UAE

ದುಬೈ: ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ 10ನೇ ವರ್ಷದ ಸಾರ್ವಜನಿಕ ಗಣೇಶ ಉತ್ಸವ ಸಂಪನ್ನ

Pinterest LinkedIn Tumblr

ದುಬೈ: ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ 10ನೇ ವರ್ಷದ ಸಾರ್ವಜನಿಕ ಗಣೇಶ ಉತ್ಸವವು ವಿಜೃಂಭಣೆಯಿಂದ ಸೆಪ್ಟಂಬರ್ 8 ಆದಿತ್ಯವಾರ ಅಜ್ಮಮಾನ್ ಇಂಡಿಯನ್ ಆಶೊಶೇಶನ್ ನಲ್ಲಿ ನೇರವೇರಿತು.

ಬೆಳಗ್ಗೆ ಗಣಹೋಮದೊಂದಿಗೆ ಆರಂಭವಾಗಿ ಮಧ್ಯಾಹ್ನ ಮಹಾ ಪೂಜೆ ಮಹಾಅನ್ನದಾನದಲ್ಲಿ ಸುಮಾರು ಮೂರು ಸಾವಿರ ಜನ ಭಕ್ತಾಧಿಗಳು ಪಾಲ್ಗೊಂಡರು.

ಸಭಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಮಂತ್ರಿಗಳಾದ ಕೃಷ್ಣ ಜೆ ಪಾಲಿಮರ್, ಕೆ.ಎನ್.ಆರ್ ಫೋರಂ ಯುಎಇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಆಕ್ಮೇ ಬಿಲ್ಡಿಂಗ್ ಮೆಟಿರಿಯಲ್ಸ್ ದುಬೈನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಕನ್ನಡ ಚಿತ್ರ ನಟ ರಂಜನ್ ಹಾಗೂ ಮಾರ್ಗದೀಪ ಸಮಿತಿಯ ಅಧ್ಯಕ್ಷ ಅಜೇತ್ ಕೋರಕೋಡು, ಉಪಾಧ್ಯಕ್ಷ‌ ಸಂದೀಪ್ ರಾವು, ಮುಖ್ಯ ಕಾರ್ಯದರ್ಶಿ ಮಹೇಶ್ ಚಂದ್ರಗಿರಿ, ಕೋಶದಿಕಾರಿ ರಾಜೇಶ್ ರಾವು ಹಾಗು ಉತ್ಸವ ಸಮಿತಿಯ ಅಧ್ಯಕ್ಷ ಸುಗಂಧ ರಾಜ್ ಬೇಕಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾರ್ಗದೀಪ ಸಾಂಸ್ಕೃತಿಕ ಸಮಿತಿಯು ಕಳೆದ 27 ವರ್ಷದಿಂದ ಹತ್ತು ಹಲವು ಕಾರ್ಯಕ್ರಮ ನೀಡಿರುವ ಬಗೆ ಹಾಗು ಹಲವು ಸಹಾಯಗಳನು ನೀಡಿರುವ ಬಗ್ಗೆ ಅಧ್ಯಕ್ಷರು ವಿವರಿಸಿದರು. ಅತಿಥಿಗಳು ಮಾತನಾಡಿ ಮಾರ್ಗದೀಪ ಸಾಂಸ್ಕೃತಿಕ ಸಮಿತಿಯಬಗೆ ಹಾಗು ಸಾರ್ವಜನಿಕ ಗಣೇಶ ಉತ್ಸವ ಕಾರ್ಯಕ್ರಮವನ್ನು ನಡೆಸಿಬಂದಿರುವ ಬಗೆ ತುಂಬ ಪ್ರಶಂಶಿಸಿದರು.

ಭಜನೆತಂಡ: ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ,ಮೊಗವೀರ ಭಜನೆತಂಡ ದುಬೈ,ಓಂ ಶ್ರೀ ಭಜನೆತಂಡ ಶಾರ್ಜ, ಶ್ರೀ ಗುರುರಾಘವೇಂದ್ರ ಬಳಗ ಯುಎಇ ಮತ್ತು ರಾಮಕ್ಷತ್ರಿಯ ಮಹಿಳ ವೃಂದ ಯುಎಇ
ನವರಾಗಂ ದುಬೈ ಇವರಿಂದ ಸಂಗೀತ ಭಕ್ತಿಗಾನ ಸುಧಾ ಕಾರ್ಯಕ್ರಮ , ಭರತನಾಟ್ಯ ಮತ್ತು ನೃತ್ಯ;ಗೋಲ್ಡನ್ ಸ್ಟಾರ್ ಮೂಸಿಕ್ ಶಾರ್ಜ, ರೂಪಕಿರಣ್ ಮತ್ತು ಸಂಸ್ಕೃತಿ ನೃತ್ಯ ಶಾಲೆ ದುಬೈ. ಸಾಂಸ್ಕೃತಿಕ ಮತ್ತು ಸಭ ಕಾರ್ಯಕ್ರಮದ ನಿರೂಪಣೆಯನ್ನು
ಶ್ರೀನಿವಾಸ ಕೃಷ್ಣಾಪುರ, ಆರತಿ ಅಡಿಗ ಮತ್ತು ವಿಘ್ನೇಶ್ ಕುಂದಾಪುರ ನಡೆಸಿಕೊಟ್ಟರು ಹಾಗೂ ಶತೀಶ್ ಹಂಗುಲೂರು ಸಹಕರಿಸಿದರು.

ಪುರೋಹಿತರಾದ ಲಕ್ಷೀಶ್ ಭಟ್, ರಾಜೇಶ್ ಅಡಿಗ ಇವರ ಮಾರ್ಗದರ್ಶನದಲ್ಲಿ ಪೂಜಾ ವಿಧಿಗಳು ನಡೆಯಿತು.

Comments are closed.