ಪಡವಲಕಾಯಿ :
ಪಡವಲಕಾಯಿಯನ್ನು ಶೀತ ಪ್ರವೃತ್ತಿ ಇರುವವರು ಸೇವನೆ ಮಾಡಬಾರದು ಇದು ದೇಹಕ್ಕೆ ಅತ್ಯಂತ ತಂಪು ನೀಡುತ್ತದೆ.
ಚರ್ಮದ ಕಲೆ ಇರುವವರು ಪಡವಲಕಾಯಿಯ ಎಲೆ ಅರೆದು ಸ್ವಲ್ಪ ಅರಿಶಿನ ಪುಡಿ ಬೆರಸಿ ಚರ್ಮದ ಮೇಲೆ ಹಚ್ಚುವುದರಿಂದ ಮೈ ತುರಿಕೆ ಮತ್ತು ಕಲೆ ನಿವಾರಣೆ ಆಗುತ್ತದೆ.
ಈರುಳ್ಳಿ :
ಚೇಳು ಅಥವ ಜೇನು ಹುಳು ಕಚ್ಚಿದ ಸ್ಥಳಕ್ಕೆ ಹಸಿ ಈರುಳ್ಳಿಯ ಸಿಪ್ಪೆ ಸುಲಿದು ಜಜ್ಜಿ ತಿಕ್ಕುವುದರಿಂದ ಶೀಘ್ರವೇ ನೋವು ಕಡಿಮೆಯಾಗುತ್ತದೆ.
ಆಲೂಗಡ್ಡೆ ಬಳಸುವಾಗ ಹೀಗೆ ಮಾಡಿ
ಆಲೂಗಡ್ಡೆಯನ್ನು ಬಳಸುವಾಗ ಸಿಪ್ಪೆ ತೆಗೆದು ಹಾಕದೆ ಬಳಸಬೇಕು, ಸಿಪ್ಪೆ ತೆಗೆದು ಹಾಕಿದರೆ ಪೌಷ್ಠಿಕಾಂಶ ಕಡಿಮೆ ಆಗುತ್ತದೆ, ಪಲ್ಯ ಮಾಡುವಾಗ ಆಲೂಗಡ್ಡೆಯನ್ನು ನೀರಿನಿಂದ ನಾಲ್ಕೈದು ಬಾರಿ ಚೆನ್ನಾಗಿ ತೊಳೆದು ಆಲೂಗಡ್ಡೆಯನ್ನು ಸಣ್ಣ ಹೋಳುಗಳಾಗಿ ಮಾಡಿ ಬೇಯಿಸಿದರೆ ಸಾಕು. ಕಾರಣ ಆಲೂಗಡ್ಡೆ ಸಿಪ್ಪೆಯಲ್ಲಿ ಹೇರಳವಾದ ಖನಿಜಾಂಶ ಜೀವಸತ್ವ ಇರುತ್ತದೆ.
ಜ್ವರಕ್ಕೆ ತುಳಸಿ :
ಒಂದು ಹಿಡಿಯಷ್ಟು ತುಳಸಿ ಜಜ್ಜಿ ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು. ಅದು ಅರ್ಧ ಲೋಟದಷ್ಟು ಆದಮೇಲೆ ಅದಕ್ಕೆ ಬೆಲ್ಲ ಬೆರಸಿ ಪ್ರತಿ ನಾಲ್ಕು ಚಮಚದಂತೆ ದಿನಕ್ಕೆ ಮೂರು ಬಾರಿ ಕುಡಿದರೆ ಜ್ವರ ಗುಣವಾಗುತ್ತದೆ, ಮಕ್ಕಳಿಗೆ ಆದರೆ ಒಂದು ಸಲಕ್ಕೆ ಎರಡು ಚಮಚ ಕುಡಿಸಬೇಕು.
ಹಲ್ಲುನೊವಿಗೆ ಲವಂಗದ ಎಣ್ಣೆ:
ನೋವು ಇರುವ ಹಲ್ಲಿನ ಮೇಲೆ ಲವಂಗದ ಎಣ್ಣೆಯನ್ನು ಹಚ್ಚಿದರೆ ನೋವು ಕಡಿಮೆಯಾಗುತ್ತದೆ..
ಸೀತಾಫಲ:
ಸೀತಾಫಲದಲ್ಲಿ ಅನ್ನಾಂಗಗಳು ಸಮೃದ್ಧಿಯಾಗಿದ್ದು ಸ್ವಲ್ಪ ಪ್ರಮಾಣದಲ್ಲಿ ಕೊಬ್ಬಿನ ಅಂಶವೂ ಅಡಕವಾಗಿದೆ. ಅನ್ನಾಂಗಗಳಾದ ಸಿ, ಬಿ6, ಮೆಗ್ನಿಷಿಯಂ, ಪೊಟಾಷಿಯಂ, ಅಲ್ಪ ಪ್ರಮಾಣದಲ್ಲಿ ಬಿ2, ಶರ್ಕರ ಪಿಷ್ಠಗಳು ದಂಡಿಯಾಗಿವೆ.
ತೆಂಗಿನಕಾಯಿ :
ತೆಂಗಿನಕಾಯಿಯ ನೀರು ಪೊಟ್ಯಾಷಿಯಂ ಅನ್ನು ಉತ್ತಮ ಪ್ರಮಾಣದಲ್ಲಿ ಹೊಂದಿದೆ, ಆದ್ದರಿಂದ ಇದು ದೇಹದ ದ್ರವಗಳಿಗೆ ಎಲೆಕ್ಟ್ರೋಲೈಟ್ ಸಂಯೋಜನೆಯನ್ನು ನೀಡುತ್ತದೆ.
