ಮೂಲವ್ಯಾಧಿ ಬಂದರೆ ಆಹಾರಕ್ರಮದಿಂದ ಗುಣಪಡಿಸಬಹುದು. ಅದರಲ್ಲೂ ಈ ಕೆಳಗಿನ ಆಹಾರಗಳನ್ನು ಸೇವಿಸಿದರೆ ಮೂಲವ್ಯಾಧಿ ಗುಣಮುಖವಾಗಲು ಸಹಕಾರಿಯಾಗಿದೆ.
* ಲೋಳೆರಸದ ತಿರುಳನ್ನು ಒಂದು ಚಮಚೆಯಷ್ಟನ್ನು ದಿನಕ್ಕೆ ಮೂರು ಬಾರಿ ಸೇವಿಸಬೇಕು. ಜೇನು ಮತ್ತು ಅದರ ಅರ್ಧದಷ್ಟು ಹರಳೆಣ್ಣೆ ಸೇರಿಸಿ ಸೇವಿಸಿದರೆ ಮೂಲವ್ಯಾಧಿ ಉಪಶಮನವಾಗುವುದು. ನಂತರ ಮಲುಗುವ ಮುನ್ನ ಒಂದು ಚಮಚ ಏಲಕ್ಕಿ ಮತ್ತು ಬಾಳೆ ಹಣ್ಣು ತಿನ್ನಬೇಕು.
* ಲೋಳೆಸರದ ತಿರುಳಿಗೆ ಹರಳೆಣ್ಣೆ ಬೆರೆಸಿ ರಾತ್ರಿ ಹೊತ್ತು ಮತ್ತು ಬೆಳಿಗ್ಗೆ ಮಲವಿಸರ್ಜನೆಯ ಮುಂಚೆ ಮತ್ತು ನಂತರದ ಸಮಯದಲ್ಲಿ ಹಚ್ಚಿದರೆ ಮಲವಿಸರ್ಜನೆಗೆ ಕಷ್ಟವಾಗುವುದಿಲ್ಲ. ಇದರಿಂದ ನೋವು ಉಂಟಾಗುವುದಿಲ್ಲ.
* ಮುಟ್ಟಿದರೆ ಮುನಿ (ನಾಚಿಕೆ ಮುಳ್ಳು) ಇಡೀ ಸಸ್ಯವನ್ನು ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿಗೆ ಒಂದು ಚಮಚೆ ಪುಡಿ ಬೆರೆಸಿ ಖಾಲಿ ಹೊಟ್ಟೆಗೆ ದಿನಕ್ಕೆರಡು ಬಾರಿ ಊಟಕ್ಕೆ ಮುಂಚೆ ಸೇವಿಸಬೇಕು.
* ಹಾಲಿನಲ್ಲಿ ಒಣ ಖರ್ಜೂರ / ಉತ್ತುತ್ತಿ ರಾತ್ರಿ ಹೊತ್ತು ನೆನೆಯಿಸಿಟ್ಟು ಬೆಳಿಗ್ಗೆ ತಿನ್ನಬೇಕು ಮತ್ತು ಆ ಹಾಲನ್ನು ಕುಡಿಯಬೇಕು.
* 50 ಮಿಲಿ ಈರುಳ್ಳಿ ರಸವನ್ನು ಸಿಹಿ ಮಜ್ಜಿಗೆಯಲ್ಲಿ ಬೆರೆಸಿ ಊಟದ ನಂತರ ಕುಡಿಯಬೇಕು.
* ಹೊನಗೊನೆ ಸೊಪ್ಪಿನ ರಸ 20 ಮಿಲಿ, ಮೂಲಂಗಿ ಸೊಪ್ಪಿನ ರಸ 20 ಮಿಲಿ ಮತ್ತು ಒಂದು ಚಿಟಿಕೆ ಸೈಂಧವ ಲವಣ ಸೇರಿಸಿ ಪ್ರತಿದಿನ ಎರಡು ಹೊತ್ತು ಎರಡು- ಮೂರು ವಾರ ಕುಡಿಯಬೇಕು.
* ಸುವರ್ಣ ಗೆಡ್ಡೆಯನ್ನು ಹೋಳು ಮಾಡಿ ಒಣಗಿಸಿ ಕುಟ್ಟಿ ಪುಡಿ ಮಾಡಿ ಈ ಪುಡಿಯನ್ನು 5 ಗ್ರಾಂನಷ್ಟನ್ನು ತುಪ್ಪ, ಜೇನುತುಪ್ಪ, ಬೆಲ್ಲ ಯಾವುದಾದರೊಂದರಲ್ಲಿ ಬೆರೆಸಿ ತಿನ್ನಬೇಕು.
* ತುಳಸೀ ಬೀಜದ ಪುಡಿ 10 ಗ್ರಾಂ ಮತ್ತು ಒಂದು ಚಮಚ ಬೆಣ್ಣೆ ಬೆರೆಸಿ ಅದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.
* ಅಳಲೆಕಾಯಿ ಪುಡಿಯನ್ನು ಬೆಲ್ಲ ಸೇರಿಸಿ ತಿನ್ನಬೇಕು.
