UAE

ಪಾಕಿಸ್ತಾನದ ವಿರುದ್ಧ ಗೆದ್ದು ಬೀಗಿದ ಭಾರತ; ಸುಳ್ಳಾಯ್ತು ಐಐಟಿ ಬಾಬಾ ನುಡಿದ ಭವಿಷ್ಯ!

Pinterest LinkedIn Tumblr

 

ಪ್ರಯಾಗ್‌ರಾಜ್‌: ಮಹಾಕುಂಭ ಮೇಳದಲ್ಲಿ ಫೇಮಸ್ ಆಗಿದ್ದ ಐಐಟಿ ಬಾಬಾ ಹೇಳಿದ್ದ ಭಾರತ- ಪಾಕಿಸ್ತಾನ ಪಂದ್ಯದ ಫಲಿತಾಂಶ ಇದೀಗ ಸುಳ್ಳಾಗಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತವನ್ನು ಸೋಲಿಸಲಿದೆ. ಇದೇ ನಿಜ ಎಂದು ಅವರು ಭವಿಷ್ಯ ನುಡಿದಿದ್ದರು. ಅವರ ಈ ಹೇಳಿಕೆ ವೈರಲ್ ಆಗಿತ್ತು. ಆದರೀಗ ಅವರ ಭವಿಷ್ಯವಾಣಿ ಸುಳ್ಳಾಗಿದ್ದು ಸಾರ್ವಜನಿಕ ವಲಯದಲ್ಲಿ ಬಾರೀ ಚರ್ಚೆಗೆ ಗ್ರಾಸವಾಗಿದೆ.

ಹೀಗಾಗಿ ಅವರು ಮತ್ತೆ ಗೂಗಲ್ ನಲ್ಲಿ ಟ್ರೆಂಡ್ ಆಗುತ್ತಿದ್ದಾರೆ. ಹಿಮಾಚಲದಲ್ಲಿ ಶೇ.100, ಹರಿಯಾಣದಲ್ಲಿ ಶೇ.73 ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 71 ರಷ್ಟು ಅವರ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಆಗಿದೆ.

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 6 ವಿಕೆಟ್ ಗಳಿಂದ ಭರ್ಜರಿಯಾಗಿ ಬಗ್ಗು ಬಡಿದಿದೆ. ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದ ವಿರಾಟ್ ಕೊಹ್ಲಿ ಅವರು ಶತಕ ಬಾರಿಸುವ ಮೂಲಕ ಮತ್ತೊಮ್ಮೆ ತಮ್ಮ ಫಾರ್ಮ್‌ ಪ್ರದರ್ಶಿಸಿದ್ದಾರೆ.

ಐಐಟಿ ಬಾಬಾ ಅವರನ್ನು ಭಾರತ, ಪಾಕಿಸ್ತಾನ ಪಂದ್ಯದ ಫಲಿತಾಂಶದ ಬಗ್ಗೆ ಪ್ರಶ್ನಿಸಿದಾಗ ಈ ಬಾರಿ ಭಾರತ ಸೋಲುತ್ತದೆ, ಪಾಕಿಸ್ತಾನವೇ ಗೆಲ್ಲುತ್ತದೆ ಎಂದು ತಿಳಿಸಿದ್ದರು. ಈ ಬಗ್ಗೆ ಇತ್ತೀಚೆಗೆ ಮತ್ತೆ ಪ್ರಶ್ನಿಸಿದಾಗಲೂ ಭಾರತ ಈ ಬಾರಿ ಗೆಲ್ಲುವುದಿಲ್ಲ ಎಂದು ತಿಳಿಸಿದ್ದರು. ಇದರಿಂದಾಗಿ ಭಾರತೀಯ ಕ್ರಿಕೆಟ್ ಆಭಿಮಾನಿಗಳಿಗೆ ಈ ಹೇಳಿಕೆಯಿಂದ ಅಕ್ಷರಶಃ ಆಘಾತ ಆಗಿತ್ತು. ಏಕೆಂದರೆ 2024ರ ಟಿ20 ವಿಶ್ವಕಪ್ ವೇಳೆ ಅವರು ಹೇಳಿದ್ದ ಭವಿಷ್ಯವಾಣಿ ನಿಜವಾಗಿತ್ತು. ಹೀಗಾಗಿಯೇ ಅವರು ಈ ಬಾರಿಯೂ ಹೇಳಿದ ಭವಿಷ್ಯವಾಣಿ ನಿಜವಾಗಲಿದೆ ಎಂದು ಅನೇಕರು ನಂಬಿದ್ದರು. ಆದರೆ ಇದೆಲ್ಲವನ್ನೂ ಮೀರಿ ಭಾರತ ಗೆದ್ದು ಬೀಗಿದ್ದು ಬಾಬಾ ಭವಿಷ್ಯ ಸುಳ್ಳಾಗಿದೆ.

ಯಾರು ಐಐಟಿ ಬಾಬಾ?
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದ್ದ ಕುಂಭಮೇಳದಲ್ಲಿ ಅಚ್ಚರಿಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದ ಸನ್ಯಾಸಿಯೇ ಐಐಟಿ ಬಾಬಾ. ಅವರ ನಿಜನಾಮಧೇಯ ಅಭಯ್ ಸಿಂಗ್. ಅವರು ಬಾಂಬೆ ಐಐಟಿ ಪದವೀಧರ ಎಂಬುದಾಗಿ ತಿಳಿಸಿದ್ದರು. ಮಾತ್ರವಲ್ಲದೇ ಕೆನಡಾದಲ್ಲಿ ದೊಡ್ಡ ವೇತನ ಪಡೆಯತ್ತಿದ್ದು ಆಧ್ಯಾತ್ಮಿಕ ಸಾಧನೆಗಾಗಿ ಅವರು ಹೈ ಪ್ರೊಫೈಲ್ ಜಾಬ್ ಅನ್ನು ತೊರೆದು ಬಂದಿರುವುದಾಗಿ ಹೇಳಿದ್ದರು. ಇದರಿಂದಾಗಿ ಅವರು ಭಾರತಾದ್ಯಂತ ಹೆಸರುವಾಸಿಯಾಗಿದ್ದರು. ಅವರು ಮಾತನಾಡುತ್ತಿದ್ದ ವಿಡಿಯೋಗಳು ವೈರಲ್ ಆಗಿದ್ದವು.

Comments are closed.