ಆಧುನಿಕ ಟೆಕ್ನಾಲಜಿಯಿಂದ ನಾವು ಇಂದು ಅದೆಷ್ಟೋ ವೇಗವಾಗಿ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಒಂದು ಕಾಲಕ್ಕಿಂತ ಈಗ ಕೆಲಸದ ವೇಗ ಸಾಕಷ್ಟು ಬೆಳೆದಿದೆ. ನಮ್ಮ ಕೆಲಸದ ವೇಗವನ್ನು ಹೆಚ್ಚಿಸಿದ ಆಧುನಿಕ ಪರಿಕರಗಳಲ್ಲಿ ಸೆಲ್‌ಫೋನ್‌ಗಳು ಸಹ ಇವೆ. ಈ ಫೋನ್‌ಗಳಲ್ಲಿ ನಾವು ಕೆಲಸ ಕಾರ್ಯಗಳನ್ನು ಎಷ್ಟೆಲ್ಲಾ ವೇಗವಾಗಿ ಮಾಡಿಕೊಳ್ಳುತ್ತಿದ್ದೇವೆ ಅಂತ ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಇದರಿಂದ ಬರುವ ರೇಡಿಯೇಶನ್‍ನಿಂದ ನಮಗೆ ಅನೇಕ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಮುಖ್ಯವಾಗಿ ಸೆಲ್‌ಫೋನ್‍ನಿಂದ ಮಾಡುವ ಕರೆಗಳಿಂದ ನಮ್ಮ ಮಿದುಳಿಗೆ ಸಾಕಷ್ಟು ಹಾನಿಯಾಗುತ್ತದೆ. ಬಹಳಷ್ಟು ಮಂದಿ ಬಲ ಅಥವಾ ಎಡ ಕಿವಿ ಬಳಿ ಫೋನನ್ನು ಇಟ್ಟುಕೊಂಡು ಮಾತನಾಡುತ್ತಾರೆ. ಹೇಳಬೇಕೆಂದರೆ ಬಲಗಡೆ ಕಿವಿಯ ಬಳಿ ಫೋನ್ ಇಟ್ಟುಕೊಂಡು ಮಾತನಾಡಬಾರದಂತೆ.
ಎಡ ಕಿವಿ ಬಳಿ ಮಾತ್ರ ಫೋನ್ ಇಟ್ಟುಕೊಂಡು ಮಾತನಾಡಬೇಕಂತೆ. ಯಾಕೆ ಅಂತ ಗೊತ್ತಾ..?
ಫೋನ್ ರಿಂಗಾಗುತ್ತಿದ್ದಂತೆ ಅದನ್ನು ಬಲಗಿವಿಗೆ ಆನಿಸಿಕೊಂಡು ಮಾತನಾಡುವುದು ಬಹಳಷ್ಟು ಮಂದಿಗೆ ಅಭ್ಯಾಸವಾಗಿರುತ್ತದೆ. ಇನ್ನೂ ಕೆಲವರು ಕಿವಿಗೆ ಭುಜಗಳಿಂದ ಹಿಡಿದು ಬೈಕ್ ಅಥವಾ ಕಾರು ಡ್ರೈವ್ ಮಾಡ್ತಾ ಮಾತನಾಡುತ್ತಾರೆ. ಆ ರೀತಿ ಫೋನನ್ನು ಬಲ ಕಿವಿ ಬಳಿ ಇಟ್ಟುಕೊಂಡು ಮಾತನಾಡುವುದರಿಂದ ಫೋನ್‍ನಿಂದ ಹೊರಹೊಮ್ಮುವ ಸಾಧಾರಣ ರೇಡಿಯೇಷನ್ ಮಿದುಳಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದಂತೆ. ಅಷ್ಟೇ ಅಲ್ಲದೆ, ಈ ರೀತಿ ಮಾತನಾಡುವುದರಿಂದ ಕೆಲವರಿಗೆ ಕಿವಿಗಳು ಸರಿಯಾಗಿ ಕೇಳಿಸದೆ ಹೋಗುವ ಸಾಧ್ಯತೆಗಳು ಇವೆಯಂತೆ.
ಬಲ ಕಿವಿ ಬಳಿ ಫೋನ್ ಇಟ್ಟುಕೊಂಡು ಮಾತನಾಡಿದರೆ ಯಾವ ರೀತಿ ಅಡ್ಡಪರಿಣಾಮಗಳು ಆಗುತ್ತವೆ ಎಂಬುದನ್ನು ಕೆಲವರು ವಿಜ್ಞಾನಿಗಳು ಸಂಶೋಧನೆಗಳನ್ನೂ ಮಾಡ್ದಿದ್ದಾರೆ. 20ರಿಂದ 25 ವಯಸ್ಸಿನ ಯುವಕ/ಯುವತಿಯರನ್ನು ಆಯ್ಕೆ ಮಾಡಿಕೊಂಡು ಅವರ ಮೇಲೆ ವಿಜ್ಞಾನಿಗಳು ಪ್ರಯೋಗ ಮಾಡಿದ್ದಾರೆ. ಇದರಿಂದ ಅವರು ಕಂಡುಕೊಂಡಿದ್ದೇನೆಂದರೆ, ಬಲ ಕಿವಿ ಬಳಿ ಫೋನ್ ಇಟ್ಟುಕೊಂಡು ಮಾತನಾಡುವವರ ಆರೋಗ್ಯ, ಇತರರಿಗೆ ಹೋಲಿಸಿದರೆ ತುಂಬಾ ಕ್ಷೀಣಿಸಿತೆಂದು ಗೊತ್ತಾಗಿದೆ.
ಎಡ ಕಿವಿ ಬಳಿ ಫೋನ್ ಇಟ್ಟುಕೊಂಡು ಮಾತನಾಡಿದವರನ್ನು ಪರಿಶೀಲಿಸಿದ ಮೇಲೆ ಅವರ ಆರೋಗ್ಯ ಸ್ವಲ್ಪ ಕ್ಷೀಣಿಸಿತ್ತಾದರೂ, ಬಲ ಕಿವಿಯವರಿಗೆ ಹೋಲಿಸಿದರೆ ಅದು ಕಡಿಮೆ ಎಂದು ಗೊತ್ತಾಯಿತು. ಆದಕಾರಣ ಫೋನ್‌ನಲ್ಲಿ ಮಾತನಾಡಬೇಕಾದರೆ ಎಡ ಗಿವಿ ಬಳಿ ಫೋನ್ ಇಟ್ಟುಕೊಂಡು ಮಾತನಾಡಿದರು ಸ್ವಲ್ಪ ದೂರವಾಗಿ ಪೋನನ್ನು ಇಟ್ಟುಕೊಂಡು ಮಾತನಾಡಿದರೂ ಪರಿಣಾಮ ಇನ್ನೂ ಕಡಿಮೆ ಇರುತ್ತದೆ ಎಂದು ಸದರಿ ವಿಜ್ಞಾನಿಗಳು ಹೇಳುತ್ತಿದ್ದಾರೆ. ಇನ್ನು ಮುಂದೆ ನೀವೂ ಅಷ್ಟೇ ಫೋನಲ್ಲಿ ಮಾತನಾಡಬೇಕಾದರೆ ಮೇಲೆ ಹೇಳಿದಂತೆ ಮಾಡಿ..! ಏನೇ ಆಗಲಿ ನಮ್ಮ ಆರೋಗ್ಯ ಮುಖ್ಯ ಅಲ್ವಾ?
Comments are closed.