ದುಬೈ: ಬಂಟ್ಸ್ ಫ್ಯಾಮಿಲಿ ಯು.ಎ.ಇ ವತಿಯಿಂದ ಇತ್ತೀಚೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಭಕ್ತಿಭಾವದಿಂದ ಜರಗಿತು. ಯು.ಎ.ಇ.ಯ ಎಲ್ಲಾ ರಾಜ್ಯದ ಬಂಟ ಬಾಂಧವರು ಅಲ್ಲದೆ ಇತರ ಸಮಾಜದ ಸಾವಿರಾರು ಭಕ್ತರು ಪೂಜೆಗೆ ಆಗಮಿಸಿ ಶ್ರೀ ಸತ್ಯನಾರಾಯಣ ದೇವರ ಕೃಪೆಗೆ ಪಾತ್ರರಾದರು.
ನಗರದ ಅಲ್ ಗುಸೈಸ್ ನ ಇಂಡಿಯನ್ ಅಕಾಡೆಮಿ ಸ್ಕೂಲ್ ನ ಸಭಾಂಗಣದಲ್ಲಿ ಬೆಳಿಗ್ಗೆ ಒಂಬತ್ತರಿಂದ ಮಧ್ಯಾಹ್ನದ ವರೆಗೆ ಪುರೋಹಿತರಾದ ರಘು ಭಟ್ಟರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಪ್ರತಿನಿಧಿಯಾಗಿ ದ್ರುವ ಶೆಟ್ಟಿ ಮತ್ತು ದೀಕ್ಷಾ ಶೆಟ್ಟಿ ದಂಪತಿ ಹಾಗೂ ಪುರಂದರ ಶೆಟ್ಟಿ ಮತ್ತು ಅಶ್ವಿನಿ ಶೆಟ್ಟಿ ದಂಪತಿಗಳು ಕುಳಿತುಕೊಂಡಿದ್ದರು.ಶ್ರೀ ರಾಜ ರಾಜೇಶ್ವರಿ ಭಜನಾ ಮಂಡಳಿ ದುಬೈ ವತಿಯಿಂದ ಭಕ್ತಿ ಭಜನೆ ಹಾಗೂ ಯು.ಎ.ಇ.ಬಂಟ್ಸ್ ಸದಸ್ಯ ಸದಸ್ಯೆಯರಿಂದ ನೃತ್ಯ ಭಜನೆ ಜರಗಿತು.
ಯುಎಇಯ ಬಂಟ್ಸ್ ನ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಪೂಜೆಗೆ ಆಗಮಿಸಿದವರನ್ನು ಸ್ವಾಗತಿಸಿದರು. ಪೂಜೆಗೆ ಸಹಕಾರ ನೀಡಿದ ಸುಜತ್ ಶೆಟ್ಟಿ , ಆರತಿ ದಿನೇಶ್ ಶೆಟ್ಟಿ, ಮೋನಿಶ ಶರತ್ ಶೆಟ್ಟಿ, ಸಂಗೀತ ಸತೀಶ್ ಶೆಟ್ಟಿ, ಸುಂದರ ಶೆಟ್ಟಿ ಅಬುಧಾಬಿ, ಶಶಿ ರವಿರಾಜ್ ಶೆಟ್ಟಿ, ಸಜನ್ ಶೆಟ್ಟಿ, ಭಾಗ್ಯ ಪ್ರೇಮ್ ನಾಥ್ ಶೆಟ್ಟಿ, ರತ್ನಾಕರ ಶೆಟ್ಟಿ, ಶ್ರೀಮತಿ ಪವಿತ್ರ ಬಾಲಕೃಷ್ಣ ಶೆಟ್ಟಿ, ಶಾಲಿನಿ ಪ್ರೇಮ್ ಶೆಟ್ಟಿ ಮತ್ತು ಸ್ವರ್ಣ ಸತೀಶ್ ಶೆಟ್ಟಿಯವರನ್ನು ಶ್ರೀ ದೇವರ ಪ್ರಸಾದ ನೀಡಿ ಗೌರವಿಸಲಾಯಿತು.
