ಯುಎಇ: ಅರಬ್ ಸಂಯುಕ್ತ ಸಂಸ್ಥಾನದ ರಾಸ್ ಅಲ್ ಖೈಮಾ ಏಮಿರೇಟ್ಸ್ ನಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯೋನ್ಮುಖವಾಗಿರುವ ರಾಕ್ ಕರ್ನಾಟಕ ಸಂಘ ರಾಸ್ ಅಲ್ ಖೈಮಾ ದ ಅಶ್ರಯದಲ್ಲಿ 2024 ನವೆಂಬರ್ 16ನೇ ತಾರೀಕಿನಂದು ರಾಸ್ ಅಲ್ ಖೈಮಾ ಇಂಡಿಯನ್ ಅಸೊಸಿಯೇಶನ್ ಸಭಾಂಗಣದಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಗಲ್ಫ್ ಕರ್ನಾಟಕ ಸೇವಾ ಸಾಧಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆಯಿತು.
ಮಂಗಳೂರಿನ ಬ್ಯಾಂಡ್, ಟೀಂ ಪಿಲಿ ನಲಿಕೆ ಯು.ಎ.ಇ.ಯ ಪ್ರಥಮ ಅಂತರಾಷ್ಟ್ರೀಯ ಹುಲಿವೇಶ ತಂಡದ ಹುಲಿ ವೇಷಧಾರಿಗಳ ಕುಣಿತದೊಂದಿಗೆ, ಸುಮಂಗಲೆಯರು ಪೂರ್ಣ ಕುಂಭ ಕಳಶದೊಂದಿಗೆ ಅತಿಥಿಗಳನ್ನು ಮೆರವಣಿಗೆಯ ಮೂಲಕ ಕರೆ ತರಲಾಯಿತು.
ರಾಸ್ ಅಲ್ ಖೈಮಾ ಇಂಡಿಯನ್ ಅಸೋಸಿಯೇಶನ್ ಅಧ್ಯಕ್ಷರು ಹಾಗೂ ಇಂಡಿಯನ್ ಸ್ಕೂಲ್ ರಾಸ್ ಅಲ್ ಖೈಮಾ ದ ಚೇರ್ಮನ್ ಸೈನುದ್ದಿನ್ ಸಲೀಂ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಕರ್ನಾಟಕ ಸಂಘ ದುಬಾಯಿ ಅಧ್ಯಕ್ಷರಾದ ಶಶಿಧರ ನಾಗರಾಜಪ್ಪ, ಮಸಲಾ ಮತ್ತು ಸೋಶಿಯಲ್ ರೆಸ್ಟೋರೆಂಟ್ ಮಾಲಿಕರಾದ ಜುಲಿಯನ್ ಮತ್ತು ಶರತ್ ಶೆಟ್ಟಿ ಹಾಗೂ ದಿ ಮಾರ್ಕೆಟ್ ಕನೆಕ್ಟ್ ಸಂಸ್ಥೆಯ ಮುಖ್ಯಸ್ಥರಾದ ಸಂದೀಪ್ ಮಥಾಯಸ್ ರಾಕ್ ಕರ್ನಾಟಕ ಸಂಘದ ಅಧ್ಯಕ್ಷರಾದ ಸಂತೋಷ್ ಹೆಗ್ಡೆ, ಉಪಾಧ್ಯಕ್ಷರುಗಳಾದ ರಮೇಶ್ ರಂಗಪ್ಪ ಮತ್ತು ಡಾ. ಲೇಖಾ ತಮ್ಮಯ್ಯ ರವರ ಸಮ್ಮುಖದಲ್ಲಿ ಜ್ಯೋತಿ ಬೆಳಗುವುದರ ಮೂಲಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕöÈತಿ, ಸಮಾಜ ಸೇವೆ, ರಕ್ತದಾನ ಶಿಬಿರಗಳ ಆಯೋಜನೆ ಹಾಗೂ ಇನ್ನಿತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿರುವ ಹಿರಿಯ ಕ್ರಿಯಾತ್ಮಕ ಕಲಾ ನಿರ್ದೇಶಕರು, ಶಿಲ್ಪಿ, ಚಿತ್ರ ಕಲಾವಿದ, ಲೇಖಕರು, ಬರಹಗಾರರು, ಕಾರ್ಯಕ್ರಮ ನಿರೂಪಕರು ಬಿ. ಕೆ. ಗಣೇಶ್ ರೈಯವರಿಗೆ “ಗಲ್ಫ್ ಕರ್ನಾಟಕ ಸೇವಾ ಸಾಧಕ ಪ್ರಶಸ್ತಿ” ಪ್ರಧಾನಿಸಿ ಗೌರವಿಸಲಾಯಿತು.
