ದುಬೈ: ತೀಯಾ ಫ್ಯಾಮಿಲಿ ಯು.ಎ.ಇ.ಯ ಇವರ ವತಿಯಿಂದ ವರ್ಷಂಪ್ರತಿ ನಡೆಸುವ ದುರ್ಗ ಪೂಜೆಯು ಪೂಜೆಯು ಶ್ರದ್ಧಾ, ಭಕ್ತಿ ಸಡಗರದಿಂದ ಜರುಗಿತು.
ನಗರದ ಬರ್ ದುಬೈಯ ಸಿಂಧೆ ಸೆರೊಮಣಿ ಸಭಾಂಗಣದಲ್ಲಿ ಅಕ್ಟೋಬರ್ 29 ರಂದು ಶ್ರೀ ರಘು ಭಟ್ ರವರ ಪೌರೋಹಿತ್ಯದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆದಿದ್ದು ಯುಎಇಯ ಎಲ್ಲಾ ರಾಜ್ಯದ ನೂರಾರು ಭಕ್ತಾದಿಗಳು,ತೀಯಾ ಸಮಾಜ ಬಾಂಧವರು ಪೂಜೆಯಲ್ಲಿ ಪಾಲ್ಗೊಂಡು ಪುನಿತರಾದರು.
ದುರ್ಗ ಪೂಜೆಯ ಪ್ರತಿನಿದಿಯಾಗಿ ಸಂಸ್ಥೆಯ ಕೋಶಾಧಿಕಾರಿ ಶ್ರೀನಿವಾಸ ಕೋಟ್ಯಾನ್ ಮತ್ತು ಶ್ರೀಮತಿ ಸರೀತ ಕೋಟ್ಯಾನ್ ದಂಪತಿಗಳು ಕುಳಿತುಕೊಂಡಿದ್ದರು.
ರಾಜರಾಜೇಶ್ವರಿ ಭಜನಾ ಮಂಡಳಿ ದುಬೈಯ ವತಿಯಿಂದ ಭಜನೆ, ತೀಯಾ ಸಮಾಜದ ಮಹಿಳೆಯರಿಂದ ಕುಣಿತ ಭಜನೆ ಮತ್ತು ಮಹಾ ಮಂಗಳಾರತಿ ನಂತರ ಅನ್ನ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ತೀಯಾ ಸಮಾಜ ಯ.ಎ.ಇ.ಯ ಅಧ್ಯಕ್ಷರಾದ ರಾಜೇಶ್ ಪಳ್ಳಿಕೆರೆಯವರು ಪೂಜೆಯಲ್ಲಿ ಅತ್ಯುತ್ತಮ ಭಜನಾ ಕಾರ್ಯಕ್ರಮ ಏರ್ಪಡಿಸಿದ್ದ ರಾಜರಾಜೇಶ್ವರಿ ಭಜನಾ ಮಂಡಳಿಯ ಸದಸ್ಯರನ್ನು, ಪೂಜಾ ಮಂಟಪವನ್ನು ತಯರಿಸಿದ ದೀಪಕ್ ರಾಜ್ ,ಪುರಂದರ ಶೆಟ್ಟಿಗಾರ್ ಮತ್ತು ಮಾದ್ಯಮದ ಮಿತ್ರರನ್ನು ಅಭಿನಂದಿಸಿದ್ದರು. ಯು.ಎ.ಇ.ಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಮತ್ತು ಪೂಜೆಗೆ ಆಗಮಿಸಿದ ಭಕ್ತಾದಿಗಳನ್ನು ಸ್ವಾಗತಿಸಿ, ವಂದಿಸಿದರು.
Comments are closed.