UAE

ದುಬೈನಲ್ಲಿ ಅ.13ರಂದು ಅದ್ದೂರಿಯಾಗಿ ನಡೆಯಲಿದೆ ಮೂರನೇ ವರ್ಷದ ‘ದುಬೈ ಗಡಿನಾಡ ಉತ್ಸವ’

Pinterest LinkedIn Tumblr

ಮಂಗಳೂರು: ಕಾಸರಗೋಡು ಗಡಿನಾಡ ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿಯ ಯುಎಇ ಘಟಕದ ಆಶ್ರಯದಲ್ಲಿ ಮೂರನೇಯ ‘ದುಬೈ ಗಡಿನಾಡ ಉತ್ಸವ’ – 2024 ಅಕ್ಟೋಬರ್ ತಿಂಗಳ 13 ರಂದು ದುಬೈ ಜಮ್ ಶಾಲಾ ಸಭಾಂಗಣದಲ್ಲಿ ಜರಗಲಿದೆ. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ವಿಶ್ವದ ಪ್ರಮುಖ ಪ್ರವಾಸೋದ್ಯಮ ನಗರವಾಗಿರುವ ದುಬೈಯಲ್ಲಿ ನಡೆಯಲಿರುವ ಕನ್ನಡಿಗರ ಈ ಮಹಾಮೇಳಕ್ಕೆ ಪೂರ್ವಭಾವಿ ಸಿದ್ಧತೆಗಳು ಪೂರ್ಣಗೊಂಡಿರುವುದಾಗಿ ಉತ್ಸವ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಹುಭಾಷೆಗಳ ಸಂಗಮ ಭೂಮಿಯಾಗಿರುವ ಕಾಸರಗೋಡು ಹಾಗೂ ಕರಾವಳಿ ನೆಲದ ಕಲೆಗಳನ್ನು ಜಗತ್ತಿನಾದ್ಯಂತ ಪಸರಿಸುವ, ಗಡಿನಾಡಲ್ಲಿ ಕನ್ನಡ ಭಾಷೆಯನ್ನು ಉಳಿಸುವ ಹಾಗೂ ಬಹು ಭಾಷೆಗಳ ಸಂಗಮ ನೆಲದಲ್ಲಿ ವೈವಿದ್ಯ ಸಂಸ್ಕೃತಿ ಸಂವರ್ಧನೆಯ ಉದ್ದೇಶದೊಂದಿಗೆ ಕಾರ್ಯಾಚರಿಸುವ ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯು ಈಗಾಗಲೇ ಗಡಿಯ, ರಾಜ್ಯದ, ದೇಶದ ಎಲ್ಲೆಯನ್ನು ಮೀರಿ ಕೊಲ್ಲಿ ರಾಷ್ಟ್ರವಾದ ಯುಎಇ, ಮಸ್ಕತ್ ಮೊದಲಾದೆಡೆಗಳಲ್ಲಿ ಘಟಕಗಳನ್ನು ಸ್ಥಾಪಿಸಿ ಸಕ್ರಿಯವಾಗಿದೆ. ಮೂರನೇ ದುಬೈ ಗಡಿನಾಡ ಉತ್ಸವವನ್ನು ಯುಎಇಯ ಸಮಸ್ತ ಕನ್ನಡಿಗರ ಪಾಲ್ಗೊಳ್ಳುವಿಕೆಯೊಂದಿಗೆ ಅಂತಾರಾಷ್ಟ್ರೀಯ ಕನ್ನಡ ಉತ್ಸವವನ್ನಾಗಿಸಲು ತೀರ್ಮಾನಿಸಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಅಂದು ಸಾಯಂಕಾಲ ಮೂರು ಗಂಟೆಗೆ ಜರಗಲಿರುವ ವರ್ಣ ರಂಜಿತ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯುಎಇ ಆಕ್ಮೇ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಹರೀಶ್ ಶೇರಿಗಾರ್ ಉದ್ಘಾಟಿಸಲಿರುವರು.

