ಆರೋಗ್ಯ

ಸುಟ್ಟ ಕಲೆ( ಸನ್ ಬರ್ನ್) ನಿವಾರಣೆಗೆ ನೈಸರ್ಗಿಕ ವಿಧಾನ

Pinterest LinkedIn Tumblr

ಸೂರ್ಯನ ಕಿರಣಗಳು ದೇಹಕ್ಕೆ ಒಳ್ಳೆಯದು ಅದು ಬೆಳಗಿನ ಹೊಂಗಿರಣಗಳು ಮಾತ್ರ, ನಂತರದ ಸೂರ್ಯನ ಕಿರಣಗಳಿಗೆ ತ್ವಚೆಯನ್ನು ಒಡ್ಡುವುದರಿಂದ ಸನ್ ಬರ್ನ್ ಅಥವಾ ಸುಟ್ಟ ಕಲೆಗಳು ಅಥವಾ ತ್ವಚೆಯು ಕಪ್ಪು ಸುತ್ತುಕೊಂಡಂತೆ ಕಾಣುವುದು, ಇದಕ್ಕೆ ಸನ್ ಕ್ರೀಮ್ ಹಚ್ಚಿ ತ್ವಚೆಯನ್ನು ಹಾನಿಮಾಡುವ ಬದಲು ನೈಸರ್ಗಿಕವಾಗಿ ಇದನ್ನು ಗುಣಪಡಿಸಿಕೊಳ್ಳಿ. ಹೆಚ್ಚಿದ ಸೂರ್ಯನ ಕಿರಣಗಳಿಗೆ ತ್ವಚೆಯು ಮೆಲನಿನ್ ಎಂಬ ದ್ರವವನ್ನು ಬಿಡುಗಡೆ ಮಾಡುತ್ತದೆ, ಇದು ನಮ್ಮ ತ್ವಚೆಯ ಹೊರ ಪದರವನ್ನು ಕಪ್ಪು ಸುತ್ತುಕೊಳ್ಳುವಂತೆ ಮಾಡುತ್ತದೆ.

ಇವುಗಳನ್ನು ತಡೆಯಲು ಸುಲಭ ಉಪಾಯಗಳನ್ನು ತಿಳಿಯಲು ಮುಂದೆ ಓದಿ.

೧.ಆಲೂಗಡ್ಡೆ ಪೇಸ್ಟ್
ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು, ಅದನ್ನು ಸಣ್ಣಗೆ ಕತ್ತರಿಸಿ, ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.
ಇದು ಚೆನ್ನಾಗಿ ಪೇಸ್ಟ್ ತರ ಆಗಲು ಸ್ವಲ್ಪ ನೀರನ್ನು ಹಾಕಿಕೊಳ್ಳಿ.
ಇದನ್ನು ಒಂದು ಬಟ್ಟಲಿಗೆ ಹಾಕಿಕೊಂಡು, ಒಂದು ಹತ್ತಿಯನ್ನು ಸಣ್ಣ ಉಂಡೆ ಮಾಡಿಕೊಂಡು ಅದನ್ನು ಆಲೂಗಡ್ಡೆ ಪೇಸ್ಟ್ ನಲ್ಲಿ ಅದ್ದಿ, ತ್ವಚೆಗೆ ಹಚ್ಚಿರಿ.

೨.ಹಾಲು ಪ್ರಯತ್ನಿಸಿದ ಮತ್ತು ಸೂಕ್ತವಾದ ವಸ್ತು
ಹಾಲು ಸನ್ ಬರ್ನ್ ಅನ್ನು ಕಡಿಮೆ ಮಾಡುವ ಜೊತೆಗೆ, ತ್ವಚೆಯ ಉರಿಯೂತ, ನೋವನ್ನು ಕಡಿಮೆ ಮಾಡುತ್ತದೆ ಮತ್ತು ಹೊಳಪನ್ನು ಹೆಚ್ಚಿಸುತ್ತದೆ.
ಹಸುವಿನ ಹಾಲನ್ನು ತ್ವಚೆಗೆ ಹಚ್ಚಿ 10 ನಿಮಿಷಗಳ ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಬೇಗನೆ ಫಲಿತಾಂಶವನ್ನು ಕಾಣಲು ನೀವು ಹಾಲಿಗೆ ಅರಿಶಿಣ ಪುಡಿಯನ್ನು ಸೇರಿಸಿ ಉಪಯೋಗಿಸುವುದು ಉತ್ತಮ.