ಮಹಿಳಾ ವಿಭಾಗದಲ್ಲಿ ಸಾದನೆ ಮಾಡಿರುವ ಶ್ರೀಮತಿ ವಿಪುಲ ಶೆಟ್ಟಿಯವರು ಯೋಗ ತರಭೇತಿ, ವೈವಿಧ್ಯಮಯ ನೃತ್ಯ ಪ್ರಾಕಾರಗಳಲ್ಲಿ ಯುವ ಜನತೆಯಲ್ಲಿ ಜಾಗೃತಿ ಮೂಡಿಸಿಅಪಾರ ಜನ ಮನ್ನಣೆಯನ್ನು ಪಡೆದಿರುವ ನಮಸ್ಥೆ ಯೋಗ ಸಂಸ್ಥೆಯ ಮುಖ್ಯಸ್ಥೆಯಾಗಿರುವ ವಿಪುಲ ಶೆಟ್ಟಿಯವರಿಗೆ “ಗಲ್ಫ್ ಕರ್ನಾಟಕ ಸೇವಾ ಸಾಧಕ ಪ್ರಶಸ್ತಿ” ಪ್ರಧಾನಿಸಿ ಗೌರವಿಸಲಾಯಿತು.
ರಾಸ್ ಅಲ್ ಖೈಮಾ ಕರ್ನಾಟಕ ಸಂಘದ ೬೯ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭಕ್ಕೆ ಮಂಗಳೂರಿನಿಂದ ವಿಶೇಷ ಆಗಮಿಸಿದ್ದ ಗೌರವ ಅತಿಥಿಯಾಗಿ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ರವರಿಗೆ “ವಿಸ್ಮಯ ಜಾದೂ ಸಾಮ್ರಟ್” ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.
ವಿಶಿಷ್ಟ ಶೈಲಿಯ ಜಾದು ಪ್ರದರ್ಶನ, ಟೀಂ ಪಿಲಿ ನಲಿಕೆ ಹುಲಿ ವೇಷ ಕುಣಿತ ಗಿನ್ನೆಸ ದಾಖಲೆ ಪಡೆದಿರುವ ಕಲ್ಲಾರಿ ಪಯ್ಯಟ್ಟು ಪ್ರದರ್ಶನ, ಭರತನಾಟ್ಯ, ಜಾನಪದ ನೃತ್ಯ, ಮಕ್ಕಳ ಸಮೂಹ ನೃತ್ಯ ಶಾರ್ಜಾದ ಸೌಹಾರ್ಧ ಲಹರಿ ತಂಡದ ಸಂಗೀತ ಸಂಜೆ ಸಮಸ್ಥ ಅನಿವಾಸಿ ಕನ್ನಡಿಗರ ಮನ ಸೆಳೆಯಿತು. ಶ್ರೀಮತಿ ಸುಮನಾ ರಾವ್ ಕಾರ್ಯಕ್ರಮ ನಿರೂಪಣೆಯನ್ನು ಮಾಡಿದ್ದರು.
Comments are closed.