ಬೆಂಗಳೂರು : ತಲೆಹೊಟ್ಟು ಎಲ್ಲರಿಗೂ ಇರುವ ಒಂದು ಸಾಮಾನ್ಯ ಸಮಸ್ಯೆ. ಇದು ಧೂಳಿನಿಂದಾಗಿ, ಕೂದಲಿನಲ್ಲಿ ತೇವಾಂಶ ಕಡಿಮೆಯಾಗುವುದರಿಂದ ತಲೆಯಲ್ಲಿ ಹೊಟ್ಟು ಆಗುತ್ತದೆ. ಇದಕ್ಕೆ ಕೆಲವು ಮನೆಮದ್ದುಗಳಿವೆ. ಅದರಿಂದ ತಲೆಹೊಟ್ಟನ್ನು ನಿವಾರಿಸಬಹುದು.
ಮೊದಲಿಗೆ 2 ಚಮಚ ಕೊಬ್ಬರಿ ಎಣ್ಣೆಗೆ, 1 ಚಮಚ ನಿಂಬೆರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಗ ಅದು ಪೇಸ್ಟ್ ಹದಕ್ಕೆ ಬರುತ್ತೆ. ನಂತರ ಅದನ್ನುಕೂದಲಿಗೆ ಹಚ್ಚಿ ರಾತ್ರಿಯಿಡಿ ಹಾಗೆ ಇಟ್ಟು ಬೆಳಿಗ್ಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಹೀಗೆ ವಾರದಲ್ಲಿ 2 ಅಥವಾ 3 ಬಾರಿ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.
ಅಲೋವೆರ ಜೆಲ್ ನ್ನು 1 ದೊಡ್ಡ ಚಮಚದಲ್ಲಿ ತೆಗೆದುಕೊಂಡು ಅದಕ್ಕೆ ಮೆಂತ್ಯ 1 ಚಮಚ ಮಿಕ್ಸ್ ಮಾಡಿ ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿ 1 ಗಂಟೆ ಬಿಟ್ಟು ಬಿಸಿ ನೀರಿನಲ್ಲಿ ಸ್ನಾನಮಾಡಿ. ಇದರಿಂದಲೂ ತಲೆಹೊಟ್ಟು ಕಡಿಮೆಯಾಗುತ್ತದೆ.
Comments are closed.