Kuwait

43 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಕುವೈತ್‌ ಪ್ರವಾಸ | ನರೇಂದ್ರ ಮೋದಿಗೆ ‘ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ ಗೌರವ

Pinterest LinkedIn Tumblr

ಕುವೈಟ್‌: ಎರಡು ದಿನಗಳ ಅಧಿಕೃತ ಭೇಟಿಗಾಗಿ ಕುವೈಟಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಕುವೈಟ್‌ನ ಅಮೀರ್‌ (ದೊರೆ) ಶೇಖ್ ಮೆಶಾಲ್ ಅಲ್‌ ಅಹ್ಮದ್ ಅಲ್‌ ಜಾಬರ್ ಅಲ್‌ ಸಬಾಹ್ ರವಿವಾರ ಬಯಾನ್ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಕುವೈಟ್‌ನ (ಗಲ್ಫ್‌ ರಾಷ್ಟ್ರದ) ಅತ್ಯುನ್ನತ ನಾಗರಿಕ ಗೌರವವಾದ ‘ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ ನೀಡಿ ಗೌರವಿಸಿದರು.

ಕುವೈಟ್‌ನ ಅತ್ಯುನ್ನತ ಗೌರವವಾದ ‘ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ನ್ನು ಸಾಮಾನ್ಯವಾಗಿ ರಾಷ್ಟ್ರದ ಮುಖ್ಯಸ್ಥರು, ವಿದೇಶಿ ಗಣ್ಯರು ಮತ್ತು ರಾಜಮನೆತನದ ಸದಸ್ಯರಿಗೆ ಸ್ನೇಹದ ಸೂಚಕವಾಗಿ ನೀಡಲಾಗುತ್ತದೆ. ಈ ಮೊದಲು ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್, ಜಾರ್ಜ್ ಬುಷ್, ಯುಕೆ ರಾಜ ಪ್ರಿನ್ಸ್‌ ಚಾರ್ಲ್ಸ್‌ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದರು.
ಪ್ರಧಾನಿ ನರೇಂದ್ರ ಮೋದಿ ಇಲ್ಲಿಯವರೆಗೆ 20ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಗೌರವಗಳಿಗೆ ಪಾತ್ರರಾಗಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸಿದ್ದಕ್ಕಾಗಿ ಪ್ರಧಾನಿ ಮೋದಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ಕುವೈತ್‌ನ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರವಿವಾರ ಪ್ರಧಾನಿ ಮೋದಿ ಕುವೈಟ್‌ ನ ಅತ್ಯುನ್ನತ ಗೌರವ ‘ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ ಸ್ವೀಕರಿಸುವ ಬಯಾನ್ ಅರಮನೆಯಲ್ಲಿ ಗೌರವ ರಕ್ಷೆಗಳ ನೀಡಿ ಸ್ವಾಗತಿಸಲಾಯಿತು. ಬಳಿಕ ಪ್ರಧಾನಿ ಮೋದಿ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಿದರು.

ಕುವೈಟ್‌ನ ಅಮೀರ್ ಶೇಖ್ ಮೆಶಾಲ್ ಅಲ್ ಅಹ್ಮದ್ ಅಲ್ ಜಾಬರ್ ಅಲ್ ಸಬಾಹ್ ಆಹ್ವಾನದ ಮೇರೆಗೆ ಕುವೈಟ್‌ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಕುವೈಟ್‌ ದೊರೆ ಅಲ್ ಖಾಲಿದ್ ಅಲ್ ಸಬಾಹ್ ಮತ್ತು ಕುವೈಟ್‌ ಪ್ರಧಾನಿ ಜೊತೆ ಮಾತುಕತೆ ನಡೆಸಲಿದ್ದಾರೆ. ಕಳೆದ ತಿಂಗಳು, ಪ್ರಧಾನಿ ನರೇಂದ್ರ ಮೋದಿ ಗಯಾನಾ ದೇಶದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ‘ದಿ ಆರ್ಡರ್ ಆಫ್ ಎಕ್ಸಲೆನ್ಸ್’ ಅನ್ನು ಸ್ವೀಕರಿಸಿದ್ದರು.

ಈ ಬಗ್ಗೆ ಪ್ರತಿಕ್ರಿಸಿರುವ ಪ್ರಧಾನಿ ಮೋದಿಯವರು, ‘ಧನ್ಯವಾದಗಳು ಕುವೈತ್! ಈ ಭೇಟಿಯು ಐತಿಹಾಸಿಕವಾಗಿದ್ದು, ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ವೃದ್ಧಿಸಲಿದೆ’ ಎಂದು ಹೇಳಿದ್ದಾರೆ.

‘ಕುವೈತ್ ಸರ್ಕಾರ ಮತ್ತು ಜನರ ಪ್ರೀತಿಗಾಗಿ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ತಮ್ಮನ್ನು ಬೀಳ್ಕೊಡಲು ವಿಮಾನ ನಿಲ್ದಾಣದವರೆಗೂ ಬಂದ ಕುವೈತ್ ಪ್ರಧಾನಿಗೆ ವಿಶೇಷವಾದ ಧನ್ಯವಾದಗಳು’ ಎಂದು ಹೇಳಿದ್ದಾರೆ.

Comments are closed.