* 25 ಮಿಲಿ ಮೂಲಂಗಿ ರಸವನ್ನು ಮತ್ತು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು.
* ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು ತುಪ್ಪದಲ್ಲಿ ಹುರಿದು ಅನ್ನದೊಂದಿಗೆ ಸೇವಿಸಬೇಕು.
* ಒಂದು ಚಮಚೆ ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ಸೇವಿಸಬೇಕು.
* ಸೌತೆಕಾಯಿ ರಸ ಮತ್ತು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು.
* 20 ಗ್ರಾಂ ಕೊತ್ತಂಬರಿ ಬೀಜ (ಧನಿಯ)ವನ್ನು ಪುಡಿ ಮಾಡಿ 4 ಲೋಟ ನೀರು ಹಾಕಿ ಕಷಾಯಕ್ಕಿಟ್ಟು ಒಂದು ಲೋಟಕ್ಕಿಳಿಸಿ ಶೋಧಿಸಿ ಹಾಲು, ಸಕ್ಕರೆ ಸೇರಿಸಿ ಪ್ರತಿದಿನ ಎರಡು ಹೊತ್ತು ಸೇವಿಸಬೇಕು.
*ಆಗ ತಾನೇ ಕರೆದ ಹಾಲಿಗೆ ಒಂದು ನಿಂಬೆ ಹಣ್ಣಿನ ರಸ ಸೇರಿಸಿ ದಿನವೂ ಕುಡಿಯುವುದರಿಂದ ಮೂಲವ್ಯಾಧಿ ಗುಣವಾಗುತ್ತದೆ.
* ಮೂಲವ್ಯಾಧಿ ಇರುವವರು ದಿನವೂ ಮಲಗುವ ಮುನ್ನ ಏಲಕ್ಕಿ ಪುಡಿಯೊಂದಿಗೆ ಬಾಳೆಹಣ್ಣನ್ನು ಸೇವಿಸುವುದರಿಂದ ಗುಣವಾಗುತ್ತದೆ.
*ಲೋಳೆಸರದ ರಸವನ್ನು ದಿನಕ್ಕೆ ಮೂರು ಬಾರಿಯಂತೆ ಸೇವಿಸಿ. ಜೇನು ಮತ್ತು ಅದರ ಅರ್ಧದಷ್ಟು ಹರಳೆಣ್ಣೆ ಸೇರಿಸಿ ಸೇವಿಸಿದರೆ ಮೂಲವ್ಯಾಧಿ ಉಪಶಮನವಾಗುವುದು.
*ಮಾವಿನ ಗೊರಟ ಸಂಗ್ರಹಿಸಿ ನೆರಳಲ್ಲಿ ಒಣಗಿಸಿ ಪುಡಿಮಾಡಿ ಇಡುತ್ತಾರೆ. ಈ ಪುಡಿ ಆಯುರ್ವೇದ ಅಂಗಡಿಯಲ್ಲೂ ಸಿಗುತ್ತದೆ. ಅದರ ಪೌಡರ ದಿನಕ್ಕೆ ಎರಡು ಚಮಚೆ ಮುಂಜಾನೆ ಸಂಜೆ ಜೇನಿನೊಡನೆ ಸೇವಿಸಿ.
*ರಕ್ತಸ್ರಾವವಿದ್ದ ಮೂಲವ್ಯಾಧಿಗೆ ನೀರಲ ಹಣ್ಣು ಬಹಳ ಒಳ್ಳೆಯದು.
* ಮೂಲಂಗಿಯನ್ನು ಹೆರೆದು ಮೊಸರಲ್ಲಿ ಕಲಸಿ ಸ್ವಲ್ಪ ಉಪ್ಪು ಹಾಗೂ ನಿಂಬೆರಸ ಬೆರೆಸಿ ಒಗ್ಗರಣೆ ಕೊಟ್ಟರೆ ಬಹಳ ರುಚಿಕರವಾಗಿರುತ್ತದೆ. ಅದು ಮೂಲವ್ಯಾಧಿಗೆ ಬಹಳ ಒಳ್ಳೆಯದು.
*ಹಾಲಿನಲ್ಲಿ ಬೆರಸಿ ಮೂಲಂಗಿಯನ್ನು ಅರೆದು ಪೇಸ್ಟ ಮಾಡಿ ಗುದದ್ವಾರದ ಸುತ್ತಲೂ ಹಚ್ಚಿದರೆ ಬಾವು ಕಡಿಮೆ ಆಗುತ್ತದೆ.
*ಎಂಟು ಗ್ಲಾಸು ನೀರು ದಿನಕ್ಕೆ ಕುಡಿಯುವುದು ಕಡ್ಡಾಯ. ನೀರು ಕಡಿಮೆ ಕುಡಿಯುವವರಿಗೇ ಮಲಬದ್ಧತೆ ಆಗುತ್ತದೆ.
*ಎರಡು ತೊಲೆಯಷ್ಟು ಬಿಲ್ವಪತ್ರದ ರಸವನ್ನು ನಿತ್ಯ ಸೇವಿಸುವುದು.
Comments are closed.