UAE

ದುಬೈನಲ್ಲಿ ಗಲ್ಫ್ ಪ್ರಾಂತ್ಯದ ಬೃಹತ್ ಕರ್ನಾಟಕ ರಾಜ್ಯೋತ್ಸವಕ್ಕೆ ಪೂರ್ವ ತಯಾರಿ

Pinterest LinkedIn Tumblr

ದುಬೈ: ಕರ್ನಾಟಕ ಸಂಘ ದುಬೈ 1985ರಲ್ಲಿ ಸ್ಥಾಪಿತವಾದ ದುಬೈನ ಪ್ರಥಮ ಕರ್ನಾಟಕದ ಸಂಘಟನೆಯಾಗಿದ್ದು 38 ವರ್ಷಗಳಿಂದ ದುಬೈನಲ್ಲಿ ಅನಿವಾಸಿ ಕನ್ನಡಿಗರ ಸೇವೆ ಮತ್ತು ಕರ್ನಾಟಕದ ಕಲೆ, ವಾಣಿಜ್ಯ ಮತ್ತು ಸಂಸ್ಕೃತಿ ಯನ್ನು ಉತ್ತೇಜಿಸುತ್ತಾ ಬಂದಿದ್ದು, ನಮ್ಮ ನಾಡ ಹಬ್ಬವಾದ ಕರ್ನಾಟಕ ರಾಜ್ಯೋತ್ಸವವನ್ನು ಪ್ರತೀ ವರ್ಷ ಅದ್ಧೂರಿಯಾಗಿ ಆಚರಿಸುತ್ತಾ ಬಂದಿದೆ.

ಈ ಬಾರಿಯ 68ನೇ ಕರ್ನಾಟಕ ರಾಜ್ಯೋತ್ಸವವನ್ನು ಯು ಎ ಇ ಯ ಎಲ್ಲಾ ಕರ್ನಾಟಕಪರ ಸಂಘಟನೆಗಳ ಸಹಕಾರದೊಂದಿಗೆ ನಡೆಸಲು ನಿರ್ಧರಿಸಲಾಗಿದ್ದು , ನಿನ್ನೆ ಸೆಪ್ಟೆಂಬರ್ 29ರಂದು ನಡೆದ ಯುಎಇ ಸರ್ವ ಸಂಘ ಸಭೆಯಲ್ಲಿ ಕಾರ್ಯಕ್ರಮದ ಪೂರ್ವ ತಯಾರಿ ನಡೆಸಿ ಎಲ್ಲಾ ಸಂಘಟನೆಗಳ ಮುಖ್ಯಸ್ಥರು ತಮ್ಮ ಸಹಕಾರ ಮತ್ತು ಪಾಲ್ಗೊಳ್ಳುವಿಕೆಯನ್ನು ಘೋಷಣೆ ಮಾಡಿದರು.

ದುಬೈನಲ್ಲಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವವನ್ನು ಇಡೀ ಗಲ್ಫ್ ಪ್ರಾಂತ್ಯದಲ್ಲೇ ಅತ್ಯಂತ ದೊಡ್ಡ ಘಾತ್ರದಲ್ಲಿ ಆಯೋಜಿಸಲಾಗುತ್ತಿದ್ದು, 3000 ಪ್ರೇಕ್ಷಕರನ್ನು ಆಳಾಂಗಣದಲ್ಲಿ ಆಸೀನರಾಗಿಸುವ ಬೃಹತ್ ಸಭಾಂಗಣ ಅಲ್ ನಾಸರ್ ಲೀಶಾರ್ ಲ್ಯಾಂಡ್ ನಲ್ಲಿ ಈ ಕಾರ್ಯಕ್ರಮ 26ನೇ ನವಂಬರ್ 2023 ರಂದು ಜರುಗಲಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಸರ್ವ ಸಂಘ ಸಭೆಗೆ ಮಾಹಿತಿ ನೀಡಿದರು.

ಕರ್ನಾಟಕ ಸಂಘ ದುಬೈ ನ ಉಪಾಧ್ಯಕ್ಷ ದಯಾ ಕಿರೋಡಿಯನ್, ಕಾರ್ಯದರ್ಶಿ ಮನೋಹರ್ ಹೆಗ್ಡೆ , ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ , ಖಜಾಂಚಿ ನಾಗರಾಜ್ ರಾವ್ ಉಡುಪಿ ಕಾರ್ಯಕ್ರಮದ ರೂಪುರೇಷೆ ವಿವರಿಸಿ ಸರ್ವ ಸಂಘಗಳನ್ನು ರಾಜ್ಯೋತ್ಸವದ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕೋರಿದರು.

ಸಂಘದ ಪೋಷಕರಾದ ಹರೀಶ್ ಬಂಗೇರ ಮತ್ತು ಸಲಹೆಗಾರರಾದ ಜಯಂತ್ ಶೆಟ್ಟಿ ತಮ್ಮ ಸಲಹೆ ಮತ್ತು ಸಹಕಾರದೊಂದಿಗೆ ಎಲ್ಲಾ ಯುಎಇ ಕನ್ನಡಿಗರ ಸಹಭಾಗಿತ್ವಕ್ಕೆ ಕರೆಕೊಟ್ಟರು.

