ದುಬೈ: ವರ್ಷಂಪ್ರತಿಯಂತೆ ನಡೆಯುವ ಗುರುಪೌರ್ಣಮಿ ಪ್ರಯುಕ್ತದ ಗುರುಪೂಜೆ- ವಂದನೆಯ ಜೊತೆಜೊತೆಗೆ 2024- 2025 ನೇ ಸಾಲಿನ ನೂತನ ತರಗತಿಗಳ ಉದ್ಘಾಟನೆ ಮತ್ತು 2015-2016 ನೇ ಸಾಲಿನಲ್ಲಿ ತನ್ನ ಕಾರ್ಯಚಟುವಟಿಕೆ ಪ್ರಾರಂಭಿಸಿದ ನಮ್ಮ ಅಭ್ಯಾಸ ಕೇಂದ್ರ ಈ ವರ್ಷಪೂರ್ತಿ ನಡೆಸಲುದ್ದೇಶಿಸಿರುವ ದಶಮಾನೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ಕೂಡ ನೆರೆದ ಗಣ್ಯರ ಸಮಕ್ಷ ದೀಪ ಬೆಳಗಿಸುವ ಮೂಲಕ ನಡೆಸಲಾಯಿತು.
ಗುರುಪೂಜೆ- ಗುರುವಂದನೆ, ಭಜನೆ ಜೊತೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ನಮ್ಮ ಕೇಂದ್ರದ ನೂತನ ಕಲಿಕಾ ವಿದ್ಯಾರ್ಥಿಗಳಿಂದ ಯಕ್ಷಗಾನ ಗಾನ ವೈಭವ ಕಾರ್ಯಕ್ರಮ ನಡೆಯಿತು. ಕೇಂದ್ರದ ಗುರುಗಳಾದ ಶೇಖರ್ ಡಿ.ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ಶರತ್ ಕುಡ್ಲ ಅವರಿಗೆ ವಿದ್ಯಾರ್ಥಿಗಳು ಗುರುಪೂಜೆ ಸಲ್ಲಿಸಿದರು.
ಪ್ರಸಾದ ವಿತರಣೆ – ಅನ್ನಸಂತರ್ಪಣೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ದಶಮಾನೋತ್ಸವ ಕಾರ್ಯಕ್ರಮ ದಿನಾಂಕ 21-07-2024 ರಂದು ದುಬಾಯಿ ಗೀಸೈಸ್ ನ ಫಾರ್ಚೂನ್ ಪ್ಲಾಝದಲ್ಲಿ ಅದ್ದೂರಿಯಾಗಿ ಚಾಲನೆಗೊಂಡಿತು.
Comments are closed.