ದೇಹಕ್ಕೆ ವಿಶ್ರಾಂತಿ ಪಡೆದುಕೊಳ್ಳಬೇಕೆಂದರೆ ನಿತ್ಯ ನಿದ್ದೆ ಮಾಡಲೇಬೇಕು. ನಿದ್ದೆ ಕಡಿಮೆಯಾದರೂ ಆರೋಗ್ಯ ಹಾಳಾಗುತ್ತದೆ. ಹಾಗೆಂದು 7 ಗಂಟೆಗಿಂತಲೂ ಅಧಿಕ ಹೊತ್ತು ನಿದ್ದೆ ಮಾಡಿದರೂ ಕೂಡ ಆರೋಗ್ಯ ಸಮಸ್ಯೆ ಎದುರಾಗಬಹುದು.
ಬೆನ್ನು ನೋವು ಬರಬಹುದು. ಡಿಪ್ರೆಷನ್ ಕಾಡಬಹುದು. ಹೃದಯ ಸಂಬಂಧಿ ರೋಗ, ಸ್ಟ್ರೋಕ್ ಹಾಗೂ ಡಯಬೀಟಿಸ್ಗೆ ತುತ್ತಾಗಬಹುದು ಎಂದು ಅರಿಜೋನಾ ಮೂಲದ ಯೂನಿವರ್ಸಿಟಿ ಅಧ್ಯಯನವೊಂದು ತಿಳಿಸಿದೆ.
ಸಂಶೋಧನೆಯ ಪ್ರಕಾರ, 7 ಗಂಟೆಯ ಆಸು ಪಾಸು ನಿದ್ರೆ ಮಾಡುವವರಲ್ಲಿ ಆರೋಗ್ಯ ಸಮಸ್ಯೆ ಕಡಿಮೆಯಂತೆ. ಹಾಗಾಗಿ ನಿದ್ದೆಗೆ ಜಾರುವ ಮುನ್ನ ಮೊಬೈಲ್, ಟ್ಯಾಬ್ಲೆಟ್, ಟಿವಿಯನ್ನು ಉಪಯೋಗಿಸದಿದ್ದರೆ ಉತ್ತಮ ಎನ್ನುತ್ತಾರೆ ಎಕ್ಸ್ಪರ್ಟ್ಸ್.
Comments are closed.