ದುಬೈ: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಯುಎಇ ನಲ್ಲಿ ನೆಲೆಸಿರುವ ಕುಂದಗನ್ನಡಿಗರಿಗಾಗಿ ವಿಹಾರ ಕೂಟ ಮತ್ತು ಗ್ರಾಮೀಣ ಆಟೋಟ ಸ್ಪರ್ದೆಗಳು ಭಾನುವಾರ ದುಬಾಯಿನ ಜಬಿಲ್ ಪಾರ್ಕ್ ನಲ್ಲಿ ನಡೆಯಿತು.
ಅನಿವಾಸಿ ಕುಂದಗನ್ನಡಿಗರು ಗಲ್ಫ್ ರಾಷ್ಟ್ರಗಳಲ್ಲಿ ತಮ್ಮ ಭಾಷಿಗರನ್ನು ಒಗ್ಗೂಡಿಸುವುದರ ಜೊತೆಗೆ ಭಾಷೆಯ ಅಸ್ಥಿತ್ವವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಹಲವಾರು ವರ್ಷಗಳಿಂದ ಕೊಲ್ಲಿ ರಾಷ್ಟ್ರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡುಬರುತ್ತಿದೆ. ಅಂತೆಯೇ ಪ್ರತಿ ವರ್ಷದಂತೆ ಈ ವರ್ಷವು ಕೂಡ ವಿಶೇಷ ರೀತಿಯಲ್ಲಿ ಫ್ಯಾಮಿಲಿ ವಿಹಾರ ಕೂಟ ಮತ್ತು ಗ್ರಾಮೀಣ ಆಟೋಟ ಸ್ಫರ್ಧೆಗಳು ಅದ್ದೂರಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಅರಬ್ ನಾಡಿನಲ್ಲಿ ನೆಲೆಸಿರುವ ಕುಂದಗನ್ನಡಿಗರು ಭಾಗವಹಿಸಿದ್ದರು. ಆಟೋಟ ಸ್ಫರ್ಧೆಗಳಿಗೆ ಐದು ತಂಡಗಳಾಗಿ ಮಾಡಲಾಗಿದ್ದು ಪ್ರತೀ ತಂಡಗಳಿಗೆ ಕುಂದಾಪುರದ ವಿಶೇಷತೆಗಳಲ್ಲಿ ಒಂದಾದ ಪಂಚಗಂಗಾವಳಿ ನದಿಗಳಾದ ಸೌರ್ಪಣಿಕ , ವಾರಾಹಿ , ಖೇಟಾ , ಕುಬ್ಜಾ ಮತ್ತು ಚಕ್ರಾ ಎಂದು ಕುಂದಾಪುರದಲ್ಲಿ ಸಂಗವಿಸುವ ಐದು ನದಿಗಳ ಹೆಸರು ನೀಡಲಾಯಿತು.
ಟೀಮ್ ಗ್ರಾಮೀಣ ಆಟೋಟ ಸ್ಫರ್ಧೆಗಳ ಜೊತೆಗೆ ವ್ಯಯಕ್ತಿಕ ಆಟೋಟ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು. ಅದೇ ರೀತಿ ಚಾಂಪಿಯನ್ ಆಗಿ ಮನೋಜ್ ದೇವಾಡಿಗ ನಾಯಕತ್ವದ ವಾರಾಹಿ ತಂಡ ಹೊರಹೊಮ್ಮಿದರೆ ರನ್ನರ್ಸ್ ಆಗಿ ಪ್ರವೀಣ್ ಆಚಾರ್ಯ ನಾಯಕತ್ವದ ಕುಬ್ಜಾ ತಂಡ ಹೊರಹೊಮ್ಮಿತು.
ಕಾರ್ಯಕ್ರಮವನ್ನು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಇದರ ಸ್ಥಾಪಕ ಅಧ್ಯಕ್ಷರಾದ ಸದಾನ್ ದಾಸ್ ಉದ್ಘಾಟಿಸಿದರು. ಸಂಜೆ ವಿಜೇತರಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ವ್ಯವಸ್ಥೆಮಾಡಿದ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಾನ್ ದಾಸ್
ಉಪಾಧ್ಯಕ್ಷ ದಿನೇಶ್ ದೇವಾಡಿಗ, ಕಾರ್ಯದರ್ಶಿ ಸುಧಾಕರ ಪೂಜಾರಿ ಪಡುಕೋಣೆ ,ಕೋಶಾಧಿಕಾರಿ ಸುಜಿತ್ ಕುಮಾರ್ ಶೆಟ್ಟಿ ಕಾಳಾವರ, ಸದಸ್ಯರುಗಳಾದ ವಾಸು ಕುಮಾರ್ ಶೆಟ್ಟಿ , ಮಂಜುನಾಥ ,ಸತೀಶ್ ಹಂಗಳೂರು , ಚಂದ್ರಶೇಖರ ಕೋಡಿ ,ಮನೋಜ್, ವಿಘ್ನೇಶ್ ಕುಂದಾಪುರ ಮತ್ತು ಆಶಾ ಜೊತೆಗಿದ್ದರು.
ಮುಖ್ಯ ಅತಿಥಿಗಳಾಗಿ ಶಿರೂರು ಅಸೋಶಿಯಶನ್ ನ ಅಧ್ಯಕ್ಷರಾದ ಮುನಾಫ್ ಮತ್ತು ಸುರೇಶ್ ಡಿ.ಹೆಚ್.ಎಲ್ ಹಾಗೂ ಜನಾರ್ಧನ ಬಾರಕೂರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರ್ವಹಣೆ ಮತ್ತು ನಿರೂಪಣೆಯನ್ನು ಸಂಘದ ಸದಸ್ಯರಾದ ವಿಘ್ನೇಶ್ ಕುಂದಾಪುರ ಮಾಡಿದರು.
Comments are closed.