ಕರ್ನಾಟಕ ರಾಜ್ಯೋತ್ಸವದ ಮೊದಲ ಭಿತ್ತಿ ಪತ್ರವನ್ನು ಮತ್ತು ಟಿಕೆಟ್‌ಗಳನ್ನು ಸಾಂಕೇತಿಕವಾಗಿ ಸರ್ವಸಂಘ ಸಭೆಯಲ್ಲಿ ಪಾಲ್ಗೊಂಡ ಗಣ್ಯರಿಂದ ಲೋಕಾರ್ಪಣೆಗೊಳಿಸಲಾಯಿತು.

ಸರ್ವ ಸಂಘ ಸಭೆಯಲ್ಲಿ ಹಾಜರಾಗಿ ತಮ್ಮ ಸಹಕಾರ ಘೋಷಣೆ ಮಾಡಿ ಶುಭಕೋರಿದ ಪ್ರಮುಖರು: ಪ್ರವೀಣ್ ಕುಮಾರ್ ಶೆಟ್ಟಿ – ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು ಎ ಇ ಅಧ್ಯಕ್ಷರು, ಜೇಮ್ಸ್ ಮೆಂಡೋನ್ಸಾ ಅಧ್ಯಕ್ಷರು ಮಂಗಳೂರು ಕೊಂಕಣ್ಸ್ , ಆಲ್ವಿನ್ ಪಿಂಟೋ , ರೊನಾಲ್ಡ್ ಮಾರ್ಟಿಸ್ , ಶ್ರೀಮತಿ ಡಾ. ರಶ್ಮಿ ನಂದಕಿಶೋರ್ – ಅಧ್ಯಕ್ಷರು ವೊಕ್ಕಲಿಗ ಬಳಗ ಯು ಎ ಇ, ಸಾಗರ್ ಶೆಟ್ಟರ್ ಗಲ್ಫ್ ಗೆಳೆಯರು.

ಅನಿಲ್ ಪೂಜಾರ್- ವೀರಶೈವ ಲಿಂಗಾಯತ ಸಮಾಜ, ಓಎಂಜಿ ಯ ನಿರ್ದೇಶಕರುಗಳಾದ ಸೆಂತಿಲ್ ಹಾಗೂ ಈಶ್ವರಿ ದಾಸ್ ಶೆಟ್ಟಿ , ಇಕ್ರಂ – ಅಲ್ ಕಮರ್ ವೆಲ್ಫೇರ್ ಟ್ರಸ್ಟ್ , ದೀಪಕ್ ಎಸ್ ಪಿ -ಅಧ್ಯಕ್ಷರು ಬಿಲ್ಲವ ಸಮಾಜ, ಫ್ರಾಂಕ್ ಫೆರ್ನಾಂಡಿಸ್ – ಅಧ್ಯಕ್ಷರು ಶ್ರೀಕೃಷ್ಣ ಪರಿಸರ ಸಮಿತಿ ಯು ಎ ಇ ಘಟಕ, ಶೋಧನ್ ಪ್ರಸಾದ್ ಅಧ್ಯಕ್ಷರು ಸಂಧ್ಯಾ ಕ್ರಿಯೇಷನ್ಸ್, ನಿತ್ಯಾನಂದ ಬೆಸ್ಕೂರ್- ಕದಂ , ಬಾಲಕೃಷ್ಣ ಸಾಲಿಯಾನ್ , ಮಲ್ಲಿಕಾರ್ಜುನ ಹವಾಲ್ದಾರ್, ಶ್ರೀಮತಿ ಮೇಘನಾ ಶೆಟ್ಟರ್, ರೂಪಾ ಶಶಿಧರ್, ಮಹೇಶ್ ಅತ್ತಾವರ್ & ಆನಂದ್ ವಲಾಲ್ – ಸೌಹಾರ್ದ ಲಹರಿ, ಮಾಧ್ಯಮ ಪ್ರತಿನಿಧಿಗಳಾದ ವಿಜಯ್ ಕುಮಾರ್ ಶೆಟ್ಟಿ .

ಇದಲ್ಲದೆ ತಮ್ಮ ಅನುಪಸ್ಥಿತಿಯಲ್ಲಿ ಸಹಕಾರ ಸಂದೇಶ ನೀಡಿ ಶುಭ ಹಾರೈಸಿದ ಸಂಘಟನೆಗಳು,  ಗಣ್ಯರು: ಎಂ.ಇ ಮೂಳೂರು – ಬ್ಯಾರೀಸ್ ಕಲ್ಚರಲ್ ಫೋರಮ್, ಉದ್ಯಮಿ ಮತ್ತು ಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್ , ಸರ್ವೋತ್ತಮ ಶೆಟ್ಟಿ – ಕರ್ನಾಟಕ ಸಂಘ ಅಬುಧಾಬಿ , ಸತೀಶ್ ಪೂಜಾರಿ-ಕರ್ನಾಟಕ ಸಂಘ-ಶಾರ್ಜಾ, ಸುಧಾಕರ್ ರಾವ್ ಪೇಜಾವರ – ಯುಎಇ ಬ್ರಾಹ್ಮಣ ಸಮಾಜ, ದಿನೇಶ್ ಶೆಟ್ಟಿ ಕೊಟ್ಟಿಂಜ – ಯಕ್ಷಗಾನ ಅಭ್ಯಾಸ ತರಗತಿ, ಅಶೋಕ್ ಬೈಲೂರು.

ವರದಿ: ಕರ್ನಾಟಕ ಸಂಘ ದುಬೈ

Comments are closed.