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಯ ಸಲಹಾ ಸಮಿತಿ ಅಧ್ಯಕ್ಷ ಅಶ್ರಫ್ ಶಾ ಮಂತೂರು ಅಧ್ಯಕ್ಷತೆ ವಹಿಸುವರು. ಸಾಧಕರಾದ ಶಿವಶಂಕರ್ ನೆಕ್ರಾಜೆ, ಲಿತೇಶ್ ನಾಯ್ಕಾಪು, ಸತೀಶ್ ಪೂಜಾರಿ, ಯೂಸಫ್ ಸಾಗ್, ರೊನಾಲ್ಡ್ ಮಾರ್ಟಿಸ್, ಹಿರಿಯ ಕನ್ನಡ ಪರ ಸಂಸ್ಥೆಯಾದ ಯಕ್ಷಗಾನ ಅಭ್ಯಾಸ ಕೇಂದ್ರ ದುಬೈ, ದಿ ಸ್ಪೀಚ್ ಕ್ಲಿನಿಕ್ ದುಬೈ ಇವರನ್ನು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣಬೇವಿನ ಮರದ ಸನ್ಮಾನಿಸುವರು. ಶಾಸಕರಾದ ಸತೀಶ್ ಸೈಲ್ ಹಾಗೂ ಎ.ಕೆ.ಎಂ ಅಶ್ರಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇಬ್ರಾಹಿಂ ಫಾರೂಖ್ ಕೆ.ಸಿ ರೋಡ್, ಸಂದೀಪ್ ಜೆ.ಅಂಚನ್ ಮುಲ್ಕಿ, ಶಿವರೆಡ್ಡಿ ಖ್ಯಾಡೆದ್, ರಶೀದ್ ಬಾಯಾರ್, ಅಯೂಬ್ ಅಟ್ಟೆಗೋಳಿ, ಸಿದ್ಧಿಖ್ ಅಜ್ಮಾನ್, ರಿಯಾಝ್ ಅಹಮ್ಮದ್ ಗುಲ್ ಫರಾಸ್, ಹನುಮಪ್ರಸಾದ್ ತಂಗಿರಾಳ, ಆಸಿಫ್ ಮೇಲ್ಪರಂಬ, ಅಬ್ದುಲ್ಲ ಕಾಂಡೆಲ್ ಪಚ್ಚಂಬಳ, ಎನ್.ಚನಿಯಪ್ಪ ನಾಯ್ಕ, ಮುನೀರ್ ಪಾರ ಕುೂಣೂರು, ಸಿರಾಜ್ ಗುದುರು ಮುಂತಾದವರು ಅತಿಥಿಗಳಾಗಿ ಭಾಗವಹಿಸುವರು. ರಾತ್ರಿ 8 ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್ ಪರೀದ್ ಉದ್ಛಾಟಿಸುವರು.

ವಿಶೇಷ ನಾಗರಿಕ ಸನ್ಮಾನ : ಕರ್ನಾಟಕ ಶಿರೂರಿನಲ್ಲಿ ಪ್ರಕೃತಿ ದುರಂತಕ್ಕೊಳಗಾದ ಪ್ರದೇಶದಲ್ಲಿ ಸುದೀರ್ಘ ಎರಡೂವರೆ ತಿಂಗಳುಗಳು ಕಾಲ ನಡೆದ ರಕ್ಷಣಾ ಚಟುವಟಿಕೆಯ ಸಂದರ್ಭದಲ್ಲಿ ಸ್ಥಳದಲ್ಲಿ ಮೊಕ್ಕಾಂ ಹೂಡಿ ರಕ್ಷಣಾ ಕಾರ್ಯಗಳಿಗೆ ನೇತ್ವತೃ ನೀಡಿ ಜನಮೆಚ್ಚುಗೆ ಗಳಿಸಿದ ಜನಪ್ರತಿನಿಧಿಗಳಾದ ಕಾರವಾರ ಶಾಸಕ ಸತೀಶ್ ಕೃಷ್ಣ ಸೈಲ್ ಹಾಗೂ ಕೇರಳದ ಮಂಜೇಶ್ವರ ಶಾಸಕ ಎ. ಕೆ.ಎಂ ಅಶ್ರಫ್, ಅಂತೆಯೇ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತ ಸಮಾಜ ಸೇವಕರಾದ ಕೆಕೆ ಶೆಟ್ಟಿ , ಅಬುದಾಬಿಯ ಇಂಡಿಯನ್ ಸೋಶ್ಯಲ್ ಹಾಗೂ ಕಲ್ಚರಲ್ ಸೆಂಟರಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಿತ್ರಂಪಾಡಿ ಜಯರಾಮ ರೈ ಇವರಿಗೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ಪೌರ ಸನ್ಮಾನ ನೆರವೇರಿಸುವರು.

