ದುಬೈ: ಯುಎಇ ಗಾಣಿಗ ಫ್ಯಾಮಿಲಿ-ದುಬಾಯಿ ಇದರ ವತಿಯಿಂದ ದಿನಾಂಕ 23-06-2024 ರಂದು ನಡೆದ ‘ಸಂಗಮ ಗಾಣಿಗ ಸಂಭ್ರಮ’ ಸಂತೋಷ ಕೂಟ ದುಬಾಯಿಯ ಕರಾಮದಲ್ಲಿರುವ ಎಸ್.ಎನ್.ಜಿ ಹಾಲ್‌ನಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕರ್ನಾಟಕ ಸಂಘ ದುಬಾಯಿ ಇದರ ಅಧ್ಯಕ್ಷರು ಹಾಗೂ ದುಬಾಯಿಯ ಕನ್ನಡ ಪಾಠ ಶಾಲೆ ಇದರ ಸ್ಥಾಪಕರಾದಂತಹ ಗಾಣಿಗ ಸಮುದಾಯದ ಶಶಿಧರ ನಾಗರಾಜಪ್ಪರವರು ದೀಪ ಬೆಳಗಿಸಿ ಕಾರ್ಯಕ್ರಮದ ಉದ್ದೀಪನ ಮಾಡಿದರು ಹಾಗೆಯೇ ಪ್ರಾಸ್ತಾವಿಕ ಭಾಷಣ ಮಾಡಿ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲಾ ಗಾಣಿಗ ಬಂಧು ಮಿತ್ರರಿಗೆ ಗಾಣಿಗ ಸಮುದಾಯ ಸಮಾಜಕ್ಕೆ ಹೇಗೆ ಮಾದರಿ ಎಂಬುದನ್ನು ವಿವರವಾಗಿ ತಿಳಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನಿರೂಪಣೆಯನ್ನು ಕುಮಾರಿ ಕ್ಷಿತಿ ಯವರು ಸೊಗಸಾಗಿ ನಿರ್ವಹಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಯುತ ಅನಿರುದ್ದ್ ರವರು ನೆರವೇರಿಸಿದರು. ಗಾಣಿಗ ಬಂಧು ಮಿತ್ರರಿಂದ ಹಾಡು ನೃತ್ಯ ಮುಂತಾದ ಕಾರ್ಯಕ್ರಮಗಳು ನೆರೆದಿದ್ದ ಗಾಣಿಗ ಬಂಧು ಮಿತ್ರರಿಗೆ ಇನ್ನು ಹೆಚ್ಚು ಹುರುಪು ತಂದಿತು.
ಕಾರ್ಯಕ್ರಮದ ಒಳಾಂಗಣ ಕ್ರೀಡೆಯ ನಿರೂಪಣೆಯನ್ನು ಕುಮಾರಿ ಸುಶಾನ ರವರು ತುಂಬಾ ಸೊಗಸಾಗಿ ನೆರವೇರಿಸಿದರು. ಕ್ವಿಜ್, ನಟನೆ, ತಮಾಷೆಯ ಆಟ ಮುಂತಾದ ಆಟಗಳು ಗಾಣಿಗ ಬಂಧುಗಳಿಗೆ ಇನ್ನು ಹೆಚ್ಚು ಮನಸ್ಸಿಗೆ ಮುದವನ್ನು ತಂದಿತು. ಕಾರ್ಯಕ್ರಮದ ಪೂರ್ತಿ ಉಸ್ತುವಾರಿಯನ್ನು ಶ್ರೀಯುತ ಸುಪ್ರೀತ್ ಗಾಣಿಗ ವಹಿಸಿದ್ದರು ಅಲ್ಲದೆ ಸಮಿತಿಯ ಎಲ್ಲಾ ಸದಸ್ಯರು ಹಗಲು ರಾತ್ರಿಯೆನ್ನದೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
Comments are closed.