೩.ಟೊಮೇಟೊ
ಇದು ತ್ವಚೆಯ ಆರೋಗ್ಯ ಕಾಪಾಡಲು ಬೇಕಾದ ಎಲ್ಲಾ ಪೋಷಕಾಂಶಗಳನ್ನು ತನ್ನಲ್ಲಿ ಇರಿಸಿಕೊಂಡಿದೆ, ಜೊತೆಗೆ ಇದು ಒಡಕು ಚರ್ಮವನ್ನು ಮತ್ತು ಸತ್ತ ಚರ್ಮವನ್ನು ತೆಗೆದು ಹೊಸ ಚರ್ಮವನ್ನು ಬೆಳೆಯುವಂತೆ ಮಾಡುತ್ತದೆ.
ನೀವು ಮಾಡಬೇಕಾಗಿರುವುದು
ಟೊಮ್ಯಾಟೊವನ್ನು ಕತ್ತರಿಸಿ ರಸವನ್ನು ಒಂದು ಬಟ್ಟಲಿಗೆ ಹಾಕಿರಿ.
ಕತ್ತರಿಸಿದ ತುಂಡನ್ನು ತೆಗೆದುಕೊಂಡು ತ್ವಚೆಗೆ ಉಜ್ಜಿಕೊಳ್ಳಿ.
5 ನಿಮಿಷದ ನಂತರ ನೀರಿನಿಂದ ತೊಳೆದುಕೊಳ್ಳಿ.
ಸಂಜೆ ಅಥವಾ ಬಿಡುವಿನ ಸಮಯದಲ್ಲಿ ಇದರ ರಸವನ್ನು ತ್ವಚೆಗೆ ಹಚ್ಚಿ, ಸ್ವಲ್ಪ ಸಮಯದ ನಂತರ ತೊಳೆದುಕೊಳ್ಳಿ.

೪.ಬೇಕಿಂಗ್ ಸೋಡಾ
ಇದರಲ್ಲಿ ಕಾರ್ಬನ್ ಡೈಆಕ್ಸೈಡ್ ಇರುವುದು ತ್ವಚೆಯ ಉರಿಯನ್ನು, ನವೆಯನ್ನು ಮತ್ತು ನೋವನ್ನು ಶಮನ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದನ್ನು ನಿಂಬೆಹಣ್ಣಿನ ಜೊತೆ ಉಪಯೋಗಿಸುವುದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ನಿಂಬೆಹಣ್ಣಿನ ರಸವನ್ನು ಒಂದು ಲೋಟ ಅಥವಾ ಪುಟ್ಟ ಬಟ್ಟಲಿಗೆ ಹಾಕಿರಿ.
ಇದಕ್ಕೆ ಬೇಕಿಂಗ್ ಸೋಡಾವನ್ನು ಹಾಕಿರಿ.
ಸೋಡಾ ಕರಗುವವರೆಗೆ ರಸವನ್ನು ಚೆನ್ನಾಗಿ ಕಲಸಿರಿ.

ಇದನ್ನು ತ್ವಚೆಗೆ ಹಚ್ಚಿರಿ. ಇದನ್ನು ನಿಯಮಿತವಾಗಿ ಮಿತವಾಗಿ ಮಾಡಿ, ಹೆಚ್ಚು ಮಾಡುವುದರಿಂದ ತ್ವಚೆಯಲ್ಲಿ ಸುಟ್ಟ ಕಲೆಗಳಾಗುವ ಸಾಧ್ಯತೆಗಳಿವೆ.

Comments are closed.