನ ನೃತ್ಯ,ಭರತನಾಟ್ಯ, ಸಂಗೀತ ರಸಮಂಜರಿ,ರಸಪ್ರಶ್ನೆ ಮುಂತಾದ ಕಾರ್ಯಕ್ರಮಗಳು ನೋಡುಗರನ್ನು ಮನರಂಜಿಸಿತ್ತು.
ಸಮಾಜದ ಹಿರಿಯ ಸಾಧಕಿಗೆ ಗೌರವ :
ತೀಯಾ ಸಮಾಜದ ಹಿರಿಯ ಸಾಧಕಿ,ತೀಯಾ ಫ್ಯಾಮಿಲಿ ಯುಎಇಯ ಸ್ಥಾಪಕ ಸದಸ್ಯೆಯಾಗಿ ಸಮಾಜದ ಏಳಿಗೆಗಾಗಿ ದುಡಿಯುತ್ತಿರುವ ಬಿಸಜಾಕ್ಷಿ ಎಂ.ಪಿ.ಇವರನ್ನು ಗಣ್ಯತಿ ಗಣ್ಯರು ಗೌರವದ ಮೂಲಕ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಬಿಸಜಾಕ್ಷಿ ಎಂ.ಪಿ.ಯವರು ಮಾತನಾಡುತ್ತಾ ನಾನು ಏನು ಕೆಲಸ ಮಾಡಿಲ್ಲ ಮಾಡಿರುವ ಕೆಲಸ ಪ್ರಚಾರಕ್ಕಾಗಿ ಮಾಡಿಲ್ಲ.ನಾನು ಸಮಾಜಕ್ಕೆ ಮಾಡಬೇಕಾದ ಕರ್ತವ್ಯವನ್ನು ಮಾತ್ರ ಮಾಡಿದ್ದೇನೆ.ನನ್ನನು ಈ ಶುಭ ವೇದಿಕೆಯಲ್ಲಿ ಗೌರವಿಸಿ ಸನ್ಮಾನ ಮಾಡಿದ್ದಕ್ಕಾಗಿ ತೀಯಾ ಫ್ಯಾಮಿಲಿ ಯುಎಇಯ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೆನೆ ಎಂದರು.
ವೇದಿಕೆಯಲ್ಲಿ ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ ಸತೀಶ್ ಪೂಜಾರಿ,ತೀಯಾ ಫ್ಯಾಮಿಲಿಯ ಅಧ್ಯಕ್ಷರಾದ ರಾಜೇಶ್ ಪಳ್ಳಿಕೆರೆ, ಕರ್ನಾಟಕ ಸಂಘ ದುಬೈಯ ಪದಾಧಿಕಾರಿಗಳಾದ ದಯಾ ಕಿರೋಡಿಯನ್,ಮನೋಹರ್ ಹೆಗ್ಡೆ, ಜಯಂತ್ ಶೆಟ್ಟಿ, ಸತೀಶ್ ಪಾಲನ್,ರಾಜೀವ್ ಬಿಲ್ಲಾವ,ಬಿಲ್ಲವಾಸ್ ದುಬೈಯ ಅಧ್ಯಕ್ಷರಾದ ದೀಪಕ್ ಎಸ್.ಪಿ.,ತೀಯಾ ಫ್ಯಾಮಿಲಿಯ ಪದಾಧಿಕಾರಿಗಳಾದ ಅಮರ್ ನಂತೂರು,ಜೆಸ್ಮಿತಾ ವಿವೇಕ್, ಶ್ರೀನಿವಾಸ್ ಕೋಟ್ಯಾನ್, ಮನೋಹರ ಕೋಟ್ಯಾನ್ ಉಪಸ್ಥಿತರಿದ್ದರು.
ಬಲ್ಲಂಗುಡೇಲು ಕ್ಷೇತ್ರದ ವಿಜ್ಞಾಪನ ಪತ್ರ ಬಿಡುಗಡೆ :
ಕಾಸರಗೋಡು ಜಿಲ್ಲೆಯ ಚಂದ್ರಗಿರಿ ತಟದಿಂದ ಕರ್ನಾಟಕದ ದ.ಕ.ಜಿಲ್ಲೆಯ ಮೂಲ್ಕಿ ಸೀಮೆಯ ವರೆಗಿನ ಹದಿನೆಂಟು ಭಗವತಿ ಕ್ಷೇತ್ರದಲ್ಲಿ ಒಂದು ಕ್ಷೇತ್ರವಾದ ಮಂಜೇಶ್ವರದ ಮಜಿಬೈಲ್ ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತಿ ಕ್ಷೇತ್ರದ ಜೀರ್ಣೋದ್ಧಾರದ ವಿಜ್ಞಾಪನ ಪತ್ರವನ್ನು ಇದೇ ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆ ಮಾಡಿ ಹಿರಿಯರಾದ ಬಿಸಜಾಕ್ಷಿ ಎಂ.ಪಿ.ಯವರು ಮಾತನಾಡುತ್ತಾ ಅತಿ ಪುರಾತನ ಮತ್ತು ಅತಿ ಕಾರಣಿಕ ಪ್ರಸಿದ್ದವಾದ ಕ್ಷೇತ್ರದಲ್ಲಿ ಈಗ ಮೂರು ಕೋಟಿ ವೆಚ್ಚದ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿವೆ ಯುಎಇಯಲ್ಲಿ ಇರುವ ಹೃದಯವಂತರು ಕ್ಷೇತ್ರದ ಜೀರ್ಣೋದ್ಧಾರದ ಕಾರ್ಯದಲ್ಲಿ ಸಹಕರಿಸಿ ಪಟ್ಟತ್ತೂರ ಅಮ್ಮನ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿದ್ದರು. ತ್ರಿಶೂಲ್ ಶೆಟ್ಟಿ ನಿರ್ದೇಶನದ ಪುಲಿಮುಂಚಿ ಚಿತ್ರದ ಟೀಸರನ್ನು ಇದೇ ವೇದಿಕೆಯಲ್ಲಿ ಬಿಡುಗಡೆಮಾಡಲಾಯಿತು.
ಯುಎಇಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಶೋಧನ್ ಪ್ರಸಾದ್, ಸಂದೇಶ್ ಜೈನ್,ಹರೀಶ್ ಕೋಡಿ,ನಾಗರಾಜ ರಾವ್ ಹಾಗೂ ಕಾರ್ಯಕ್ರಮದ ಪ್ರಾಯೋಜಕರನ್ನು ,ಮಾಧ್ಯಮ ಮಿತ್ರರನ್ನು ಗೌರವಿಸಲಾಯಿತು.
ದಕ್ಷಿತ್ ಪ್ರೇಮ್ ಜಿತ್ ಮತ್ತು ಬ್ರಾಹ್ಮಿ ಶ್ರೀನಿವಾಸ ಕೋಟ್ಯಾನ್ ಶ್ಲೋಕಗಳನ್ನು ಹಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡಿತು ಗಡಿನಾಡ ದತ್ತು ಯೂಟ್ಯೂಬ್ ಖ್ಯಾತಿಯ ದತ್ತ ಪ್ರಸಾದ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು ಶ್ರೀಮತಿ ಜೆಸ್ಮಿತಾ ವಿವೇಕ್ ಧನ್ಯವಾದವಿತ್ತರು.
ವರದಿ- ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)
ಚಿತ್ರ : ಅಶೋಕ್ ಬೆಳ್ಮಣ್
Comments are closed.