UAE

ತ್ರಿರಂಗ ಸಂಗಮ: ಅ.8ರಂದು ಗಲ್ಫ್ ರಾಷ್ಟ್ರದ 50 ನೇ ಕಾರ್ಯಕ್ರಮ ‘ತ್ರಿರಂಗ ಮೋಹನ ಸಂಭ್ರಮ’

Pinterest LinkedIn Tumblr

ದುಬೈ: ತ್ರಿರಂಗ ಸಂಗಮ ಸಂಯೋಜನೆಯಲ್ಲಿ ಯಶಸ್ವಿ ಸಂಘಟಕ ಕರ್ನೂರು ಮೋಹನ್ ರೈಯವರ ಸಂಚಾಲಕತ್ವದ ಗಲ್ಫ್ ರಾಷ್ಟ್ರದ 50 ನೇ ಕಾರ್ಯಕ್ರಮ ಅಕ್ಟೋಬರ್ 8 ರಂದು ದುಬೈನಲ್ಲಿ ಜರಗಲಿದ್ದು ಯಕ್ಷಗಾನ, ನಾಟಕ,ನೃತ್ಯ, ಹಾಸ್ಯ, ಗಾಯನಗಳೊಂದಿಗೆ ಯುಎಇಯ ತುಳು ಕನ್ನಡಿಗರನ್ನು ಮನರಂಜಿಸಲಿದ್ದಾರೆ.
ಕರ್ನೂರು ಮೋಹನ್ ರೈಯವರ ಸಂಚಾಲಕತ್ವದ ಗಲ್ಫ್ ರಾಷ್ಟ್ರದ 50 ನೇ ಕಾರ್ಯಕ್ರಮ “ತ್ರಿರಂಗ ಮೋಹನ ಸಂಭ್ರಮ” ಎಂಬ ಕಾರ್ಯಕ್ರಮವು ದುಬೈನ  ಎಮಿರೆಟ್ಸ್ ಇಂಟರ್ ನೇಶನಲ್ ಸ್ಕೂಲ್ ನಲ್ಲಿ ಮಧ್ಯಾಹ್ನ 2.30 ಗಂಟೆಗೆ ಆರಂಭವಾಗಲಿದೆ.

ಕಾರ್ಯಕ್ರಮದ ವಿವರ: ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆಯಲ್ಲಿ ಹೊಸ ಪರಿಕಲ್ಪನೆಯೊಂದಿಗೆ ಯಕ್ಷ ಸಂಭ್ರಮ‌ ಪ್ರದರ್ಶನಗೊಳ್ಳಲಿದೆ.  ಕು.ನಿಹಾರಿಕ ಭಟ್, ಕು.ವಿಂಧ್ಯಾ ಆಚಾರ್ಯ ವಿಶೇಷ ಪಾತ್ರದಲ್ಲಿ ಭಾಗವಹಿಸಲಿದ್ದಾರೆ. ಯುಎಇ ಯ ವಿವಿಧ ಸಂಘ ಸಂಸ್ಥೆಗಳ ಸದಸ್ಯೆಯರ ನಾಟ್ಯ ಸಂಭ್ರಮ, ವಿಠಲ‌ ನಾಯಕ್ ಕಲ್ಲಡ್ಕ ಅವರಿಂದ ಹಾಸ್ಯ ಸಂಭ್ರಮ,ಯುಎಇ ಯ ಪ್ರಸಿದ್ಧ ಗಾಯಕರ ಗಾನ‌ ಸಂಭ್ರಮ  ಕಾರ್ಯಕ್ರಮಗಳು ಕಲಾಭಿಮಾನಿಗಳ ರಂಜಿಸಲಿದೆ. ಕಾರ್ಯಕ್ರಮದ ಟಿಕೇಟಿಗಾಗಿ 050 6590986, 055 2032097 ನ್ನು ಸಂಪರ್ಕಿಸಬಹುದಾಗಿದೆ.

Comments are closed.