ದುಬೈ: ಗಮ್ಮತ್ ಕಲಾವಿದೆರ್ ಯುಎಇ ಹವ್ಯಾಸಿ ಕಲಾವಿದರ ತಂಡ ಮಾರ್ಚ್ 10, 2024 ರಂದು ದುಬೈಯ ಎಮಿರೇಟ್ಸ್ ಥಿಯೇಟರ್‌ನಲ್ಲಿ “ವಾ ಗಳಿಗೆಡ್ ಪುಟು ದನಾ ” ಎಂಬ ತುಳು ಸಾಂಸಾರಿಕ ಹಾಸ್ಯಮಯ ನಾಟಕದ ಟಿಕೆಟ್ ಬಿಡುಗಡೆ ಸಮಾರಂಭ ಪ್ರಮುಖ ಗಣ್ಯರಉಪಸ್ಥಿತಿಯಲ್ಲಿ ಬಿ-ಟೌನ್ ರೆಸ್ಟೋರೆಂಟ್ ದುಬೈಯಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಗಣ್ಯರಾದ ಸರ್ವೋತ್ತಮ ಶೆಟ್ಟಿ, ಹರೀಶ್ ಬಂಗೇರ, ಜೋಸೆಫ್ ಮಾಥಾಯಿಸ್ ಸತೀಶ್ ಪೂಜಾರಿ, ಅಜ್ಮಲ್, ಜೇಮ್ಸ್ ಮೆಂಡೋನ್ಸಾ ಹಾಗೂ ಶೋಧನ್ ಪ್ರಸಾದ್ ಪಾಲ್ಗೊಂಡಿದ್ದರು.
ಗಮ್ಮತ್ ಕಲಾವಿದೆರ್ ಯುಎಇ ತಂಡ “ವಾ ಗಳಿಗೆಡ್ ಪುಟುದನಾ” ಮೂಲಕ ಹೊಚ್ಚ ಹೊಸ ನಾಟಕ ಪ್ರಯೋಗ, ನವೀನ ಸಂಗೀತದೊಂದಿಗೆ ಹೊಸ ನಾಂದಿಯೊಂದನ್ನು ಬರೆಯಲು ಹೊರಟಿದೆ. ತುಳುನಾಡಿನ ಹೆಸರಾಂತ ದಿಗ್ಗಜರುಗಳಾದ ಶ್ರೀ ದೇವದಾಸ್ ಕಾಪಿಕಾಡ್, ಶ್ರೀ ವಿಜಯ ಕುಮಾರ್ ಕೊಡಿಯಬೈಲ್, ಶ್ರೀ ಗುರು ಬಾಯರ್, ಶ್ರೀ ರವೀಂದ್ರ ಪ್ರಭು ನಾಟಕದ ಸಂಗೀತ- ಸಾಹಿತ್ಯ- ಗಾಯನದಲ್ಲಿ ತಂಡವನ್ನು ಪ್ರೋತ್ಸಾಹಿಸಲಿದ್ದಾರೆ.
“ವಾ ಗಳಿಗೆದ್ ಪುಟುದನಾ” ನಾಟಕದ ಪ್ರಮುಖ ಪಾತ್ರ ವರ್ಗದಲ್ಲಿ ಶ್ರೀ ವಾಸು ಶೆಟ್ಟಿ, “ರಂಗಕೇಸರಿ” -ಚಿದಾನಂದ ಪೂಜಾರಿ, ಸುವರ್ಣ ಸತೀಶ್ ಪೂಜಾರಿ, ಗಿರೀಶ್ ನಾರಾಯಣ್, ದೀಪ್ತಿ ದಿನರಾಜ್, ರಮೇಶ್ ಸುವರ್ಣ, ರಾಜೇಶ್ ಬಾಯಾರ್, ಪ್ರಶಾಂತ್ ನಾಯರ್, ಮೋನಪ್ಪ ಪೂಜಾರಿ, ಗೌತಮ್ ಬಂಗೇರ, ಜಾನೆಟ್ ಸಿಕ್ವೆರ , ಸಮಂತ ಗಿರೀಶ್, ಐರಿನ್ ಸಿಂತಿಯಾ, ಜಸ್ಮಿತಾ ವಿವೇಕ್, ರಜನೀಶ್ ಅಮಿನ್, ದೀಕ್ಷಾ ರೈ, ಸನ್ನಿಧಿ ವಿಶ್ವನಾಥ್ ಶೆಟ್ಟಿ ಮತ್ತು ಅಮಿತ್ ಕಾಣಿಸಿಕೊಳ್ಳಲಿದ್ದಾರೆ.
ಗಮ್ಮತ್ ಕಲಾವಿದೆರ್ ಯುಎಇ ಅಧ್ಯಕ್ಷ ರಾಜೇಶ್ ಕುತ್ತಾರ್ ಕಲಾಪೋಷಕರರು ಮತ್ತು ಕಲಾಭಿಮಾನಿಗಳ ತುಂಬು ಹೃದಯದ ಸಹಕಾರವನ್ನು ಈ ಸಂದರ್ಭದಲ್ಲಿ ಯಾಚಿಸಿದರು.
ಕಾರ್ಯಕ್ರಮದ ನಿರೂಪಣೆ ಯನ್ನು ದೀಕ್ಷಾ ರೈ ಹಾಗೂ ಗಿರೀಶ್ ನಾರಾಯಣ್ ನೆರವೇರಿಸಿದರು.
Comments are closed.