UAE

ದುಬೈನಲ್ಲಿ ಸೆ.15ರಂದು ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’; ದುಬೈಗೆ ಆಗಮಿಸಿದ ಕಲಾವಿದರನ್ನು ಸ್ವಾಗತಿಸಿದ ಯಕ್ಷ ಮಿತ್ರರು ದುಬೈ ಯುಎಇ

Pinterest LinkedIn Tumblr

ದುಬೈ: ಯಕ್ಷ ಮಿತ್ರರು ದುಬೈ ಯುಎಇ ಯಕ್ಷ ಸಂಭ್ರಮ 2024 ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಲಾದ ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಎಂಬ ಭಕ್ತಿ ಪ್ರಧಾನ ಪ್ರಸಂಗದಲ್ಲಿ ಭಾಗವಹಿಸಲು ಊರಿನಿಂದ ದುಬೈಗೆ ಆಗಮಿಸಿದ ಪ್ರಭುದ್ಧ ಕಲಾವಿದರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಲಾಯಿತು.

ಯಕ್ಷ ಮಿತ್ರರು ದುಬೈ ಮತ್ತು ಊರಿನ ಪ್ರಖ್ಯಾತ ಹಿಮ್ಮೇಳ ಮುಮ್ನೇಳ ಯಕ್ಷಗಾನ ಕಲಾವಿದರು ಹಾಗೂ ಬಾಲ ಕಲಾವಿದರು ಆಗಮಿಸಿದರು.

ಪ್ರಸಂಗ: ಬಪ್ಪನಾಡು ಕ್ಷೇತ್ರ ಮಹಾತ್ಮೆ
ದಕ್ಷ ನಿರ್ದೇಶನ-ಯಕ್ಷ ಗುರು ಕಿಶೋರ್ ಗಟ್ಟಿ. ಉಚ್ಚಿಲ ದುಬೈ
ಗಾನ ಸಾರಥ್ಯ- ಗಣೇಶ್ ಭಟ್ ಹೊಸಮೂಲೆ
ಭಾಗವತರು- ಕೃಷ್ಣ ಪ್ರಸಾದ್ ರಾವ್ ಸುರತ್ಕಲ್.ದುಬೈ
ಚೆಂಡೆ ಮದ್ದಳೆ ವಾದಕರಾಗಿ. ಶ್ರೀ ದೇಲಂತಮಜಲು
ಸುಬ್ರಮಣ್ಯ ಭಟ್ . ಲೋಕೇಶ್ ಕಟೀಲು
ಮುಖ್ಯ ಸ್ತ್ರೀ ಪಾತ್ರಧಾರಿ . ಡಾ. ಮಹೇಶ್ ಕುಮಾರ್ ಸಾಣೂರು

ದಿನಾಂಕ 15/09/2024 ಭಾನುವಾರ
ಸಮಯ ಅಪರಾಹ್ನ.2.30 ಗಂಟೆ
ಸ್ಥಳ-ಎಮಿರೇಟ್ಸ್ ಥಿಯೇಟರ್ ಜುಮೈರ ದುಬೈ.

ವಿಶೇಷ ಆಕರ್ಷಣೆ: ಏಳು ಜಲ ದುರ್ಗೆಯರ ಉದ್ಭವದ ಸನ್ನಿವೇಶ ದೃಶ್ಯ ಮತ್ತು ಅಬ್ಬರದ ಗುಳಿಗನ ರಂಗ ಪ್ರವೇಶ. ಖ್ಯಾತ ಹಿರಿಯ ಯಕ್ಷಗಾನ ಕಲಾವಿದ ಶ್ರೀಯುತ ರಾಧಾಕೃಷ್ಣ ನಾವಡ ಮಧೂರು ಬಪ್ಪ ಬ್ಯಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಯಕ್ಷ ಮಿತ್ರರು ದುಬೈ ಯುಎಇ ಸರ್ವ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ- ಸಂತೋಷ್ ಶೆಟ್ಟಿ ಪೊಳಲಿ. ದುಬೈ

 

Comments are closed.