ಲಂಡನ್: ಸಂಭೋಗಕ್ರಿಯೆ ನಡೆಸುವಾಗ ಜನರು ದೇವರ ಹೆಸರನ್ನು ಜೋರಾಗಿ ಉಸುರುವುದೇಕೆ ಎಂದು ಯಾವಾಗಲಾದರೂ ಆಶ್ಚರ್ಯಪಟ್ಟಿದ್ದೀರಾ?
ಈಗ ಹೊಸ ಅಧ್ಯಯನದ ಪ್ರಕಾರ ಲೈಂಗಿಕ ಕ್ರಿಯೆಯ ಹಾರ್ಮೋನ್ ಮನುಷ್ಯರನ್ನು ದೈವಕ್ಕೆ ಹೆಚ್ಚು ಸನಿಹಗೊಳಿಸುತ್ತದಂತೆ ಮತ್ತು ಇದು ಪುರುಷರಲ್ಲಿ ತುಸು ಹೆಚ್ಚಾಗಿಯೇ ಆಗುತ್ತದೆ ಎಂದು ಮೆಟ್ರೋ ವರದಿ ಮಾಡಿದೆ.
ಸಂಭೋಗ ಕ್ರಿಯೆಯ ಸಮಯದಲ್ಲಿ ಬಿಡುಡೆಯಾಗುವ ಆಕ್ಸಿಟಾಸಿನ್ ಎಂಬ ಹಾರ್ಮೋನ್ ಬಗ್ಗೆ ಸಂಶೋಧಕರು ಅಧ್ಯಯನ ನಡೆಸಿದ್ದು ಇದು ಸಾಮಾಜಿಕ ಭ್ರಾತೃತ್ವ, ನಂಬಿಕೆ ಮತ್ತು ಮಾನವ ಪ್ರೇಮವನ್ನು ಹೆಚ್ಚಿಸುತ್ತದೆ ಹಾಗು ಇದು ದೇಹದಲ್ಲಿ ಸ್ವಾಭಾವಿಕವಾಗಿ ದಕ್ಕುತ್ತದೆ ಎಂದಿದ್ದಾರೆ.
ಡ್ಯೂಕ್ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆ ಹಚ್ಚಿರುವಂತೆ ಈ ಹಾರ್ಮೋನ್ ಹೆಚ್ಚು ಪ್ರಮಾಣದಲ್ಲಿರುವ ಪುರುಷರು, ಆಧ್ಯಾತ್ಮ ತಮ್ಮ ಜೀವನದಲ್ಲಿ ಅತಿ ಹೆಚ್ಚು ಮುಖ್ಯ ಎಂದು ನಂಬುತ್ತಾರೆ ಹಾಗು ತಮ್ಮ ಜೀವನದ ಅರ್ಥ ಮತ್ತು ಗುರಿಯ ಬಗ್ಗೆ ಧ್ಯಾನ ಹರಿಸುತ್ತಾರೆ ಎನ್ನುತ್ತಾರೆ.
ಸಹ ಸಂಶೋಧಕ ಪ್ಯಾಟಿ ವ್ಯಾನ್ ಚ್ಯಾಪೆಲ್ಲೆನ್ ಪ್ರಕಾರ “ಈ ಹಿಂದಿನ ಅಧ್ಯಯನದಲ್ಲಿ ಆಧ್ಯಾತ್ಮ ಮತ್ತು ಧ್ಯಾನ ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದೆ ಎಂದು ಸಾಬೀತುಪಡಿಸಲಾಗಿತ್ತು” ಎನ್ನುತ್ತಾರೆ.
“ಈ ಹಿಂದೆ ಆಧ್ಯಾತ್ಮ ಮತ್ತು ಧ್ಯಾನ ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದೆ ಎಂದು ಸಾಬೀತುಪಡಿಸಲಾಗಿತ್ತು” ಎಂದು ವಿವರಿಸುವ ಅವರು “ಈಗ ಈ ಆಧ್ಯಾತ್ಮ ಅನುಭವಗಳನ್ನು ನೀಡುವ-ಹೆಚ್ಚಿಸುವ ಜೈವಿಕ ಕ್ರಿಯೆಗಳು ಯಾವುವು ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದೇವೆ” ಎನ್ನುತ್ತಾರೆ.
“ನಮ್ಮ ದೇಹಗಳು ಆಧ್ಯಾತ್ಮ ನಂಬಿಕೆಗಳನ್ನು ಬೆಂಬಲಿಸುವ ರೀತಿಗೂ ಮತ್ತು ಆಕ್ಸಿಟಾಸಿನ್ ಪ್ರಮಾಣಕ್ಕೂ ಸಂಬಂಧವಿದೆ” ಎಂದು ಚ್ಯಾಪೆಲ್ಲೆನ್ ಹೇಳಿದ್ದಾರೆ.
Comments are closed.