Oman

ಉದ್ಯಮಿ ಹರೀಶ್ ಶೇರಿಗಾರ್ ಅವರ ‘ಆಕ್ಮೆ’ ಸಂಸ್ಥೆಗೆ 25ನೇ ವರ್ಷದ ಸಂಭ್ರಮ: ದುಬೈನಲ್ಲಿ ಅದ್ದೂರಿ ಕಾರ್ಯಕ್ರಮ

Pinterest LinkedIn Tumblr

ದುಬೈ: ಕಳೆದ 25 ವರ್ಷಗಳ ಹಿಂದೆ ಪ್ರಾರಂಭಿಸಿದ ಆಕ್ಮೇ ಸಂಸ್ಥೆ ಇದೀಗಾ ಯುಎಇ ವಿವಿದೆಡೆ ಶಾಖಾ ಕಚೇರಿ ಹೊಂದಿ ವಿಸ್ತಾರವಾಗಿ ಬೆಳೆದಿದ್ದು ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಆಕ್ಮೆ ಸಂಸ್ಥೆಯ ಬೆಳವಣಿಗೆಗೆ ಗ್ರಾಹಕರು, ಪೂರೈಕೆದಾರರು, ಕುಟುಂಬಿಕರು ಕಾರಣ. ಆಕ್ಮೆ ಮೇಲೆ ನಂಬಿಕೆಯಿಟ್ಟ ಎಲ್ಲರಿಗೂ ಅಬಾರಿಯಾಗಿರುತ್ತೇವೆ. ಸಂಸ್ಥೆ ಗಟ್ಟಿಯಾಗಿ ನೆಲೆಗೊಳ್ಳಲು ನಮ್ಮ ತಂಡ ಕುಟುಂಬದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಆಕ್ಮೆ ಸಂಸ್ಥೆಯ ಆಡಳಿತ ನಿರ್ದೇಶಕರಾದ ಹರೀಶ್ ಶೇರಿಗಾರ್ ಹೇಳಿದರು.

ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ ಟ್ರೇಡಿಂಗ್ ಎಲ್‌ಎಲ್‌ಸಿ ಇದರ 25ನೇ ವರ್ಷದ ಅಂಗವಾಗಿ ಶನಿವಾರ ಸಂಜೆ ದುಬೈ ಝುಮೆರಾ ಬಲ್ರೂಮ್ ಮಿಲ್ಲೆನಿಯಮ್ ಫ್ಲಾಜಾ ಡೌನ್‌ಟೌನ್ ಹೋಟೆಲ್‌ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಸಂದರ್ಭ ಶರ್ಮಿಳಾ ಹರೀಶ್ ಶೇರಿಗಾರ್, ಅಕ್ಷತಾ ಶೇರಿಗಾರ್, ಅಂಶುಲ್ ಶೇರಿಗಾರ್ ಇದ್ದರು. ಮುಖ್ಯ ಅತಿಥಿಗಳಾಗಿ ಧರ್ಮಪಾಲ್ ದೇವಾಡಿಗ, ಅಶೋಕ್ ಪುರೋಹಿತ್ ಆಗಮಿಸಿದ್ದರು. ಉದ್ಯಮಿಗಳಾದ ಡಾ. ಬಿ.ಆರ್ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಸರ್ವೋತ್ತಮ ಹೆಗ್ಡೆ ಸಹಿತ ಹರೀಶ್ ಶೇರಿಗಾರ್ ಅವರ ಹಿತೈಷಿಗಳು ಆಗಮಿಸಿ ಶುಭಕೋರಿದರು.

ಇದೇ ಸಂದರ್ಭ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸಲಾಯಿತು. ಸಂಸ್ಥೆಯ ದಿನೇಶ್ ಶೇರಿಗಾರ್, ಬಾಲಕೃಷ್ಣ ಶೆಟ್ಟಿ, ಶರತ್, ರಿತೇಶ್, ಮಧು ಅವರು 25ನೇ ವರ್ಷದ ಸಲುವಾಗಿ ಆಕ್ಮೇ ಲೋಗೋ ಇರುವ ಫಲಕವನ್ನು ಹರೀಶ್ ಶೇರಿಗಾರ್ ಅವರಿಗೆ ನೀಡಿದರು. ಗ್ರಾಹಕರ ಪರವಾಗಿ ಯುನೈಟೆಡ್ ಎಜೆನ್ಸಿಯಿಂದ ವಿಜಯ್ ಮಾತನಾಡಿದರು.

ಅಂಶುಲ್ ಹರೀಶ್ ಶೇರಿಗಾರ್ ಆಕ್ಮೆ ಬೆಳೆದು ಬಂದ ಹಾದಿಯ ಬಗ್ಗೆ ವಿಸ್ತ್ರತವಾಗಿ ತಿಳಿಸಿದರು. ಸೌಜನ್ಯಾ ಹೆಗ್ಡೆ ನಿರೂಪಿಸಿದರು. ಅರ್ಲ್ ಜಾಯ್ ಕಾರ್ಯಕ್ರಮ ನಿರ್ವಹಿಸಿದರು.

ಮನೋರಂಜನಾ ಕಾರ್ಯಕ್ರಮ: ಆಕ್ಮೆ ಸಂಸ್ಥೆಯ 25 ವರ್ಷದ ಸಂಭ್ರಮಾಚರಣೆ ಅಂಗವಾಗಿ ನಡೆದ ಮನೋರಂಜನಾ ಕಾರ್ಯಕ್ರಮ ನೆರೆದವರನ್ನು ರಂಜಿಸಿತು. ಖ್ಯಾತ ಗಾಯಕ ಜಸ್ಕರನ್ ಸಿಂಗ್, ಅನನ್ಯಾ ಪ್ರಕಾಶ್, ಹರೀಶ್ ಶೇರಿಗಾರ್ ಹಾಗೂ ಅಕ್ಷತಾ ಅವರ ಹಾಡುಗಳು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿತು. ರಾಜಗೋಪಾಲ್ ಸಾರಥ್ಯದಲ್ಲಿ ರಾಜೇಶ್ ಭಾಗವತ್, ಪ್ರವೀಣ್ ಷಣ್ಮುಗಂ, ಸಂದೀಪ್ ವಸಿಷ್ಠ, ಸಂಗೀತ್ ಥಾಮಸ್, ವಿನ್ಸೆಂಟ್ ರಾಡಿಗ್ರಸ್ ಅವರ ಹಿನ್ನೆಲೆ ವಾದನ ಝಲಕ್ ಮೋಡಿ ಮಾಡಿತು.

ವರದಿ- ಯೋಗೀಶ್ ಕುಂಭಾಶಿ

Comments are closed.