ಬಲ್ಲಂಗುಡೇಲು ಕ್ಷೇತ್ರದ ವಿನಂತಿ ಪತ್ರ ಬಿಡುಗಡೆ
ದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರ ಊರಿನಲ್ಲಿ ಅವರದೇ ಗೌರವ ಅಧ್ಯಕ್ಷತೆಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತೀ ಕ್ಷೇತ್ರ ಪಟ್ಟತ್ತಮೊಗರು ಮಂಜೇಶ್ವರ ಕ್ಷೇತ್ರದ ವಿಜ್ಞಾಪನ ಪತ್ರ ಬಿಡುಗಡೆ ಕಾರ್ಯಕ್ರಮ ಪೂಜಾ ವೇದಿಕೆಯಲ್ಲಿ ಜರಗಿತು. ಯು.ಎ.ಇ.ಬಂಟ್ಸ್ ನ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಉದ್ಯಮಿಗಳಾದ ಸುಂದರ ಶೆಟ್ಟಿ ಅಬುಧಾಬಿ, ರಮಾನಂದ ಶೆಟ್ಟಿ, ರತ್ನಾಕರ ಶೆಟ್ಟಿ, ಬಿಲ್ಲವಾಸ್ ಫ್ಯಾಮಿಲಿಯ ಮಾಜಿ ಅಧ್ಯಕ್ಷರಾದ ಸತೀಶ್ ಪೂಜಾರಿ, ಬಾಲಕೃಷ್ಣ ಶೆಟ್ಟಿ, ದಿನೇಶ್ ಶೆಟ್ಟಿ ಕೊಟ್ಟಿಂಜ ವಿಜ್ಞಾಪನ ಪತ್ರವನ್ನು ಬಿಡುಗಡೆ ಮಾಡಿದರು. ಸರ್ವೋತ್ತಮ ಶೆಟ್ಟಿಯವರು ಮಾತನಾಡುತ್ತಾ ಎಲ್ಲಾ ಸಮಾಜದವರಿಗೆ ಸಹಾಯ ಹಸ್ತ ನೀಡುವ ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರ ಊರಿನಲ್ಲಿ ಮೂರು ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತಿರುವ ಈ ದೇವಸ್ಥಾನಕ್ಕೆ ಯುಎಇಯಲ್ಲಿ ಇರುವ ಎಲ್ಲರೂ ಸಹಾಯ ಮಾಡುವ ಎಂದು ಕರೆ ನೀಡಿದರು.
ಪೂಜಾ ಸಮಿತಿಯ ಮುಖ್ಯ ಪದಾಧಿಕಾರಿಗಳಾದ ರವಿರಾಜ್ ಶೆಟ್ಟಿ ಮತ್ತು ಶಶಿ ಶೆಟ್ಟಿ, ಗಣೇಶ್ ರೈ, ವಾಸು ಕುಮಾರ್ ಶೆಟ್ಟಿ, ದಿನೇಶ್ ಟಿ.ಶೆಟ್ಟಿ, ಅಬುಧಾಬಿಯಿಂದ ಪ್ರೇಮ್ ನಾಥ್ ಶೆಟ್ಟಿ ಮತ್ತು ಸುದೇವಿ ಶೆಟ್ಟಿ,ಯತಿರಾಜ್ ಶೆಟ್ಟಿ ಮತ್ತು ಶ್ರೇಯಾ ಶೆಟ್ಟಿ, ಮುಸಾಫದಿಂದ ಮಹೇಶ್ ಶೆಟ್ಟಿ ಮತ್ತು ಚೈತ್ರ ಶೆಟ್ಟಿ, ಕಿಶನ್ ಕುಮಾರ್ ಶೆಟ್ಟಿ ಮತ್ತು ಅಶ್ವಿನಿ ಶೆಟ್ಟಿ, ದುಬೈಯ ರಮಾನಂದ ಶೆಟ್ಟಿ ಮತ್ತು ಆಶಾ ರಮಾನಂದ ಶೆಟ್ಟಿ, ಜೀವನ್ ಶೆಟ್ಟಿ ಮತ್ತು ಪೂರ್ಣ ಶೆಟ್ಟಿ, ಧ್ರುವ ಶೆಟ್ಟಿ ಮತ್ತು ದೀಕ್ಷ ಶೆಟ್ಟಿ, ಸುಜೀತ್ ಶೆಟ್ಟಿ ಮತ್ತು ವೀಣಾ ಶೆಟ್ಟಿ, ಶಾರ್ಜಾದ ಮಂಜುಪ್ರಸಾದ್ ಶೆಟ್ಟಿ ಮತ್ತು ಸುಷ್ಮ ಶೆಟ್ಟಿ, ನಿಕೇಶ್ ಶೆಟ್ಟಿ ಮತ್ತು ಸಹನ ಶೆಟ್ಟಿ, ಅಲ್ ಐನ್ ನ ವಿಕಾಶ್ ಶೆಟ್ಟಿ ಮತ್ತು ಭವ್ಯ ಶೆಟ್ಟಿಯವರು ಪೂಜೆಯ ಯಶಸ್ವಿಗೆ ಸಹಕಾರಿಸಿದ ಇವರನ್ನು ಸರ್ವೋತ್ತಮ ಶೆಟ್ಟಿಯವರು ಅಭಿನಂದಿಸಿದರು.
ಚಿತ್ರ : ಅಶೋಕ್ ಬೆಳ್ಮಾನ್ ದುಬೈ
ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)
Comments are closed.