ಆರೋಗ್ಯ

ಹೃದಯ ಆರೋಗ್ಯವಾಗಿರಲು ಆರೋಗ್ಯಕರ ಜೀವನಶೈಲಿ ಇದ್ದರೇ ಮಾತ್ರ ಸಾಧ್ಯ….!

Pinterest LinkedIn Tumblr

healthy_life_heart

 ಹೃದಯದ ಆರೋಗ್ಯ ಕಾಪಾಡಲು ಹಲವು ದಾರಿಗಳಿವೆ. ಹೃದಯ ಚೆನ್ನಾಗಿರಬೇಕು ಎಂದರೆ ಜೀವನ ಶೈಲಿ ಆರೋಗ್ಯಕರವಾಗಿರಬೇಕು. ನಿತ್ಯದ ವ್ಯಾಯಾಮ, ಆರೋಗ್ಯಕರ ಆಹಾರ, ಸೇವನೆ ಅಭ್ಯಾಸಗಳಿಂದ ಹೃದಯದ ಆರೋಗ್ಯ ಕಾಪಾಡಬಹುದು.

ಭಾರತದಲ್ಲಿ ಹೃದ್ರೋಗಗಳಿಗೆ ಸಂಬಂಧಿಸಿದಂತೆ ಕಳೆದ ಹಲವು ವರ್ಷಗಳಿಂದ ಸಮೀಕ್ಷೆಗಳನ್ನು ನಡೆಸುತ್ತ ಬಂದಿರುವ ಸಫೋಲಾಲೈಪ್ ಬಿಡುಗಡೆ ಮಾಡಿರುವ ಸಮೀಕ್ಷೆಯಲ್ಲಿ ಭಾರತದಲ್ಲಿ ಜೀವನ ಶೈಲಿ ಮಟ್ಟ ಶೇಕಡ 68 ರಷ್ಟಿದೆ. ಬೆಂಗಳೂರಿನಲ್ಲಿ ಜೀವನಶೈಲಿ ಮಟ್ಟ ಶೇಕಡ 71 ರಷ್ಟಿದೆ.

ಉತ್ತಮ ಜೀವನಶೈಲಿ ಮಟ್ಟ ಹೊಂದಿರುವವರಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಇದ್ದು ಇವರಲ್ಲಿ ಹೃದಯಿ ಸಂಬಂಧಿ ಸಮಸ್ಯೆಗಳು ಕಂಡು ಬರುವುದಿಲ್ಲ. ಆರೋಗ್ಯಕರ ಜೀವನಶೈಲಿ ಇದ್ದರೇ ಹೃದಯದ ಆರೋಗ್ಯವೂ ಚೆನ್ನಾಗಿರುತ್ತದೆ ಎನ್ನುತ್ತಾರೆ.

ಆರೋಗ್ಯಕರವಾದ ಜೀವನ ಪದ್ಧತಿ, ನಿತ್ಯದ ವ್ಯಾಯಾಮ, ಧೂಮಪಾನ, ಮದ್ಯಪಾನದ ತಂಟೆಗೆ ಹೋಗದೆ ಇರುವುದು ಹೃದಯಕ್ಕೆ ಒಳ್ಳೆಯದು.ಪೌಷ್ಠಿಕ ಆಹಾರ ಸೇವನೆ, ಧಾನ್ಯ, ಹಣ್ಣು-ತರಕಾರಿಗಳ ಸೇವನೆಯಿಂದ ಹೃದಯದ ಆರೋಗ್ಯ ಕಾಪಾಡುಬಹುದು .ಜಂಕ್ ಫುಡ್‌ಗಳಿಂದ ದೂರವಿದ್ದಷ್ಟು ಹೃದಯಕ್ಕೆ ಒಳ್ಳೆಯದು ಎಂಬ ಸಲಹೆ ನೀಡುತ್ತಾರೆ.

ದೇಶದ ಇತರ ನಗರಗಳಿಗೆ ಹೋಲಿಸಿದರೆ ಮನೆಯಿಂದ ಹೊರಗೆ ಆಹಾರ ಸೇವಿಸುವ ಪ್ರಮಾಣ ಜಾಸ್ತಿ. ಹಾಗಾಗಿ ಉತ್ತಮ ಆಹಾರ, ಸಂತಸದ ನಿದ್ದೆ. ಕಾಲಕಾಲಕ್ಕೆ ಆರೋಗ್ಯ ತಪಾಸಣೆಯಿಂದ ಹೃದಯದ ಆರೋಗ್ಯ ಕಾಪಾಡಬಹುದು.

Comments are closed.