ಕಾಳು ಮೆಣಸು
ಶಮನ : ಅಜೀರ್ಣ, ಮೊಡವೆ, ಜಂತುಹುಳು.
ಮೆಣಸನ್ನು ಚೆನ್ನಾಗಿ ಪುಡಿ ಮಾಡಿ ಶುಂಠಿಯ ರಸದೊಡನೆ ಸೇವಿಸುವುದರಿಂದ ಅಜೀರ್ಣವು ನಿವಾರಣೆಯಾಗುತ್ತದೆ. ಕೆಲವು ಮೆಣಸಿನ ಕಾಳುಗಳನ್ನು ನೀರಿನಲ್ಲಿ ತೇಯ್ದು ಮೊಡವೆಗಳಿರುವ ಜಾಗಕ್ಕೆ ಹಚ್ಚಿದರೆ ವಾಸಿಯಾಗುತ್ತವೆ. ಹೊಟ್ಟೆಯಲ್ಲಿ ಜಂತುಹುಳುಗಳ ಉಪಟಳ ಜಾಸ್ತಿಯಾದಾಗ ಬೆಳಗ್ಗೆ ಮತ್ತು ರಾತ್ರಿ ಮೆಣಸಿನ ಕಷಾಯವನ್ನು ಕುಡಿಯುವುದು ಪರಿಣಾಮಕಾರಿ.
ದಾಳಿಂಬೆ
ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆದು ಸುಟ್ಟ ಗಾಯಗಳಿಗೆ ಲೇಪಿಸುವುದರಿಂದ ಉರಿಶಮನವಾಗುತ್ತದೆ
ದಾಳಿಂಬೆ ಗಿಡದ ಬೇರಿನ ಪುಡಿಯ ಕಷಾಯ ತಯಾರಿಸಿ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಜಂತು ಹುಳು ನಾಶವಾಗುತ್ತವೆ
ದಾಳಿಂಬೆಯ ಚಿಗುರೆಲೆಗಳ ರಸದೊಂದಿಗೆ ಅತ್ತಿಮರದ ಚಿಗುರೆಲೆಗಳ ರಸ ಬೆರೆಸಿ ಮೂಗಿಗೆ ಬಿಡುವುದರಿಂದ ಮೂಗಿನಿಂದಾಗುವ ರಕ್ತಸ್ರಾವ ನಿಲ್ಲುತ್ತದೆ. ವಸಡಿನ ರಕ್ತಸ್ರಾವವನ್ನು ತಡೆಯಲೂ ಇದನ್ನು ಬಳಸಲಾಗುತ್ತದೆ.
ಸಿಹಿ ಆಲೂಗಡ್ಡೆ
ಸಿಹಿ ಆಲೂಗಡ್ಡೆಯಲ್ಲಿರುವ ವಿಟಮಿನ್ ಬಿ6 ಹೃದಯವನ್ನು ಆರೋಗ್ಯಕರವಾಗಿರುಸುವಲ್ಲಿ ಸಹಕಾರಿ. ಹೃದಯಾಘಾತಗಳನ್ನು ತಡೆಗಟ್ಟುವ ರಾಸಾಯನಿಕ ಹೋಮೋಸಿಸ್ಟೀನ್ ಅನ್ನು ಸಿಹಿ ಆಲೂಗಡ್ಡೆ ಕಡಿಮೆ ಮಾಡುತ್ತದೆ.
ಬೆನ್ನು ನೋವಿಗೆ ಬೆಳ್ಳುಳ್ಳಿ ಉತ್ತಮ ಮನೆ ಔಷಧಿ. ಎರಡು ಅಥವಾ ಮೂರು ಕಾಳು ಲವಂಗವನ್ನು ಬೆಳಗ್ಗೆ ಸೇವಿಸಿದರೆ ಉತ್ತಮ. ಬೆಳ್ಳುಳ್ಳಿ ಎಣ್ಣೆಯಿಂದ ಬೆನ್ನು ನೋವಿರುವಲ್ಲಿಗೆ ಹಚ್ಚಿ ಮಸಾಜ್ ಮಾಡಿದರೆ ನೋವು ಬೇಗನೆ ಶಮನವಾಗುವುದು.
ರಕ್ತಹೀನತೆ ಕೊರತೆ ನೀಗಿಸಲು ಇಲ್ಲಿದೆ ಉಪಾಯ :
♦ ನೀರಿನಲ್ಲಿ ನೆನಸಿಟ್ಟ ಒಣ ದ್ರಾಕ್ಷಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
♦ ನಿತ್ಯ ಪಾಲಕ್ ಸೊಪ್ಪಿನ ರಸ ಸೇವಿಸಿ.
♦ ನಿತ್ಯ ಮೂರು ಹೊತ್ತು ಬಾಳೆಹಣ್ಣು ಮತ್ತು ಜೇನುತುಪ್ಪ ಸೇವಿಸಿ.
♦ ನೆಲ್ಲಿಕಾಯಿ ಜ್ಯೂಸ್ ಸೇವಿಸಿ.
♦ ಕ್ಯಾರೆಟ್ , ಬೀಟ್ರೋಟ್ , ಹೆಸರುಕಾಳು ಮತ್ತು ನಿಂಬೆರಸ ಸಲಾಡ್ ಸೇವಿಸಿ.
♦ ಹಸಿ ಬೀಟ್ರೋಟ್ ಅಥವಾ ರಸ ಸೇವಿಸಿ..
Comments are closed.