UAE

ಯು.ಎ.ಇ ಬಂಟ್ಸ್ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವೈಭವ

Pinterest LinkedIn Tumblr

ದುಬೈ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಅತ್ಯಂತ ಹಿರಿಯ ಸಂಘಟನೆಗಳಲ್ಲಿ ಒಂದಾಗಿರುವ ಯು.ಎ.ಇ. ಬಂಟ್ಸ್ ಆಶ್ರಯದಲ್ಲಿ ಪ್ರತಿ ವರ್ಷ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ 2024 ಅಕ್ಟೋಬರ್ 6 ರಂದು ಸಂಜೆ 4.00 ಗಂಟೆಯಿಂದ ದುಬಾಯಿ ಅಲ್ ಸಫಾದಲ್ಲಿರುವ ಜೆ.ಎಸ್.ಎಸ್. ಪ್ರವೈಟ್ ಸ್ಕೂಲ್ ಸಬಾಂಗಣದಲ್ಲಿ ಅತ್ಯಂತ ಭಕ್ತಿ ಭಾವದಿಂದ ನಡೆಯಿತು.

ಯು.ಎ.ಇಯ ಯಲ್ಲಿ ನೆಲೆಸಿರುವ ಬಂಟಿ ಬಾಂಧವರು ಆಗಮಿಸಿದ್ದು ಹಾಗೂ ವಿಶೇಷ ಆಹ್ವಾನಿತರಾಗಿ ಕರ್ನಾಟಕ ಪರ ಜಾತಿ ಸಮುದಾಯದ ಸಂಘಟನೆಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪೂಜಾ ವಿದಿ ವಿಧಾನಗಳನ್ನು ಪುರೋಹಿತರಾದ ಶ್ರೀ ರಘು ಭಟ್ ರವರು ನೆರವೇರಿಸಿದರು. ಪೂಜೆಯಲ್ಲಿ ಸಮಸ್ಥ ಭಕ್ತರ ಪರವಾಗಿ ಶೈಲಜಾ ನಿತ್ಯಾನಂದ ಶೆಟ್ಟಿ ದುಬಾಯಿ ಮತ್ತು ರಮ್ಯಾ ರಾಜೇಶ್ ಆಳ್ವ ಅಬುಧಾಬಿ ಕುಳಿತು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.

ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯ ಭಜನಾ ಸಂಗೀತ ಹಾಗೂ ಮಕ್ಕಳು, ಹಾಗೂ ಸುಮಂಗಲೆಯರು ಮತ್ತು ಪುರುಷರ ತಂಡದವರ ದೀಪಾ ಭಜನಾ ನೃತ್ಯ ಕಾರ್ಯಕ್ರಮ ಸರ್ವರ ಮನ ಸೆಳೆಯಿತು.

ಯು.ಎ.ಇ ಬಂಟ್ಸ್ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸಂಘಟಕರು ಶ್ರೀ ರವಿರಾಜ್ ಶೆಟ್ಟಿ ಹಾಗೂ ಶಶಿ ಶೆಟ್ಟಿ ದಂಪತಿಗಳು ಹಾಗೂ ಯು.ಎ.ಇ, ಬಂಟ್ಸ್ ಕಾರ್ಯಕಾರಿ ಸಮಿತಿ ಮತ್ತು ಸಲಹೆಗಾರರ ತಂಡದ ಮಾರ್ಗದರ್ಶನದಲ್ಲಿ ಉತ್ಸಾಹಿ ಯುವಕ ಯುವತಿಯರ ಸೇವಾ ತಂಡದ ಪೂರ್ವಭಾವಿ ತಯಾರಿಯಲ್ಲಿ ನಡೆಯಿತು.

ಶ್ರೀ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಮಹಾ ಮಂಗಾಳಾರತಿಯ ನಂತರ ನವರಾತ್ರಿ ಪವಿತ್ರ ಆಚರಣೆಯ ಅಂಗವಾಗಿ 9 ಪುಟ್ಟ ಬಾಲಕಿಯರ ಕನ್ನಿಕಾ ಆರಾಧನೆ ನಡೆಯಿತು. ಪೂಜೆಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ ಮಾಡಿಸಿದ ಸೇವಾಕರ್ತರನ್ನು ಅಧ್ಯಕ್ಷರಾದ  ಸರ್ವೋತ್ತಮ ಶೆಟ್ಟಿ ಯವರು ಮತ್ತು ಉಪಾಧ್ಯಕ್ಷರಾದ  ಪ್ರವೀಣ್ ಕುಮಾರ್ ಶೆಟ್ಟಿಯವರು ಸನ್ಮಾನಿಸಿ ಗೌರವಿಸಿದರು. ಆಗಮಿಸಿ ಭಕ್ತಾಧಿಗಳು ಶ್ರೀಗಂಧ ತೀರ್ಥ ಪ್ರಸಾದ ಸ್ವೀಕರಿಸಿ ಕೊನೆಯಲ್ಲಿ ಮಹಾಪ್ರಸಾದ ಸ್ವೀಕರಿಸಿದರು.

ವರದಿ: ಬಿ.ಕೆ. ಗಣೇಶ್ ರೈ ದುಬಾಯಿ

Comments are closed.