ದುಬೈ: ದುಬೈ ಪ್ರವಾಸಕ್ಕಾಗಿ ಆಗಮಿಸಿದ ನಿವೃತ್ತ ಪ್ರಾಚರ್ಯ, ಸಂಶೋಧಕ, ಪ್ರಸಿದ್ಧ ಯಕ್ಷಗಾನ ಅರ್ಥದಾರಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಎಂ.ಪ್ರಭಾಕರ ಜೋಶಿಯವರಿಗೆ ಯು.ಎ.ಇ. ಬ್ರಾಹ್ಮಣ ಸಮಾಜ ದುಬೈಯ ವತಿಯಿಂದ ಸನ್ಮಾನ ಹಾಗೂ ಸಂವಾದ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ನವೆಂಬರ್ 18 ರಂದು ನಗರದ ಗುಸೈಸ್ ನ ಫಾರ್ಚೂನ್ ಪ್ಲಾಜಾದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯು.ಎ.ಇ.ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಸುಧಾಕರ ರಾವ್ ಪೇಜಾವರ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಯುಎಇಯ ಬ್ರಾಹ್ಮಣ ಸಮಾಜ ಇಪ್ಪತ್ತು ವರ್ಷದ ಸಂಭ್ರಮದಲ್ಲಿದ್ದು ಇದರ ಸವಿನೆನಪಿಗಾಗಿ ಒಂದು ವರ್ಷದ ಒಳಗೆ ಇಪ್ಪತ್ತು ಕಾರ್ಯಕ್ರಮದ ಮೂಲಕ ವಿಂಶತಿ ಉತ್ಸವ ಮಾಡಲಿದ್ದೆವೆ. ಇದು ನಮ್ಮ ಈ ವರ್ಷದ ಹದಿನಾಲ್ಕನೆಯ ಕಾರ್ಯಕ್ರಮ. ಇನ್ನೂ ಆರು ಕಾರ್ಯಕ್ರಮವನ್ನು ಎಪ್ರಿಲ್ ತಿಂಗಳ ವರೆಗೆ ಮಾಡಿ ಮುಗಿಸಲಿದ್ದೆವೆ. ದುಬೈ ಪ್ರವಾಸದಲ್ಲಿ ಇರುವ ಪ್ರಭಾಕರ ಜೋಶಿ ದಂಪತಿಗಳು ನಮ್ಮ ಹದಿನಾಲ್ಕನೆಯ ಕಾರ್ಯಕ್ರಮದಲ್ಲಿ ಪಾಲ್ಘೊಂಡಿರುವುದು ನಮಗೆ ಸಂತಸದ ವಿಷಯ. ಅದಕೋಸ್ಕರ ಈ ಕಾರ್ಯಕ್ರಮಕ್ಕೆ “ಡಾ.ಎಂ.ಪ್ರಭಾಕರ ಜೋಶಿಯವರ ಜೊತೆ..ನಾವು…ನೀವು” ಎಂಬ ಶೀರ್ಷಿಕೆಯ ಈ ಕಾರ್ಯಕ್ರಮ ನೆರವೇರಿಸಲಾಗಿದೆ ಎಂದರು.
ಪಟ್ಲ ಪೌಂಡೇಷನ್ ಯುಎಇ ಘಟಕದ ಗೌರವ ಅಧ್ಯಕ್ಷರಾದ ವಾಸು ಭಟ್ ಪುತ್ತಿಗೆ, ಘಟಕದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಕರ್ನಾಟಕ ಎನ್.ಆರ್.ಐ. ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮೊದಲಿಗೆ ಯುಎಇ ಬ್ರಾಹ್ಮಣ ಸಮಾಜದ ವತಿಯಿಂದ ಡಾ.ಎಂ.ಪ್ರಭಾಕರ ಜೋಶಿ ದಂಪತಿಗಳನ್ನು ಸನ್ಮಾನಿಸಲಾಯಿತು. ನಂತರ ಯಕ್ಷಮಿತ್ರರು ದುಬೈಯ ವತಿಯಿಂದ ಜಯಂತ್ ಶೆಟ್ಟಿಯವರು ಮತ್ತು ಪಟ್ಲ ಘಟಕ ಹಾಗೂ ಯಕ್ಷಗಾನ ಅಭ್ಯಾಸ ಕೇಂದ್ರದ ವತಿಯಿಂದ ದಿನೇಶ್ ಶೆಟ್ಟಿ ಕೊಟ್ಟಿಂಜ, ಬಾಲಕೃಷ್ಣ ಶೆಟ್ಟಿ ಮಾಡುರುಗುತ್ತು, ಶರತ್ ಕುಡ್ಲ, ಗಿರೀಶ್ ನಾರಯಣ್, ಕೇಂದ್ರದ ಮಕ್ಕಳು ಪೋಷಕರು ಜೋಶಿಯವರು ದಂಪತಿಗಳನ್ನು ಗೌರವದ ಮೂಲಕ ಸನ್ಮಾನಿಸಿ ಆರ್ಶಿವಾದ ಪಡೆದರು. ವಿಶ್ವೇಶ್ವರ ಅಡಿಗ ಮತ್ತು ಕೇಂದ್ರದ ಗುರುಗಳಾದ ಶೇಖರ್ ಡಿ.ಶೆಟ್ಟಿಗಾರ್ ಸನ್ಮಾನ ಪತ್ರ ವಾಚಿಸಿದರು.
ನಂತರ ಜೋಶಿಯವರು ಒಂದು ತಾಸುಗಳ ಸಮಯ ಯಕ್ಷಗಾನ ಅರ್ಥಗಾರಿಕೆಯಲ್ಲಿ ಪಾತ್ರ ಕಲ್ಪನೆಯ ಬಗ್ಗೆ ಮಾತನಾಡಿದ್ದರು. ಜೋಶಿಯವರ ಅಭಿಮಾನಿಗಳಿಂದ ಪ್ರಶ್ನೋತ್ತರ ಕಾರ್ಯಕ್ರಮವು ಜರಗಿತು. ಕೃಷ್ಣ ಪ್ರಸಾದ್ ರಾವ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ವರದಿ- ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)
Comments are closed.