UAE

ಯುಎಇ ಬ್ರಾಹ್ಮಣ ಸಮಾಜದ ವಿಂಶತಿ ವರ್ಷ: ಚಿಣ್ಣರ ಬಣ್ಣದ ಕಲರವ-ಕಿಶೋರಕೌಶಲ್ಯ, ಮೆರುಗು ತಂದ ಪ್ರಬುದ್ದರ-ಮಾಧುರ್ಯ ಮುಸ್ಸಂಜೆ

Pinterest LinkedIn Tumblr
ದುಬೈ: ವಿಂಶತಿ ಉತ್ಸವದ 8 ಮತ್ತು 9 ನೇ ಕಾರ್ಯಕ್ರಮದ ಜಂಟಿ ಆಯೋಗವನ್ನು ಯುಎಇ ಬ್ರಾಹ್ಮಣ ಸಮಾಜ ಇತ್ತೀಚಿಗೆ ಡಿಪಿಎಸ್ ಶಾಲೆ ಶಾರ್ಜಾದ  ಸಭಾಂಗಣದಲ್ಲಿ ಹಮ್ಮಿಕೊಂಡಿದ್ದರು.
ಈ ಅಪೂರ್ವ ಕಾರ್ಯಕರಮದಲ್ಲಿ 7 ರಿಂದ 17 ವಯಸ್ಸಿನ ಚಿಣ್ಣರು 70 ಕ್ಕೂ ಹೆಚ್ಚು ಚಿತ್ರಕಲೆಗಳನ್ನು ಕರಕುಶಲ ವಸ್ತುಗಳನ್ನು ಪ್ರದರ್ಶಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಮಕ್ಕಳ ಈ ವಿಶೇಷ ಕಾರ್ಯಕ್ರಮವನ್ನು ಹೆಸರಾಂತ ಚಿತ್ರ ಶಿಲ್ಪ ಕಲಾವಿದ, ಬರಹಗಾರ ಮತ್ತು  ಸಂಪನ್ಮೂಲ ವ್ಯಕ್ತಿ ಗಣೇಶ್  ರೈಯವರು ಸ್ಟಳದಲ್ಲೇ ಚಿತ್ರ ಬಿಡಿಸುವುದರ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಚಿತ್ರದ ವಿವಿಧ ಪ್ರಕಾರಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರೆ, ಕಲೆಯನ್ನು  ಪೋಷಿಸಿ ಬೆಳೆಸುವುದರ ಜೊತೆ ಅದರ ಮೌಲ್ಯದ ಅರಿವನ್ನು ಬಾಲಕಾಲವಿದರಿಗೆ ಮೂಡಿಸುವ ಪರಿಯನ್ನು ಪೋಷಕರಿಗೆ ತಿಳಿಸಿದರು.
ಇದೆ ಸಂಧರ್ಭದಲ್ಲಿ ಹಾಜರಿದ್ದ ಮುಖ್ಯ ಅತಿಥಿ, ಚಲನಚಿತ್ರ ನಿರ್ಮಾಪಕ, ಮದುರ ಕಂಠದ ಹಿನ್ನಲೆಗಾಯಕ ಹಾಗು ಅಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಹರೀಶ್ ಶೇರಿಗಾರ್ ಅವರು ತಮ್ಮ ಸಿರಿ ಕಂಠದಲ್ಲಿ ಕನ್ನಡ ಹಾಗು ತುಳು ಹಾಡನ್ನು ಹಾಡುವುದರ ಮೂಲಕ ಮಾದುರ್ಯ ಮುಸ್ಸಂಜೆಗೆ ಇಂಪಾದ ಚಾಲನೆ  ನೀಡಿದರು.
ನೆರೆದ ಸಮಸ್ತರು ಮಕ್ಕಳ ರಚನೆಯ ಕಲೆಗಳನ್ನು ತುಂಬು ಮಸ್ಸಿನಿಂದ ಆನಂದಿಸಿದರೆ ,ಮಾದುರ್ಯ ಮುಸ್ಸಂಜೆ ಯಲ್ಲಿ ಹಾಡಿದ ನಮ್ಮ ಸಮಾಜದ 25ಕ್ಕೂ ಹೆಚ್ಚು ಗಾಯಕ ಗಾಯಕಿಯರ ವಿವಿಧ ಪ್ರಕಾರಗಳ ಸಂಗೀತ ಮತ್ತು ವಾದ್ಯಗಳ ನಿನಾದವನ್ನು ಆಲಿಸಿ  ಆಸ್ವಾದಿಸಿದರು.
ಆರತಿ ಅಡಿಗ ಮತ್ತು ಸ್ವಾತಿ ಶರತ್ ಅವರ ನಿರೂಪಣೆಯ ಈ ಕಾರ್ಯಕ್ರ್ರಮವನ್ನು ಅಶೋಕ್ ಕುಮಾರ್ ಅವರ  ಸ್ವಾಗತದಿಂದ ಆರಂಭಿಸಲಾಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳ ಜೊತೆ ವಿಂಶತಿ ಉತ್ಸವದ ಗೌರವಧ್ಯಕ್ಷರಾದ ಪುತ್ತಿಗೆ ವಾಸುದೇವ ಭಟ್, ಸುಧಾಕರ ಪೇಜಾವರ, ರಶ್ಮಿಹೆಬ್ಬಾರ್, ರೇಖಾ ಭಟ್ ಮತ್ತು ಮಧುಕರ ರಾವ್ ಹಾಜರಿದ್ದರು. ಸುಮಾರು 4 ಗಂಟೆಗಳ ಕಾಲ ನಡೆದ ಕಾರ್ಯಕ್ರಮ ಸುಧೀಂದ್ರ  ಐತಾಳರ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು.

Comments are closed.