ಈ ಸಾಲಿನ ದುಬೈ ಗಡಿನಾಡ ರತ್ನ ಪ್ರಶಸ್ತಿ ಪುರಸ್ಕೃತರಾದ ಯುಎಇಯ ಕೆ. ಎನ್.ಆರ್.ಐ ಪಾರಂ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ದುಬಾಯಿಯ ಸಾಂಸ್ಕೃತಿಕ ಸಂಘಟಕ ಜೇಮ್ಸ್ ಮೆಂಡೋನ್ಸ, ಕುನಿಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಫಕ್ರುದ್ಧೀನ್ ಕುನಿಲ್, ದುಬೈ ಉದ್ಯಮಿ ಹಾಗೂ ಕಲಾಪೋಷಕ ಮಹಾಬಲೇಶ್ವರ ಭಟ್ ಎಡಕ್ಕಾನ , ಯುಎಇ ಅಲ್‌ಬಾಕ್ ಗೋಲ್ಡ್ ಎಂಡ್ ಡೈಮಂಡ್ ಸಂಸ್ಥೆಯ ಆಡಳಿತ ನಿರ್ದೇಶಕ ಯೂಸಫ್ ಉಪ್ಪಳ, ದುಬೈ ಆಸ್ಟರ್ ಡಿ.ಎಂ ಹೆಲ್ತ್ ಕೇರ್ ನ ಸಹಾಯಕ ಜನರಲ್ ಮೇನೇಜರ್ ಬಶೀರ್ ಬಂಟ್ವಾಳ್ ಇವರಿಗೆ ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರಶಸ್ತಿ ಪ್ರದಾನಗೆಯ್ಯುವರು.

ದುಬೈನ ಬ್ಯುಸಿನೆಸ್ ಗೇಟ್ ಹಾಗೂ ವೂಮನ್ ಸರ್ಕಲ್ ಸಂಸ್ಥಾಪಕಿ ಲೈಲಾ ರಹಲ್ ಅಲ್ ಅತ್ಫಾನಿ , ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕದ ಅಧ್ಯಕ್ಷ ನ್ಯಾಯಾವಾಧಿ ಇಬ್ರಾಹಿಂ ಖಲೀಲ್ ಅರಿಮಲೆ ಅಧ್ಯಕ್ಷತೆ ವಹಿಸುವ ಸಮಾರಂಭದ್ಲಲಿ ಕರ್ನಾಟಕ ಸರಕಾರದ ಎನ್ ಆರ್ ಐ ಫಾರಂ ಅಧ್ಯಕ್ಷೆ ಡಾ. ಆರತಿ ಕೃಷ್ಣ, ಸಂಸತ್ ಸದಸ್ಯ ಸಾಗರ್ ಖಂಡ್ರೆ, ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ, ಎಂ. ಶ್ರೀನಿವಾಸ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮುಖ್ಯ ಅತಿಥಿಗಳಾಗಿರುವರು.

ಯುಎಇ, ಕೆಎಂಸಿಸಿಯ ರೂವಾರಿ ಯಾಹ್ಯಾ ತಳಂಗೆರೆ, ಅಬುದಾಭಿಯ ಸಮಾಜ ಸೇವಕರಾದ ಮೋನು ಅಲ್ನೂರು, ಹಿರಿಯ ಕನ್ನಡ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುದಾಬಿ , ಮುಹಮ್ಮದ್ ರಫೀಕ್, ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜೆ, ಆತ್ಮಾನಂದ ರೈ, ಹರೀಶ್ ಬಂಗೇರ, ಡಾ. ಬಸವರಾಜ ಹೊನಗಲ್, ಜೋಸೆಫ್ ಮಾತಿಯಾಸ್, ಸುಧಾಕರ ರಾವ್ ಪೇಜಾವರ , ಶೇಖ್ ಮುಜೀಬ್ ರಹಿಮಾನ್, ಅಬೂಬಕ್ಕರ್ ಬೊಳ್ಳಾರ್, ಅಬ್ದುಲ್ ಸಲಾಂ ಚೇವಾರು ಮೊದಲಾದವರು ಉಪಸ್ಥಿತರಿರುವರು. ಬಳಿಕ ಅಂತರಾಷ್ಟ್ರೀಯ ಮಟ್ಟಡ ಕನ್ನಡ ಪ್ರತಿಭೆಗಳು ಹಾಗೂ ಕಲಾವಿದರಿಂದ ‘ರಾಗ ತಾಳ ನಾಟ್ಯ’ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಮೇಳೈಸಲಿದೆ.

ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದವರು :
ಎಸ್. ಪ್ರದೀಪ ಕುಮಾರ್ ಕಲ್ಕೂರ ಸಂಸ್ಥಾಪಕರು, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ
ಎ.ಆರ್ ಸುಬ್ಬಯ್ಯಕಟ್ಟೆ, ಸದಸ್ಯರು, ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ
ಝಡ್ ಎ. ಕೈಯಾರ್, ಸಂಚಾಲಕರು, ದುಬೈ ಗಡಿನಾಡ ಉತ್ಸವ ಸಮಿತಿ ವಿಜಯ ಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ) ಸಂಯೋಜಕರು, ದುಬೈ ಗಡಿನಾಡ ಉತ್ಸವ ಸಮಿತಿ.

Comments are closed.